Site icon Vistara News

Actress Rajini: ʻನಿಮ್ಮ ಆ್ಯಕ್ಟಿಂಗ್‌ ಓವರ್‌ʼ ಅಂದಿದಕ್ಕೆ ʻಅಮೃತ ವರ್ಷಿಣಿʼ ಖ್ಯಾತಿಯ ನಟಿ ರಜಿನಿ ಗರಂ!

Actress Rajini In saree

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ `ಅಮೃತ ವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯ (amruthavarshini serial Fame rajini) ಪಡೆದ ರಜಿನಿ (Actress Rajini) ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಮೃತಾ (Serial artist Rajini) ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಆಗಾಗ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಹಾಕಿಕೊಳ್ಳುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳ ಪ್ರಶ್ನೆಗೆ ಉತ್ತರವನ್ನೂ ನೀಡುತ್ತಿರುತ್ತಾರೆ. ಆದರೆ ಇದೀಗ ನೆಟ್ಟಿಗರೊಬ್ಬರು ನಿಮ್ಮ ಆ್ಯಕ್ಟಿಂಗ್‌ ಓವರ್‌ ಆಗಿದೆ ಎಂದು ಹೇಳಿದ್ದಕ್ಕೆ ನಟಿ ಖಡಕ್‌ ಉತ್ತರವನ್ನು (Rajini Post) ಕೊಟ್ಟಿದ್ದಾರೆ.

ರಜಿನಿ ಧಾರಾವಾಹಿಯಲ್ಲದೇ ʻಅಂಬುಜಾʼ (Rajini ambuja cinema) ಸಿನಿಮಾದಲ್ಲಿಯೂ ನಟಿಸಿ ಸೈ ಎನೆಸಿಕೊಂಡಿದ್ದಾರೆ. ಸುಮಾರು 20ರಿಂದ 25 ಕೆಜಿ ತೂಕದ ಆ ಕಾಸ್ಟ್ಯೂಮ್ ತೊಟ್ಟು ಪರ್ಫಾಮ್ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟಿಯ ಬಗ್ಗೆ ನೆಟ್ಟಿಗರೊಬ್ಬರು ʻʻನಿಮ್ಮ ಆ್ಯಕ್ಟಿಂಗ್‌ ಓವರ್‌ ಆಗಿದೆ ʼʼಎಂದು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ನಟಿ ಪ್ರತಿಕ್ರಿಯಿಸಿ ʻʻನಿರ್ದೇಶಕರು ಏನು ಹೇಳುತ್ತಾರೋ ಅದನ್ನು ಮಾಡುತ್ತಿರುವೆ. ನೀವು ನಿರ್ದೇಶಕರಾದರೆ ನೀವು ಹೇಳಿದಂತೆ ಮಾಡುವೆʼʼ ಎಂದು ತಿರುಗೇಟು ನೀಡಿದ್ದಾರೆ. ನಟಿಯ ಈ ಪ್ರತಿಕ್ರಿಯೆ ಬಗ್ಗೆ ಪರ ವಿರೋಧಗಳು ಚರ್ಚೆಯಾಗಿವೆ.

ಇದನ್ನೂ ಓದಿ: Rajinikanth: ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಪ್ರತಿಮೆ ದರ್ಶನ ಪಡೆದ ತಲೈವಾ ರಜಿನಿಕಾಂತ್

‘ಆತ್ಮ ಬಂಧನ’ ಧಾರಾವಾಹಿಯಲ್ಲಿ ನಟಿಸಿದರು. ಭಿನ್ನ ಪಾತ್ರಗಳನ್ನೇ ಆರಿಸಿಕೊಳ್ಳುತ್ತಿದ್ದ ರಜಿನಿ ಅವರಿಗೆ ಅವಕಾಶಗಳು ಕಡಿಮೆಯಾದವು. ನಂತರದ ದಿನಗಳಲ್ಲಿ ಕೆಲ ರಿಯಾಲಿಟಿ ಶೋಗಳಲ್ಲಿ ರಜಿನಿ ಕಾಣಿಸಿಕೊಂಡರು. ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್ಸ್, ಮಜಾ ಟಾಕೀಸ್, ಕುಕ್ಕರಿ ಶೋಗಳಲ್ಲಿ ಭಾಗವಹಿಸಿದ್ದರು. ಕುಕ್ಕರಿ ಶೋ ಒಂದನ್ನು ರಜಿನಿ ಅವರೇ ಹೋಸ್ಟ್ ಮಾಡಿದ್ದರು ಕೂಡ. ಇದೀಗ ‘ಡವ್ ಮಂಜ’ ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Hitler Kalyana Serial: ಹಿಟ್ಲರ್‌ ಕಲ್ಯಾಣ ಧಾರಾವಾಹಿ ಖ್ಯಾತಿಯ ಲೀಲಾ ಹಿನ್ನೆಲೆ ಏನು?

ಸ್ಟಾರ್‌ ಸುವರ್ಣದ ಹೊಸ ಧಾರಾವಾಹಿ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ ರಜಿನಿ. ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯವನ್ನೂ ರಜಿನಿ ಅವರು ಕರಗತ ಮಾಡಿಕೊಂಡಿದ್ದಾರೆ.

Exit mobile version