ಬೆಂಗಳೂರು: ಜೀ ವಾಹಿನಿಯಲ್ಲಿ ಸಾಲುಸಾಲು ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ ಮೇ 29ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ. ವರದಿ ಪ್ರಕಾರ ಸೋಮವಾರದಿಂದ ಶುಕ್ರವಾರದವರೆಗೆ ‘ಅಮೃತಧಾರೆ’ ಧಾರಾವಾಹಿ (Amruthadhare Serial ) ರಾತ್ರಿ 7 ಗಂಟೆಗೆ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ಪ್ರಸಾರ ಕಾಣುತ್ತಿದ್ದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಕಥೆ ಏನು ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಜೀ ವಾಹಿನಿ ಮೂರು ಹೊಸ ಧಾರಾವಾಹಿಗಳನ್ನು ಅನೌನ್ಸ್ ಮಾಡಿದೆ. ಈಗಾಗಲೇ ʻಭೂಮಿಗೆ ಬಂದ ಭಗವಂತʼ ಧಾರಾವಾಹಿ ಪ್ರಸಾರ ಪ್ರಾಂಭಿಸಿದೆ. ಇದೀಗ ಅಮೃತಧಾರೆ ಮತ್ತು ಸೀತಾರಾಮ ಧಾರಾವಾಹಿಗಳು ಪ್ರಸಾರವಾಗಬೇಕಿದೆ.
ಅಮೃತಧಾರೆ ಧಾರಾವಾಹಿ ಪ್ರೊಮೊವನ್ನು ಜೀ ವಾಹಿನಿ ಪ್ರಸಾರ ಮಾಡಿದೆ. ಛಾಯಾ ಸಿಂಗ್ ಜತೆ ನಟ ರಾಜೇಶ್ ಕಾಣಿಸಿಕೊಂಡಿದ್ದಾರೆ. ಪ್ರೊಮೊದಲ್ಲಿ ಇಬ್ಬರ ಕಿತ್ತಾಟದ ದೃಶ್ಯವನ್ನು ಜೀ ವಾಹಿನಿ ಹಂಚಿಕೊಂಡಿದೆ. ಈ ಧಾರಾವಾಹಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಧಾರಾವಾಹಿ ಪ್ರಸಾರದ ಸಮಯದ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಆದರೀಗ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸಮಯದಲ್ಲಿಯೇ ಅಮೃತಧಾರೆ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: Chaya Singh: ʻಅಮೃತಧಾರೆʼಯಾಗಿ ಕಿರುತೆರೆಗೆ ಮರಳಿದ ಛಾಯಾ ಸಿಂಗ್
‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸದ್ಯ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಹೊಂದಿದೆ. ಆದರೆ, ಈಗ ಹೊಸ ಧಾರಾವಾಹಿಯ ಆಗಮನದಿಂದ ‘ಹಿಟ್ಲರ್ ಕಲ್ಯಾಣ’ವನ್ನು ರಾತ್ರಿ 10 ಗಂಟೆಗೆ ಪ್ರಸಾರ ಮಾಡಲಾಗುತ್ತದೆ ಎನ್ನಲಾಗಿದೆ. ಜೀ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ‘ಸೌಭಾಗ್ಯವತಿ ಭವ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದಕ್ಕೆ ಯಾವ ಸಮಯ ಕೊಡುತ್ತಾರೆ ಎಂಬುದು ಕಾದು ನೋಡಬೇಕಿದೆ.
ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್ ಆಗಿದೆ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.