ʻಕುಲವಧುʼ ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ (Amrutha Ramamoorthi), ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಿಸ್ಟರ್ & ಮಿಸ್ಸ್ ರಂಗೇಗೌಡ’ ಧಾರಾವಾಹಿಯಲ್ಲಿ ನಟಿಸ್ತಿದ್ದ ಅಮೃತಾ ರಾಮಮೂರ್ತಿ (Amrutha Ramamurthy) ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ.
ತಮ್ಮ ಮೊದಲ ಧಾರಾವಾಹಿಯಲ್ಲಿ ನಟಿಯಾಗಿ ನಟಿಸಿದ ನಂತರವೂ 15 ಧಾರವಾಹಿಗಳಲ್ಲಿ ರಿಜೆಕ್ಟ್ ಆಗಿರುವ ಬಗ್ಗೆ ನಟಿ ಇದೀಗ ಹೇಳಿಕೊಂಡಿದ್ದಾರೆ. ಸುವರ್ಣ ಸೂಪರ್ ಸ್ಟಾರ್ನಲ್ಲಿ (Suvarna Super Star) ಭಾಗವಹಿಸಿ ತಮಗಾದ ನೋವನ್ನು ನಟಿ ಅಮೃತಾ ರಾಮಮೂರ್ತಿ ಹಂಚಿಕೊಂಡಿದ್ದಾರೆ.
ಹೆಚ್ಚು ಕಮ್ಮಿ 15 ಧಾರಾವಾಹಿಗಳಲ್ಲಿ ನಟಿ ರಿಜೆಕ್ಷನ್ ಅನುಭವಿಸಿದ್ದರು. ಅದಕ್ಕೆ ಕಾರಣ ನಟಿಯ ಹೈಟ್. ʻಎಲ್ಲವೂ ಸೆಟ್ ಆದರೂ ಹೈಟ್ ಕಡಿಮೆ ಎಂದು ಹದಿನೈದು ಧಾರಾವಾಹಿಗಳು ನನ್ನನ್ನು ರಿಜೆಕ್ಟ್ ಮಾಡಿದರುʼ ಎಂದು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bhavyashree Poojary: ರಮೇಶ್ ಅರವಿಂದ್ ನಿರ್ಮಾಣದ ಧಾರಾವಾಹಿಗೆ ಗುಡ್ಬೈ ಹೇಳಿದ ಭವ್ಯಶ್ರೀ ಪೂಜಾರಿ! ಕಾರಣವೇನು?
ಜರ್ನಲಿಸ್ಟ್ ಆಗಿ ಅಥವಾ ತೆರೆ ಹಿಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಬಂದವರು ಇಂದು ನಟನೆ ಮೂಲಕ ನಟಿ ಪ್ರೇಕ್ಷರ ಮನ ಗೆಲ್ಲುತ್ತಿದ್ದಾರೆ.
ಧಾರಾವಾಹಿಗಳ ಜತೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ ಅಮೃತಾ ರಾಮಮೂರ್ತಿ . ಆಗಾಗ ಕೆಲವೊಂದು ಅಪ್ಡೇಟ್ಸ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಸದ್ಯ ಅಮೃತಾ ರಾಮಮೂರ್ತಿ ಅವರು ‘ಕೆಂಡ ಸಂಪಿಗೆ’ ಧಾರಾವಾಹಿಯಲ್ಲಿ ಸಾಧನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.