ಇಂದು (ಮೇ 16) ಅಮೃತಧಾರೆ ಧಾರಾವಾಹಿ (Amruthadhaare Serial) ಖ್ಯಾತಿಯ ನಟಿ ಛಾಯಾ ಸಿಂಗ್ (Chaya Singh) ಅವರಿಗೆ ಜನುಮದಿನದ ಸಂಭ್ರಮ. ಧಾರಾವಾಹಿಯಿಂದ ಜನರಿಗೆ ಭೂಮಿಕಾ ಎಂದೇ ಪರಿಚಯ.
ನಟಿಯ ವಿಶೇಷ ದಿನದಂದು ಜೀ ಕನ್ನಡ ವಾಹಿನಿ ಛಾಯಾ ಸಿಂಗ್ ಕುರಿತು ವಿಡಿಯೊ ಒಂದನ್ನು ರಿಲೀಸ್ ಮಾಡಿದೆ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಹೇಗೆ ಕೋಟ್ಯಧಿಪತಿ ಉದ್ಯಮಿ ಜತೆ ಜೀವನ ನಡೆಸುತ್ತಾಳೆ ಎಂಬುದೇ ಈ ಧಾರಾವಾಹಿಯ ಒನ್‌ಲೈನ್ ಸ್ಟೋರಿ.
ಧಾರಾವಾಹಿಯಲ್ಲಿ ಪತಿ ಗೌತಮ್ ಹೆಂಡತಿಯ ಹುಟ್ಟುಹಬ್ಬಕ್ಕೆಂದು ಚಿಕ್ಕಮಗಳೂರಿನ ಎಸ್ಟೇಟ್ ಬರೆದು ಕೊಟ್ಟಿದ್ದಾನೆ. ಇದೀಗ ರಿಯಲ್ ಗಂಡ ಪತ್ನಿಗೆ ಏನು ಗಿಫ್ಟ್ ಕೊಟ್ಟಿದ್ದಾರೆ? ಎಂದು ನೆಟ್ಟಿಗರು ಪ್ರಶ್ನೆ ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ.
ಛಾಯಾ ಅವರ ರಿಯಲ್ ಲೈಫ್ ಪತಿಯ ಹೆಸರು ಕೃಷ್ಣ. ಇನ್ಸ್ಟಾಗ್ರಾಮ್ನಲ್ಲಿ ಅವರು ಪತಿಯ ಜತೆ ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: Kiccha Sudeep: ʻಮ್ಯಾಕ್ಸ್ʼ ಸಿನಿಮಾ ಶೂಟಿಂಗ್ ಮುಗಿಸಿದ ಕಿಚ್ಚ ಸುದೀಪ್: ರಿಲೀಸ್ ಯಾವಾಗ?