ಬೆಂಗಳೂರು: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ (Amruthadhare Serial) ಪ್ರಮುಖ ಘಟ್ಟ ತಲುಪಿದೆ. ಅಂತೂ ಡುಮ್ಮ ಸರ್ ಹಾಗೂ ಭೂಮಿಕಾ ಅವರ ಫಸ್ಟ್‌ನೈಟ್ ಆಗಿದೆ. ಸಂಚಿಕೆ ಪ್ರಸಾರ ಕಾಣುವುದಕ್ಕೂ ಮೊದಲು ಫಸ್ಟ್ ನೈಟ್ ಸೀನ್ (Amruthadhare First Night Scene Promo) ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸೀರಿಯಲ್‌ನ ಪ್ರೊಮೋಕ್ಕೆ 35ರಿಂದ 40 ಲಕ್ಷ ವೀಕ್ಷಣೆ ಸಿಕ್ಕಿದೆ. ಕೇವಲ ಇನ್ಸ್‌ಸ್ಟಾ ಗ್ರಾಂ ಒಂದರಲ್ಲೇ ಈ ಸೀರಿಯಲ್ ಪ್ರೋಮೋ ವೀಕ್ಷಣೆ 35 ಲಕ್ಷಕ್ಕೂ ಅಧಿಕವಾಗಿತ್ತು.
ಇನ್ನು ಅಮೃತಧಾರೆ ಸೀರಿಯಲ್ ವಿಷಯಕ್ಕೆ ಬಂದರೆ ಡುಮ್ಮ ಸಾರ್ ಎಂದೇ ಖ್ಯಾತಿ ಪಡೆದಿರೋ ಗೌತಮ್ ದಿವಾನ್, ನಾಯಕಿ ಭೂಮಿಕಾ ಎಲ್ಲರ ಬಲು ಮೆಚ್ಚಿನ ಜೋಡಿ. ಗುಂಡು ಗುಂಡಗೆ ದಪ್ಪಗಿರೋ ಕೋಟ್ಯಧಿಪತಿ ಗೌತಮ್, ಸಣಕಲಾಗಿರೋ ಮಿಡಲ್ ಕ್ಲಾಸ್ ಹೆಣ್ಣು ಮಗಳು ಭೂಮಿಕಾ ಅಂದರೆ ಬಹಳ ಜನಕ್ಕೆ ಇಷ್ಟ. ಈ ಜೋಡಿಯನ್ನು ಒಂದಾಗಿಸಲು ಗೌತಮ್ ಅಜ್ಜಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಜ್ಜಿ ಹೇಳಿದ ಒಂದು ಸುಳ್ಳಿನಿಂದ ದಂಪತಿ ಫಸ್ಟ್ ನೈಟ್ ತನಕ ಬಂದಿತ್ತು. ಗೌತಮ್ , ಭೂಮಿಕಾಗೆ ಫಸ್ಟ್‌ನಟೈಗೆ ಹೇಗೆ ಒಪ್ಪಿಗೆ ಕೊಟ್ರಿ? ಎಂದು ಕೇಳಿದಾಗ ಅಜ್ಜಿನೇ ನಿಮಗೆ ತುಂಬ ಆಸೆ ಎಂದು ಹೇಳಿದ್ರು ಎಂದು ಭೂಮಿಕಾ ಹೇಳುತ್ತಾಳೆ. ಅತ್ತ ಗೌತಮ್ ಭೂಮಿಕಾಗೆ ಇನ್ನೊಂದು ರೀತಿಯಲ್ಲಿ ಹೇಳಿ ಕನ್ವಿನ್ಸ್ ಮಾಡಿರುತ್ತಾರೆ ಅಜ್ಜಿ. ಆದರೆ ಇವರಿಬ್ಬರಿಗೂ ಅಜ್ಜಿ ಹೇಳಿದ ಸುಳ್ಳು ಗೊತ್ತಾಗಿ ಎಲ್ಲಿ ಮತ್ತೆ ದೂರವಾಗುವರೋ ಎನ್ನುವ ಆತಂಕ ಪ್ರೇಕ್ಷಕರಲ್ಲಿ ಕಾಡುತ್ತಲೇ ಇತ್ತು.
ಇನ್ನೇನು ಜೋಡಿ ಹತ್ತಿರ ಆಗಬೇಕು ಎನ್ನುವಷ್ಟರಲ್ಲಿ ಗೌತಮ್ ತಾನು ಕೆಳೆಗೆ ಮಲಗಿಕೊಳ್ಳುವುದಾಗಿ ಹೇಳುತ್ತಾನೆ. ಆದರೆ ಭೂಮಿಕಾ ಗೌತಮ್‌ನನ್ನು ತಡೆದು ನನ್ನ ನೋಡಿದ್ರೆ ನಿಮಗೆ ಏನೂ ಅನಿಸಲ್ವಾ? ನಾನು ಹತ್ತಿರ ಬಂದರೆ ನಿಮಗೆ ಏನೂ ಆಗೋದಿಲ್ವಾ ಎಂದೆಲ್ಲಾ ಪ್ರಶ್ನಿಸಿದಾಗ, ಅವಳ ಸ್ಪರ್ಷ ಆಗುತ್ತಿದ್ದಂತೆಯೇ ಗೌತಮ್ಗೆ ರೋಮಾಂಚನವಾಗುತ್ತದೆ. ಇಬ್ಬರೂ ತಬ್ಬಿಕೊಳ್ಳುತ್ತಾರೆ. ಅಲ್ಲಿಗೆ ಫಸ್ಟ್‌ನೈಟ್ ಆಗುತ್ತದೆ.
ಇದನ್ನೂ ಓದಿ: Rishta Laboni Shimana: ಚಿಕಿತ್ಸೆ ಫಲಕಾರಿಯಾಗದೆ ಖ್ಯಾತ ನಟಿ ರಿಶ್ತಾ ನಿಧನ
ಇಬ್ಬರೂ ಒಂದಾಗಲು ಬಿಡದ ಶಕುಂತಲಾ
ಇದಕ್ಕೂ ಮುಂಚೆ ಚಿಕ್ಕಮಗಳೂರಿಗೆ ಜೋಡಿಯನ್ನು ಹನಿಮೂನ್‌ಗಾಗಿ ಅಜ್ಜಿ ಕಳುಹಿಸಿರುತ್ತಾರೆ. ಆದರೆ ಅಲ್ಲಿ ಇಬ್ಬರಿಗೂ ಒಂದಾಗಲು ಗೌತಮ್ ತಾಯಿ ಶಕುಂತಲಾ ಬಿಡುವುದಿಲ್ಲ. ಭೂಮಿಕಾ ಕೊಲೆಗೆ ಶಕುಂತಲಾ ಸಂಚು ಹೂಡಿದ್ದಳು. ಭೂಮಿಕಾ ಕೂಡ ಕಿಡ್ನಾಪ್ ಆಗುತ್ತಾಳೆ. ತನ್ನ ಉಸಿರನ್ನು ನೀಡಿ ಬಳಿಕ ಭೂಮಿಕಾಳನ್ನು ಸೇಫ್ ಮಾಡಿ ತರುತ್ತಾನೆ ಗೌತಮ್. ಇದ್ಯಾವುದೂ ಅಜ್ಜಿಗೆ ಗೊತ್ತಿಲ್ಲದಿದ್ದರೂ ಇವರಿಬ್ಬರೂ ದೈಹಿಕವಾಗಿ ಒಂದಾಗಲಿಲ್ಲ ಎನ್ನುವ ಸತ್ಯ ಗೌತಮ್ ಸ್ನೇಹಿತ ಆನಂದ್‌ನಿಂದ ಗೊತ್ತಾಗಿ, ಪ್ಲ್ಯಾನ್ ಪ್ರಕಾರ ಫಸ್ಟ್‌ನೈಟ್ ಮುಹೂರ್ತ ಇಡುತ್ತಾರೆ.
ನಟನೆಗೆ ಮೆಚ್ಚಿದ ಫ್ಯಾನ್ಸ್
ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಫಸ್ಟ್‌ನೈಟ್ ಸಂಚಿಕೆಯಲ್ಲಿ ನಟನೆಯಲ್ಲಿ ಒಬ್ಬರಿಗೊಬ್ಬರು ಮೀರಿಸಿದ್ದಾರೆ. ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಇವರ ಕಣ್ಣೋಟದ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಬ್ಬರು ʻʻಧಾರಾವಾಹಿ ಅಂದ್ರೆ ಕೆಲಸ ಇಲ್ದಿರೋರು ನೋಡೋದು ಹಾಗೆ ಹೀಗೆ ಅಂತ ಬರೀ ನೆಗೆಟಿವ್ ಭಾವನೆ ಇತ್ತು. ಆದರೆ ಅಮೃತಧಾರೆ ಇದೆಲ್ಲವನ್ನೂ ಸುಳ್ಳಾಗಿಸಿ ಒಳ್ಳೆ ಸಂದೇಶ, ಮನರಂಜನೆ ಕೊಡುವಲ್ಲಿ ಯಶಸ್ವಿಯಾಗಿದೆʼʼಎಂದು ಕಮೆಂಟ್ ಮಾಡಿದ್ದಾರೆ. ʻʻಡುಮ್ಮ ಸರ್ ಎದೆ ಢವ ಢವʼʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ