Site icon Vistara News

Amruthadhare Kannada Serial: ಕಿರುತೆರೆ ಇತಿಹಾಸದಲ್ಲಿ ʻಅಮೃತಧಾರೆʼಯ ಹೊಸ ದಾಖಲೆ!

chaya singh rajesh Natanaranga

ಬೆಂಗಳೂರು: ರಾಜೇಶ್ ನಟರಂಗ (Rajesh nataranga) ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ (Amruthadhare Kannada Serial) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ನಾಯಕ ಗೌತಮ್ ದಿವಾನ್ ಪಾತ್ರದ ರಾಜೇಶ್‌ ಹಾಗೂ ಛಾಯಾ ಸಿಂಗ್ ಅವರು ಭೂಮಿಕಾ ಸದಾಶಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿಯ ಬಂದಾಗಿನಿಂದ ಟೈಟಲ್‌ ಟ್ರ್ಯಾಕ್‌ ಸಾಂಗ್‌ ಯಾವಾಗ ಬಿಡುಗಡೆ ಎಂದು ಪ್ರೇಕ್ಷಕರು ಕೇಳುತ್ತಲೇ ಇದ್ದರು. ಈ ಧಾರಾವಾಹಿಯ ಜೂಕ್ ​ಬಾಕ್ಸ್ ರಿಲೀಸ್ ಮಾಡಲಾಗಿದೆ. ಕಿರುತೆರೆ ಇತಿಹಾಸದಲ್ಲಿ ಧಾರಾವಾಹಿಯ ಹಾಡಿಗೆ ಜೂಕ್ ​ಬಾಕ್ಸ್ ರಿಲೀಸ್ ಆಗಿದ್ದು ಇದೇ ಮೊದಲು ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ.

ನಟ ರಾಜೇಶ್ ನಟರಂಗ ಅವರಿಗೆ ಕಿರುತೆರೆ ಹೊಸದೇನಲ್ಲ. ʻತ್ರಿವೇಣಿ ಸಂಗಮʼ ʻಮುಕ್ತ’, ‘ಬದುಕು’, ‘ಶಕ್ತಿ’, ‘ಗುಪ್ತಗಾಮಿನಿʼ ಹೀಗೆ ಹಲವು ಧಾರಾವಾಹಿಗಳಲ್ಲಿ ಛಾಪು ಮೂಡಿಸಿದ್ದರು. ‘ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿಯೂ ನಾಯಕ ತ್ರಿವಿಕ್ರಮ್ ಆಗಿ ರಾಜೇಶ್ ನಟರಂಗ ನಟಿಸಿದ್ದರು. ಅವರಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ನಟಿ ಅನುಪ್ರಭಾಕರ್ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಗೆ ಜನಮೆಚ್ಚುಗೆ ಲಭಿಸಿತ್ತು. ಇದೇ ರೀತಿ ಈ ಧಾರಾವಾಹಿಯೂ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

‘ಅಮೃತಧಾರೆ’ ಧಾರಾವಾಹಿಯ ‘ನಾ ಭುವಿಯಂತೆ ಕಾದೆ..’ ‘ಏನೋ ನವಿರಾದ ಭಾವ..’, ‘ನಿನ್ನವರ ನಗುವಲಿ..’, ‘ಒಡನಾಡಿ ಬೇಕಿದೆ..’, ‘ಸನಿಹ ಸೆಳೆದಂತೆ..’ ‘ಬೆಳಗುವ ದೀಪವು..’ ‘ಜೊತೆ ಸಾಗೋ ಕನಸಿದೆ..’, ‘ತನ್ನವರ ಬದುಕಲಿ..’, ‘ಯಾರೋ ಕರೆದಂತೆ ಹೆಸರ..’ ಹಾಡುಗಳು ಈ ಜೂಕ್ ​ಬಾಕ್ಸ್​ನಲ್ಲಿ ಇದೆ. ಒಟ್ಟೂ ‘ಅಮೃತಧಾರೆ’ ಧಾರಾವಾಹಿಯ ಜೂಕ್ ​ಬಾಕ್ಸ್ ಅವಧಿ 14:46 ನಿಮಿಷ ಇದೆ.

ಇದನ್ನೂ ಓದಿ: Amruthadhare Kannada Serial : ʻಅಮೃತಧಾರೆʼಯ ಭೂಮಿಕಾಳ ಅಮ್ಮ ಮಂದಾಕಿನಿ ನಟಿ ಮಾತ್ರವಲ್ಲ ನಿರ್ಮಾಪಕರೂ ಹೌದು!

ಈ ಹಾಡುಗಳಿಗೆ ಸುಧೀಂದ್ರ ಭಾರದ್ವಾಜ್, ಚೇತನ್ ಸೊಲಗಿ ಅವರು ಸಾಹಿತ್ಯ ಬರೆದಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿಹಾಲ್ ತಾವ್ರೋ, ಐಶ್ವರ್ಯ ರಂಗರಾಜನ್, ರಜತ್ ಹೆಗಡೆ ಅವರು ಹಾಡಿದ್ದಾರೆ. ನವೀನ್ ವಿಶರಾಧ್, ಇಂಚರ ಶೆಟ್ಟಿ ಅವರ ಕೋರಸ್ ಇದೆ. ಸುಮಂತ್ ಗ್ರಾಫಿಕ್ಸ್ ನೀಡಿದ್ದಾರೆ.

ಇದನ್ನೂ ಓದಿ: Kannada Serials TRP : ಮೂರನೇ ಸ್ಥಾನಕ್ಕೆ ಬಂದ ʻಅಮೃತಧಾರೆʼ; ಹೊಸ ಧಾರಾವಾಹಿ ಟಾಪ್‌ 5ಕ್ಕೆ ಎಂಟ್ರಿ!

‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ಅಮೃತಧಾರೆ ಧಾರಾವಾಹಿ ʻಬಡೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಈಗಾಗಲೇ ಪ್ರೇಕ್ಷಕರು ಮೊದಲ ಎಪಿಸೋಡ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್​ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ. ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್​ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ. ಇದೀಗ ಇವರಿಬ್ಬರು ಒಂದಾಗುತ್ತಾರಾ ಎಂಬುದೇ ಪ್ರೇಕ್ಷಕರಿಗೆ ಕುತೂಹಲವಾಗಿದೆ.

Exit mobile version