ಬೆಂಗಳೂರು : ʻಅಮೃತವರ್ಷಿಣಿʼ ಧಾರಾವಾಹಿ ಖ್ಯಾತಿಯ ನಟಿ ರಜಿನಿ (Actress Rajini) ವೈಯಕ್ತಿಕ ವಿಚಾರಕ್ಕಾಗಿ ಸುದ್ದಿಯಲ್ಲಿದ್ದಾರೆ. ಧಾರಾವಾಹಿ ಮೂಲಕ ಸಾಕಷ್ಟು ಜನಮನಗೆದ್ದ ರಜಿನಿ ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋದಲ್ಲಿ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಶೋ ವೇಳೆಯಲ್ಲಿ ಫ್ಯಾನ್ಸ್ಗೆ ಸಿಹಿ ಸುದ್ದಿ ನೀಡಿದ್ದಾರೆ.
ʻಹಿಟ್ಲರ್ ಕಲ್ಯಾಣ್ʼ ಧಾರಾವಾಹಿಯಲ್ಲಿ ನಟಿ ರಜಿನಿ ಕಾಣಿಸಿಕೊಂಡಿದ್ದರು. ಅಂತರ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಪಾತ್ರದ ಮೂಲಕ ಮನೆಮಾತಾಗಿದ್ದ ರಜನಿ ಅವರಿಗೆ ವೇದಿಕೆಯಲ್ಲಿ ಧಾರಾವಾಹಿಯಲ್ಲಿ ಎಜೆ ಅಂತರಳನ್ನು ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ಕೇಳಿದಾಗ, ಇದಕ್ಕೆ ಉತ್ತರಿಸಿರುವ ನಟಿ ರಜಿನಿ ಹೌದು ಎಂದಿದ್ದಾರೆ. ಇದೀಗ ರಜಿನಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಜಿನಿ ಈ ಮೂಲಕ ತಮ್ಮ ಪ್ರೀತಿಯ ಗುಟ್ಟನ್ನು ಬಹಿರಂಗಪಡಿಸಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Actress Jayasudha | 64ನೇ ವಯಸ್ಸಿಗೆ ಉದ್ಯಮಿ ಜತೆ ಮದುವೆಯಾದ ನಟಿ ಜಯಸುಧಾ?
ಮಜಾ ಟಾಕೀಸ್, ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್, ಹೀಗೆ ಹಲವು ರಿಯಾಲಿಟಿಟ ಶೋಗಳಲ್ಲಿ ರಜಿನಿ ಕಾಣಿಸಿಕೊಂಡಿದ್ದಾರೆ. ರಜಿನಿ ಅವರ ಮೊದಲ ಕನ್ನಡ ಸಿನಿಮಾ ʻಅಂಬುಜʼ ತೆರೆ ಕಂಡಿದೆ. ಸ್ಟಾರ್ ಸುವರ್ಣದ ಹೊಸ ಧಾರಾವಾಹಿ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ ರಜಿನಿ. ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯವನ್ನೂ ರಜಿನಿ ಅವರು ಕರಗತ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | Athiya Shetty | ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್ ರಾಹುಲ್ ಮದುವೆ ಡೇಟ್ ಫಿಕ್ಸ್!