Site icon Vistara News

Actress Chandrika Saha: 15 ತಿಂಗಳ ಮಗನನ್ನು ನೆಲಕ್ಕೆ ಬಡಿದು ಗಾಯಗೊಳಿಸಿದ ಪಾಪಿ ತಂದೆ: ದೂರು ದಾಖಲಿಸಿದ ಕಿರುತೆರೆ ನಟಿ

Actress Chandrika Saha husband booked for banging 15-month Child

ಮುಂಬೈ: ʻಅದಾಲತ್‌ʼನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟಿ ಚಂದ್ರಿಕಾ ಸಹಾ (Actress Chandrika Saha) ಪತಿ 15 ತಿಂಗಳ ಮಗನನ್ನು ನೆಲಕ್ಕೆ ಬಡಿದು ಗಾಯಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಟಿ ಅಡುಗೆ ಮನೆಯಲ್ಲಿ ಇದ್ದಾಗ ಮಗುವನ್ನು ಪತಿ ಅಮನ್ ಮಿಶ್ರಾ ತಮ್ಮ ಮಲಗುವ ಕೋಣೆಯ ನೆಲಕ್ಕೆ ಮೂರು ಬಾರಿ ಬಡಿದು ಗಾಯಗೊಳಿಸಿದ್ದಾನೆ. ಇದೀಗ ಬಂಗೂರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮಗು ಮಲಾಡ್ ಪಶ್ಚಿಮದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಬಂಗೂರ್ ನಗರ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ದೂರುದಾರರಾದ ಚಂದ್ರಿಕಾ ಸಹಾ(41) ಅವರು ʻಅದಾಲತ್‌ʼ, ಸಿ.ಐ.ಡಿ. ಮತ್ತು ಸಾವಧಾನ್ ಇಂಡಿಯಾ: ಕ್ರೈಮ್ ಅಲರ್ಟ್‌ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಗು ಮಲಗುವ ಕೋಣೆಯಲ್ಲಿ ಅಳುತ್ತಿರುವುದನ್ನು ಹಾಗೂ ಮೈಯಲ್ಲಿ ಗಾಯದ ಗುರುತುಗಳು ಕಂಡು ನಟಿ ಸಿಸಿಟಿವಿ ಪರಿಸೀಲಿಸಿದಾಗ ಗೊತ್ತಾಗಿದೆ. ಮಿಶ್ರಾ ಮಗುವನ್ನು ನೆಲಕ್ಕೆ ಮೂರು ಬಾರಿ ಬಡಿದುದ್ದನ್ನು ಕಂಡ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಮಗು ಚೇತರಿಸಿಕೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Aishwarya Shindogi: ಕಿರುತೆರೆಗೆ ಐಶ್ವರ್ಯಾ ಶಿಂಧೋಗಿ ರೀ-ಎಂಟ್ರಿ

ದೂರಿನಲ್ಲಿ ನಟಿ ʻತನ್ನ ಪತಿ ಅಮನ್ ಮಿಶ್ರಾ (21) ಅವರಿಗೆ ಮಗು ಇಷ್ಟವರಲಿಲ್ಲʼʼಎಂದು ಹೇಳಿಕೆ ನೀಡಿದ್ದಾರೆ. 2020ರಲ್ಲಿಯೇ ದಂಪತಿ ವಿಚ್ಛೇದನ ಪಡೆದಿದ್ದರು. ಅದಾಗಲೇ ನಟಿ ಗರ್ಭಿಣಿ ಎಂದು ತಿಳಿದಾಗ, ಪತಿ ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದರು. ಆದರೆ, ವೈದ್ಯರು ಇದಕ್ಕೆ ಒಪ್ಪದ ಕಾರಣ ಅಲ್ಲಿಗೆ ಸುಮ್ಮನಾಗಿದ್ದರು. ಈ ಬಗ್ಗೆ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Exit mobile version