Site icon Vistara News

Actress Padmini: ಆಟೋ ಚಾರ್ಜ್ ಕೊಡದೆ ಚಾಲಕನ ಜತೆ ʻಪುನರ್ ವಿವಾಹʼ ಧಾರಾವಾಹಿ ನಟಿ ಪದ್ಮಿನಿ ಕಿರಿಕ್!

Actress Padmini

ಬೆಂಗಳೂರು; `ಪುನರ್ ​ವಿವಾಹ’ ಧಾರಾವಾಹಿ ನಟಿ ಪದ್ಮಿನಿ (Actress Padmini) ಆಟೋ ಚಾಕನೊಂದಿಗೆ ಗಲಾಟೆ ಮಾಡಿಕೊಂಡು ಹಣ ನೀಡದೇ ಅರ್ಧ ದಾರಿಯಲ್ಲಿ ಇಳಿದು ಹೋಗಿ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆಟೋ ಡ್ರೈವರ್‌ ವಿಡಿಯೊ ಕೂಡ ಮಾಡಿಕೊಂಡಿದ್ದು, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಟಿಯ ಈ ನಡವಳಿಕೆಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮಲ್ಲೇಶ್ವರದ ಮಾರ್ಗೋಸ ರಸ್ತೆಯಿಂದ ಬನಶಂಕರಿಗೆ ಆಟೋ ಬುಕ್ ಮಾಡಿದ್ದ ಪದ್ಮಿನಿ ಅವರು, ಬನಶಂಕರಿ ಬಳಿ ತಲುಪಿದ ಬಳಿಕ ಚಾಲಕ ಕುಲ್ದೀಪ್ ಬಳಿ ಕಿರಿಕ್ ಮಾಡಿಕೊಂಡಿದ್ದಾರೆ. ಅನವಶ್ಯಕ ವಾಗ್ವಾದ ಮಾಡಿದ್ದಲ್ಲದೆ, ಆಟೋ ಶುಲ್ಕ 437 ರೂಪಾಯಿ ನೀಡದೆ ಹೋಗಿದ್ದಾರೆ. ಆಟೋದಲ್ಲಿ ಬನಶಂಕರಿಗೆ ಹೋಗುವಾಗ ದಾರಿಯಲ್ಲಿ ತುಸು ಟ್ರಾಫಿಕ್ ಎದುರಾಗಿದೆ. ಇದರಿಂದ ಬೇರೆ ದಾರಿಯಲ್ಲಿ ಹೋಗಬೇಕಿತ್ತು ಎಂದು ನಟಿ ಆಟೋ ಚಾಲಕನ ಜತೆ ವಾಗ್ವಾದಕ್ಕೆ ಇಳಿದು ಬೇರೆ ಆಟೋ ಹತ್ತಿದ್ದಾರೆ.

ಇದನ್ನೂ ಓದಿ: Sathya Serial Kannada: ಸತ್ಯ ಧಾರಾವಾಹಿ ಖ್ಯಾತಿಯ ರಕ್ಷಿತಾ ʻಎದೆ ತುಂಬಿ ಹಾಡುವೆನುʼ ವಿನ್ನರ್‌!

ಆಟೋ ಚಾಲಕನಿಗೆ ನಟಿ 437 ರೂಪಾಯಿಯನ್ನು ನೀಡಬೇಕಿತ್ತು. ಚಾಲಕ ಕೇಳಿದ್ದಕ್ಕೆ ನಟಿ ಕೂಗಾಡಿದ್ದು, ಆಟೋ ಚಾಲಕನ ವಿರುದ್ಧ ಊಬರ್​ನಲ್ಲಿ ದೂರು ದಾಖಲಿಸಿದ್ದಾರೆ. ಚಾಲಕ ಕುಲ್ದೀಪ್ 437 ರೂಪಾಯಿ ಲಾಸ್ ಮಾಡಿಕೊಂಡಿದ್ದು ಅಲ್ಲದೇ ದುರ್ನಡತೆ ಆರೋಪದ ಮೇಲೆ ಉಬರ್‌ನವರು ತಾತ್ಕಾಲಿಕವಾಗಿ ಅವರ ಕರ್ತವ್ಯಕ್ಕೆ ನಿರ್ಬಂಧ ಹಾಕಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದ್ದು, ನಟಿಯ ಈ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

Exit mobile version