ಬೆಂಗಳೂರು: ಪ್ರೀತಿ ಆಧಾರಿತ ಕಥೆ ಹೊಂದಿರುವ ʼಪಾರು ಧಾರಾವಾಹಿʼ (Paaru Serial) ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿಯಲ್ಲಿ ನಟಿ ಸಿತಾರಾ ಅವರು ದಾಮಿನಿ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಕಾಮಿಡಿಯನ್ ಪಾತ್ರ ಮಾಡಿದ್ದರೂ ಇವರೂ ಸಹ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಸಿತಾರಾ ಅವರು ಹಲವು ಬಾರಿ ಹಲವು ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಡಿವೋರ್ಸ್ ಹಂತದಲ್ಲಿ ತನ್ನ ಜೀವನ ಇದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಸಿತಾರ ತಾರಾ ಅವರು 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡರು. ಆಗ ಅಜ್ಜಿ ಅವರನ್ನು ಸಾಕಿ, ವಿದ್ಯಾಭ್ಯಾಸ ಕೊಡಿಸಿದರು. ಸಾಣಿ ಹಳ್ಳಿ ಶ್ರೀಗಳನ್ನು ನನ್ನನ್ನು ಸಾಕಿದ್ದು ಎಂದು ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ನಟಿ ಹೇಳಿಕೊಂಡಿದ್ದರು. ಇದೀಗ ಡಿವೋರ್ಸ್ ಕುರಿತಾಗಿ ನಟಿ ಬಾಯ್ಬಿಟ್ಟಿದ್ದಾರೆ.
ʻʻ2019ರಲ್ಲಿ ಮದುವೆ ಮಾಡಿಕೊಂಡೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟವಿಲ್ಲ ಏಕೆಂದರೆ ಅದು ಚೆನ್ನಾಗಿ ನಡೆಯಲಿಲ್ಲ. ಏನಾದರೂ ಯಾರ ಬಗ್ಗೆ ಆದರೂ ಮಾತನಾಡಿದರೆ ಅದು ದೂರು ಹೇಳುತ್ತಿರುವ ಹಾಗೆ ಅನಿಸುತ್ತದೆ. ಮದುವೆ ಆಗಿತ್ತು ಈ ವರ್ಷ ಕೊನೆಯಲ್ಲಿ ವಿಚ್ಛೇದನ ಸಿಗಬಹುದು ಖಂಡಿತಾ ಆಗುತ್ತೆ. ಈಗ ಮತ್ತೆ ಜೀವನದಲ್ಲಿ ಒಂಟಿಯಾಗಿರುವೆ. ಲೈಫ್ ಪಾರ್ಟನರ್ ಸಿಗಲ್ಲ ಅಂತಲ್ಲ ಮಾತಲ್ಲ. ಪ್ರತಿಯೊಬ್ಬರು ಒಂದೇ ರೀತಿ ಬೆಳೆದಿರುವುದಿಲ್ಲ ನಾನು ಬೆಳೆದ ರೀತಿ ಬೇರೆ ಆಗಿರುತ್ತೆ ಮತ್ತೊಬ್ಬರ ವ್ಯಕ್ತಿತ್ವ ಮತ್ತು ಬೆಳೆದ ರೀತಿ ಬೇರೆ ಇರುತ್ತದೆ. ಹೊಂದಿಕೊಳ್ಳುತ್ತಾರೆ ಅನ್ನೋ ಭ್ರಮೆಯಲ್ಲಿ ಇರುತ್ತೀವಿ ಆದರೆ ಯಾರೂ ಹೊಂದಿಕೊಳ್ಳುವುದಿಲ್ಲ. ಬಹುಶಃ ನಾನೇ ಅರ್ಜೆಂಟ್ ಮಾಡಿದೆ ದುಡುಕಿ ಬಿಟ್ಟೆ .. ನಂದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ ಮ್ಯಾರೇಜ್. ಜೀವನದಲ್ಲಿ ಏನಾಗುತ್ತದೆ ಅಂದರೆ ಸ್ವಾಭಿಮಾನ ಮುಖ್ಯವಾಗುತ್ತದೆ ಅದು ಫ್ಯಾಮಿಲಿ ಆಗಬಹುದು ಯಾರೇ ಇರಬಹುದುʼʼಎಂದರು.
ಇದನ್ನೂ ಓದಿ: Paaru Serial: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಧಾರಾವಾಹಿಯ ಖ್ಯಾತ ನಟ ಶರತ್ ಪದ್ಮನಾಭ್
ʻʻಸಂಸಾರ ಗಂಡ ನನಗೆ ಆಗಿಬರಲ್ಲ ಅನ್ನಿಸುತ್ತದೆ. ನನ್ನ ಸೀರಿಯಲ್ ಕೆಲಸಗಳು ನಡೆಯುತ್ತಿದೆ, ಕೆಲವೊಂದು ಸೀರಿಯಲ್‌ಗೆ ಕಾಸ್ಟ್ಯೂಮ್ ಮಾಡುತ್ತಿರುವೆ. ಕೆಲವರ ಜತೆ ಕ್ಯಾಮೆರಾ ಕೆಲಸ ಮಾಡುತ್ತಿರುವೆ. ಈಗಷ್ಟೆ ನಟನೆಗೆ ಎಂಟ್ರಿ ಕೊಡುತ್ತಿರುವವರಿಗೆ ಒಂದು ವಾರ ನಟನೆ ಹೇಳಿ ಕೊಡುವೆ. ಖುಷಿ ಇದೆ ಜೀವನದಲ್ಲಿ ಹೊಸ ವಿಚಾರಗಳನ್ನು ಕಲಿಯುತ್ತಿರುವೆʼʼಎಂದು ಹೇಳಿಕೊಂಡರು.