Site icon Vistara News

Vaishnavi Gowda | ʻಅಗ್ನಿಸಾಕ್ಷಿʼ ಖ್ಯಾತಿಯ ವೈಷ್ಣವಿ ಗೌಡ ನಿಶ್ಚಿತಾರ್ಥ: ಮದುವೆಗೆ ಒಪ್ಪಿಲ್ಲ ಅಂತಿದ್ದಾರಂತೆ ನಟಿ?

Vaishnavi Gowda (engagement gossip)

ಬೆಂಗಳೂರು : ಕಿರುತೆರೆ ನಟಿ, ಬಿಗ್​ಬಾಸ್​ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಅವರ ನಿಶ್ಚಿತಾರ್ಥದ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದರ ಬೆನ್ನಲ್ಲೇ ಇದೀಗ ನಟಿ ವೈಷ್ಣವಿ ಗೌಡ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂಬ ಗಾಸಿಪ್‌ ಮಾತುಗಳು ಕೇಳಿ ಬರುತ್ತಿವೆ. ತಮ್ಮ ಮದುವೆ ನಿಶ್ಚಯವಾಗಿರುವ ಬಗ್ಗೆ ವೈಷ್ಣವಿ ಗೌಡ ಹಾಗೂ ಕುಟುಂಬಸ್ಥರು ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಈ ಫೋಟೊವನ್ನು ಕೂಡ ನಟಿ ಎಲ್ಲಿಯೂ ಹಂಚಿಕೊಂಡಿಲ್ಲ. ಹೀಗಾಗಿ ವೈಷ್ಣವಿ ಗೌಡ ಅವರಿಗೆ ಮದುವೆ ನಿಶ್ಚಯ ಆಗಿದೆಯೋ ಇಲ್ಲವೋ ಎನ್ನುವ ಅನುಮಾನ ಅವರ ಅಭಿಮಾನಿಗಳಿಗೆ ಕಾಡುತ್ತಿದೆ.

ಬಿಗ್‌ ಬಾಸ್‌ ಸೀಸನ್‌ನಲ್ಲಿ ವೈಷ್ಣವಿ ಗೌಡ ಅವರು ತಮ್ಮ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರು. 200ಕ್ಕೂ ಹೆಚ್ಚು ಪ್ರಪೋಸಲ್‌ ತಮಗೆ ಬಂದಿತ್ತು ಎಂದು ಸ್ವತಃ ವೈಷ್ಣವಿ ಗೌಡ ಅವರು ಹೇಳಿಕೊಂಡಿದ್ದರು. ಕಿಚ್ಚ ಸುದೀಪ್‌ ಅವರೊಂದಿಗೆ ವೈಷ್ಣವಿ ಗೌಡ ಅವರು ʻʻತಾವು ಮದುವೆ ಆಗುವ ಹುಡುಗ ಸರಳವಾಗಿ, ನಗು ನಗುತ್ತ ಅವರ ಪಾಡಿಗೆ ಇರಬೇಕುʼʼಎಂದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಆಗಿನಿಂದ ವೈಷ್ಣವಿ ಗೌಡ ಅವರಿಗೆ ಅವರ ಫ್ಯಾನ್ಸ್‌ಗಳು ಕಮೆಂಟ್‌ ಮೂಲಕ ಯಾವಾಗ ಮದುವೆ ಎಂದು ಕೇಳುತ್ತಿದ್ದರು. ಇದೀಗ ಅವರ ನಿಶ್ಚಿತಾರ್ಥದ ಫೋಟೊ ವೈರಲ್‌ ಆಗುತ್ತಿದ್ದಂತೆ, ವೈಷ್ಣವಿ ಗೌಡ ಅವರು ಈ ಮದುವೆಗೆ ಒಪ್ಪಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ | Vaishnavi Gowda | ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ್ರಾ? ಶಂಕರ್​ ಬಿದರಿಯೂ ಇದ್ದಾರೆ ಫೋಟೋದಲ್ಲಿ!

ಸ್ವತಃ ವೈಷ್ಣವಿ ಅವರೇ ʻʻಈ ಮದುವೆಗೆ ಒಪ್ಪಿಲ್ಲ. ಹುಡುಗ ನನಗೂ ಹೊಸಬರಾಗಿದ್ದರಿಂದ ಸಮಯಾವಕಾಶ ಬೇಕಾಗಿದೆʼʼ ಎಂದು ಹೇಳಿಕೊಂಡಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿವೆ. ನಿಶ್ಚಿತಾರ್ಥ ಆಗಿರುವ ಫೋಟೊದಲ್ಲಿ ಇರುವ ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದಾರೆ ಎನ್ನಲಾಗುತ್ತಿದೆ. ʻವಿರಾಜ್’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಬಿಗ್​ಬಾಸ್​ನಿಂದ ಹೊರಬಂದ ಮೇಲೆ ತಮ್ಮ ಯೋಗ, ಡ್ಯಾನ್ಸ್​​ ಪೋಸ್ಟ್​ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು ನಟಿ. ಇತ್ತೀಚೆಗೆ ‘ಲಕ್ಷಣ’ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | Siddhanth Suryavanshi | ಜಿಮ್ ಮಾಡುತ್ತಿದ್ದ ವೇಳೆ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ನಿಧನ

Exit mobile version