Site icon Vistara News

Amruthadhare Kannada Serial: ಭೂಮಿಗೆ ಪ್ರಪೋಸ್‌ ಮಾಡಲು ತಯಾರಾಗ್ತಿದ್ದಾರೆ ಡುಮ್ಮ ಸರ್‌!

Amruthadhare Kannada Serial Goutham Propose To Bhoomika

ಬೆಂಗಳೂರು: ಟಿಆರ್‌ಪಿ ಲಿಸ್ಟ್‌ನಲ್ಲಿ ಸಾಮಾನ್ಯವಾಗಿ ಟಾಪ್‌ 5ನಲ್ಲಿ ಜೀ ಕನ್ನಡ ಧಾರಾವಾಹಿಗಳೇ (Amruthadhare Kannada Serial) ಇರುತ್ತವೆ. ಅದರಲ್ಲಿ ʻಅಮೃತಧಾರೆ ಧಾರಾವಾಹಿʼಯೂ ಒಂದು. ಡುಮ್ಮ ಸರ್‌ ಅಂದರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌. ನಾಯಕ ಗೌತಮ್ ದಿವಾನ್ ಪಾತ್ರದ ರಾಜೇಶ್‌ ಹಾಗೂ ಛಾಯಾ ಸಿಂಗ್ ಅವರು ಭೂಮಿಕಾ ಸದಾಶಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದೀಗ ಗೌತಮ್ (amrithadhare serial Goutham)​ ಡಬಲ್​ ಆ್ಯಕ್ಟಿಂಗ್​ ಮಾಡಿದ್ದಾರೆ. ಕೊನೆಗೂ ಭೂಮಿಕಾ ಮೇಲೆ ಪ್ರೀತಿ ಶುರುವಾಗಿದೆ ನಮ್ಮ ಡುಮ್ಮ ಸರ್‌ಗೆ. ಕೆಂಗುಲಾಬಿ ಕೈಯಲ್ಲಿ ಹಿಡಿದು ಭೂಮಿ ಎದುರು ಪ್ರೀತಿ ಹೇಳಿಕೊಳ್ಳಲು ಪ್ರಿಪೇರ್‌ ಆಗುತ್ತಿದ್ದಾರೆ ಗೌತಮ್‌ ಸರ್‌. ಇದೀಗ ಗುಲಾಬಿ ಹೂವನ್ನು ಪತ್ನಿಗೆ ಕೊಟ್ಟು ʻಐ ಲವ್​ ಯೂʼ ಎಂದು ಹೇಳುವ ತವಕದಲ್ಲಿದ್ದಾರೆ ಗೌತಮ್.

ಗೌತಮ್​ ಕೈಯಲ್ಲಿ ಗುಲಾಬಿ ಹೂವು ಹಿಡಿದು ಡಬಲ್​ ಆ್ಯಕ್ಟಿಂಗ್​ ಶುರು ಮಾಡಿಕೊಂಡಿದ್ದಾರೆ. ಪತ್ನಿಯ ಬಳಿ ಕೊನೆಗೂ ಪ್ರೀತಿಯ ವಿಷಯವನ್ನು ಹೇಳಿಯೇ ಬಿಡೋಣ ಎಂದು ಪ್ರ್ಯಾಕ್ಟಿಸ್‌ ಮಾಡುತ್ತಿದ್ದಾರೆ. ಭೂಮಿಕಾ ಏನು ಹೇಳಬಹುದು ಎಂದು ತಾವೇ ಭೂಮಿಕಾ ರೀತಿ ಮಾತನಾಡಿ ತಾನೇ ಕಲ್ಪನೆ ಮಾಡಿಕೊಂಡು ಅವರ ಪಾತ್ರವನ್ನು ತಾವೇ ಮಾಡುತ್ತಿದ್ದಾರೆ ಗೌತಮ್‌. ಈ ಹೊಸ ಅವತಾರವನ್ನು ಕದ್ದುಮುಚ್ಚಿ ನೋಡುತ್ತ ಖುಷಿ ಪಡುತ್ತಿದ್ದಾರೆ ಗೌತಮ್‌ ಮಿತ್ರ ಆನಂದ್‌. ʻಈ ಬಂಧನʼ ವಿಷ್ಣವರ್ಧನ್‌ ರೀತಿ ಗೌತಮ್‌ ಗುಲಾಬಿ ಹಿಡಿದು ಪ್ರ್ಯಾಕ್ಟಿಸ್‌ ಮಾಡುವ ರೀತಿಗೆ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. ಈ ಪ್ರೋಮೊ ಇದೀಗ ಜೀ ವಾಹಿನಿ ಹಂಚಿಕೊಂಡಿದೆ.

ಇದನ್ನೂ ಓದಿ: Amruthadhare Kannada Serial: ಕಿರುತೆರೆ ಇತಿಹಾಸದಲ್ಲಿ ʻಅಮೃತಧಾರೆʼಯ ಹೊಸ ದಾಖಲೆ!

ʻಇವರ ಪ್ರೀತಿ ಮೇಲೆ ಯಾರ ಕಣ್ಣು ಬೀಳಬಾರದುʼ ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಡುಮ್ಮ ಸರ್ ಅಭಿನಯ ಸೂಪರ್. ವಿಷ್ಣು ಸರ್ ನೆನಪು ಬಂದ್ರುʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಭೂಮಿಕಾಗೂ ಗೌತಮ್‌ ಮೇಲೆ ಲವ್‌ ಆಗಿದೆ. ಇಬ್ಬರ ಪ್ರೀತಿ ದಿನಕಳೆದಂತೆ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದೆ. ಈಗಾಗಲೇ ಹೋಳಿ ಹಬ್ಬಕ್ಕೆ ಗೌತಮ್‌ ಕೆನ್ನಗೆ ಬಣ್ಣ ಹಚ್ಚಿದ್ದಾರೆ ಭೂಮಿಕಾ. ಇನ್ನು ಗೌತಮ್‌ ಕೂಡ ಸುಮ್ಮನಾಗಿಲ್ಲ. ಭೂಮಿಕಾ ಕೆನ್ನೆಗೆ ಬಣ್ಣ ಹಚ್ಚಿದ್ದಾರೆ. ಡುಮ್ಮ ಸರ್​ಗೆ ಕೊನೆಗೂ ಲವ್​ ಅಂದ್ರೇನು ಎಂದು ಗೊತ್ತಾಗೋಕೆ ಶುರುವಾಗಿದೆ ಅಂತಿದ್ದಾರೆ ಫ್ಯಾನ್ಸ್​.

ಅಮೃತಧಾರೆ’ ಧಾರಾವಾಹಿ (Amruthadhare Kannada Serial) ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ಅಮೃತಧಾರೆ ಧಾರಾವಾಹಿ ʻಬಡೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ.

Exit mobile version