Site icon Vistara News

Aishwarya Shindogi: ಕಿರುತೆರೆಗೆ ಐಶ್ವರ್ಯಾ ಶಿಂಧೋಗಿ ರೀ-ಎಂಟ್ರಿ

Aishwarya Shindhogi Entered Namma Lacchi Serial

ಐಶ್ವರ್ಯಾ ಶಿಂಧೋಗಿ (Aishwarya Shindogi) ಮತ್ತೊಮ್ಮೆ, ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಇನ್ನು ಮುಂದೆ ಐಶ್ವರ್ಯಾ ಕಾಣಿಸಿಕೊಳ್ಳಲಿದ್ದಾರೆ.

ನಮ್ಮ ಲಚ್ಚಿ ಧಾರಾವಾಹಿಯಲ್ಲಿ ರಿಯಾಳ ತಾಯಿ ದೀಪಿಕಾರ ಪಾತ್ರವನ್ನು ನಿಭಾಯಿಸುತ್ತಿದ್ದ ಸಾರಾ ಅಣ್ಣಯ್ಯ ಸೀರಿಯಲ್‌ನಿಂದ ಹೊರಬಂದಿದ್ದಾರೆ.

ಐಶ್ವರ್ಯಾ ಶಿಂಧೋಗಿ (Aishwarya Shindogi) ‘ನಾಗಿಣಿ 2’ ಹಾಗೂ ‘ಮಂಗಳಗೌರಿ ಮದುವೆ’ ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದ್ದರು.

ಐಶ್ವರ್ಯಾ ಅವರು ನಟನಾ ಪಯಣ ಪ್ರಾರಂಭವಾದದ್ದು ‘ಸಿಂಹಾದ್ರಿ’ ಸಿನಿಮಾದ ಮೂಲಕ. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಐಶ್ವರ್ಯಾ ಈ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು.

‘ಸಪ್ನೋ ಕಿ ರಾಣಿ’, 2016ರಲ್ಲಿ ‘ರಣತಂತ್ರ’, ‘ಮಮ್ಮಿ: ಸೇವ್ ಮಿ’, ‘ಚಿನ್ನಾರಿ’ ಮತ್ತು 2017ರಲ್ಲಿ ‘ಸಂಯುಕ್ತ 2’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Exit mobile version