Site icon Vistara News

Bellulli Kabab Chandru: ನಟಿ ಮಾಲಾಶ್ರೀ ಮೇಕಪ್ ಮ್ಯಾನ್ ಆಗಿದ್ರಂತೆ `ಬೆಳ್ಳುಳ್ಳಿ ಕಬಾಬ್‌ ಚಂದ್ರು’!

Actress Malashree as make-up man Bellulli Kebab Chandru

ಬೆಂಗಳೂರು: `ರಾಹುಲ್ಲಾ.. ರಾಹುಲ್ಲಾ.. ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾ.. ರಾಹುಲ್ಲಾ ರುಬ್ಬಿ ರುಬ್ಬಿ ಕೊಡಪ್ಪಾ’.. ಹಿಂಗೆ ನೀವು ಯುಟ್ಯೂಬ್ ಓಪನ್ ಮಾಡಿದ ತಕ್ಷಣ ನೆನಪಾಗೋದು ಬೆಳ್ಳುಳ್ಳಿ ಕಬಾಬ್‌ ಚಂದ್ರು’ ಅವರು. ಸಾಂಬರ್, ರಸಂ, ಚಾಪ್ಸ್‌ ಮತ್ತು ಡ್ರೈ ಐಟಂ ಮಾಡುವುದರಲ್ಲಿ ಚಂದ್ರು ಸಖತ್ ಫೇಮಸ್‌. ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ವೈರಲ್ ಆಗುತ್ತಿದೆ. ಏನೆಂದರೆ ಕನ್ನಡ ಚಿತ್ರರಂಗದಲ್ಲಿ ಇವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎಂದು. ಕನಸಿನ ರಾಣಿ ನಟಿ ಮಾಲಾಶ್ರೀಗೆ ಮೇಕಪ್ ಮ್ಯಾನ್ ಆಗಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಬೆಳ್ಳುಳ್ಳಿ ಕಬಾಬ್‌ ಚಂದ್ರು ಅಧಿಕೃತವಾಗಿ ಹೇಳಿಕೊಂಡಿಲ್ಲ.

ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆ ಮತ್ತು ಶಿವಾನಂದ ಸರ್ಕಲ್ ಬಳಿ ಇರುವ ಹೋಟೆಲ್‌ನಲ್ಲಿ ಚಂದ್ರು ಕನ್ನಡ ಚಿತ್ರರಂಗದ ಖ್ಯಾತ ನಟರ ಜತೆಗೆ ಸೆರೆ ಹಿಡಿದಿರುವ ಫೋಟೋಗಳನ್ನು ನೋಡಬಹುದು. ಬಹಳ ವರ್ಷಗಳ ಹಿಂದೆ ನಟ-ನಟಿಯರು ಚಂದ್ರು ಹೋಟೆಲ್‌ಗೆ ಬಂದು ಅಡುಗೆ ಮಾಡಿ ರುಚಿ ನೋಡಿ ಸೂಪರ್ ಎಂದಿದ್ದಾರೆ ಅಂತೆ. ಈಗಾಗಲೇ  ಚಂದ್ರು (Bombat Bhojana) ಅವರು ʻಬೊಂಬಾಟ್ ಭೋಜನʼ ಅಡುಗೆ ಮನೆಯಲ್ಲಿ ಘಮ ಘಮಿಸಿದ ಮೆಂತೆ ಪಲಾವ್ ಮಾಡಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ತಮಗಿದ್ದ ನಂಟಿನ ಬಗ್ಗೆ ಮಾತನಾಡಿದ್ದಾರೆ. ಮೊದಲು ಮೇಕಪ್‌ ಮ್ಯಾನ್‌ ಆಗಿದ್ದ ಚಂದ್ರು ಹೋಟೆಲ್‌ ಉದ್ಯಮಕ್ಕೆ ಹೇಗೆ ಬಂದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Bombat Bhojana: ರಾಹುಲಾ ಅಲ್ಲಾಡ್ಸಪ್ಪ; ʻಬೊಂಬಾಟ್ ಭೋಜನʼದಲ್ಲಿ ಬೆಳ್ಳುಳ್ಳಿ ಕಬಾಬ್‌ ಚಂದ್ರು!

ಚಂದ್ರು ಅವರು ತಮ್ಮ ಹೋಟೆಲ್‌ನಲ್ಲಿ ಅಡುಗೆ ಮಾಡಿ ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಶೂಟ್ ಮಾಡಿಕೊಡುತ್ತಾರೆ. ಚಂದ್ರು ಅವರು ಮಾತನಾಡುವ ಶೈಲಿ ವಿಶಿಷ್ಟ. ಇದಕ್ಕೆ ಅದೆಷ್ಟೋ ಫ್ಯಾನ್ಸ್‌ ಚಂದ್ರುಗೆ ಫಿದಾ ಆಗಿದ್ದಾರೆ. ಪ್ರತಿ ವಿಡಿಯೊ ಕೊನೆಯಲ್ಲಿ ಚಂದ್ರು ಅವರು ಹೇಳುವ ʻಬರ್ತಾ ಇರೋದ್‌, ತಿಂತಾ ಇರೋದೇʼಎನ್ನುವ ಮಾತು ಬಹಳ ಫೆಮಸ್‌ ಎಂದರೆ ತಪ್ಪಿಲ್ಲ.

ಟ್ರೋಲ್‌ಗಳ ಬಗ್ಗೆ ಗರಂ ಆಗಿದ್ದ ಚಂದ್ರು!

`ರಾಹುಲ್ಲಾ.. ರಾಹುಲ್ಲಾ.. ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾʼ ಟ್ರೋಲ್‌ಗೆ ಗುರಿಯಾಗಿತ್ತು. ಈ ಬಗ್ಗೆ ಚಂದ್ರು ಅವರು ಗರಂ ಆಗಿದ್ದರು. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಲು ನೌಕರರು ಸಿಗದೇ ಇದ್ದಾಗ ಈ ಹುಡುಗ ರಾಹುಲ್ಲಾ ಜತೆಯಾಗಿ ನಿಂತಿದ್ದನಂತೆ. ಟ್ರೋಲ್ ಮಾಡುವವರು ಮಾಡಲಿ, ಆದರೆ ಒಳ್ಳೆಯ ರೀತಿಯಾಗಿ ಟ್ರೋಲ್ ಮಾಡಿ ಎಂದು ಚಂದ್ರು ಅವರು ಹೇಳುತ್ತಾರೆ. ಆದರೆ ಕೆಟ್ಟ ಕೆಟ್ಟ ಪದ ಬಳಕೆ ಮಾಡುತ್ತಾ ಟ್ರೋಲ್ ಮಾಡಿದರೆ ಅದನ್ನ ದೇವರು ಮೆಚ್ಚುವುದಿಲ್ಲ ಎಂದು ಈ ಮುಂಚೆ ಆಕ್ರೋಶ ಹೊರಹಾಕಿದ್ದರು.

Exit mobile version