Site icon Vistara News

Vaishnavi Gowda | ನಿಶ್ಚಿತಾರ್ಥ ಮುರಿದುಕೊಂಡ ನಟಿ ವೈಷ್ಣವಿ ಗೌಡ : ನಟಿ ಹೇಳಿದ್ದೇನು?

Vaishnavi Gowda (Marriage cancel)

ಬೆಂಗಳೂರು : ʻಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಮತ್ತು ನಟ ವಿದ್ಯಾಭರಣ್ ಇಬ್ಬರ ನಿಶ್ಚಿತಾರ್ಥದ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಟಿಯೊಬ್ಬರು ವಿದ್ಯಾಭರಣ್‌ ಮೇಲೆ ಆರೋಪದ ಆಡಿಯೊ ಹರಿಬಿಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ವಿದ್ಯಾಭರಣ್‌ ಅವರು ವೈಷ್ಣವಿಗೂ ತಮಗೂ ಎಂಗೇಜ್‌ಮೆಂಟ್‌ ಆಗಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ವೈಷ್ಣವಿ ಗೌಡ ಅವರು ʻತಾವು ಈ ವಿಚಾರವನ್ನು ಇಲ್ಲಿಗೇ ಮುರಿದುಕೊಂಡಿದ್ದೇವೆʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

ನವೆಂಬರ್‌ 25ರಂದು ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್‌ ಹಾರ ಹಾಕಿಕೊಂಡು ಕುಟುಂಬಸ್ಥರ ಜತೆಗೆ ನಿಂತಿರುವ ಫೋಟೋ ವೈರಲ್ ಆಗಿತ್ತು. ಇದಾದ ಕೂಡಲೇ ವಿದ್ಯಾಭರಣ್ ತಮಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಒಬ್ಬರು ನಟಿ ಆಡಿಯೋ ಹರಿಬಿಟ್ಟಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ನಟ ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ. ʻʻವೈಷ್ಣವಿ ಜತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಷ್ಟೇ ಆಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಅಗಿದೆ ಅನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಸಂಚು ನಡೆದಿದೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪ ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್‌ ಬಂದಾಗಲೇ ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾರೆ. ಆರೋಪದ ಬದಲು ದೂರು ನೀಡಬಹುದಿತ್ತು. ಇದು ನಮ್ಮ ಏಳಿಗೆ ಸಹಿಸಲು ಸಾಧ್ಯವಾಗದಿರುವ ಹಿತಶತ್ರುಗಳ ಸಂಚುʼʼ ಎಂದು ವಿದ್ಯಾಭರಣ್‌ ಆರೋಪಿಸಿದ್ದಾರೆ. ಇದೀಗ ನಟಿ ವೈಷ್ಣವಿ ಅವರು ಮದುವೆ ಮುರಿದುಕೊಂಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | Vaishnavi Gowda | ʻಅಗ್ನಿಸಾಕ್ಷಿʼ ಖ್ಯಾತಿಯ ವೈಷ್ಣವಿ ಗೌಡ ನಿಶ್ಚಿತಾರ್ಥ: ಮದುವೆಗೆ ಒಪ್ಪಿಲ್ಲ ಅಂತಿದ್ದಾರಂತೆ ನಟಿ?

ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಟಿ ವೈಷ್ಣವಿ ʻʻನಾವು ನಿಶ್ಚಿತಾರ್ಥ ಮುರಿದುಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ತುಂಬ ಡ್ರ್ಯಾಗ್‌ ಮಾಡಬೇಡಿ.ʼʼಎಂದು ಮಾದ್ಯಮಗಳಿಗೆ ಮನವಿ ಮಾಡಿದ್ದಾರೆ. ವಿದ್ಯಾಭರಣ್ ವಿರಾಜ್, ʻಚಾಕೋಲೇಟ್ ಬಾಯ್ʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | ವೈಷ್ಣವಿ ಗೌಡ ಜತೆ ಎಂಗೇಜ್‌ಮೆಂಟ್ ಆಗಿಲ್ಲ: ನಟಿಯ ವೈರಲ್‌ ಆಡಿಯೋ ಬಳಿಕ ಸ್ಪಷ್ಟನೆ ನೀಡಿದ ನಟ ವಿದ್ಯಾಭರಣ್‌

Exit mobile version