Site icon Vistara News

Amruthadhare Serial: ಕೆಂಪು ಗುಲಾಬಿಯಂತೆ ಕಂಗೊಳಿಸಿದ ʻಮಹಿಮಾʼ; ಸಾರಾ ಅಣ್ಣಯ್ಯ ಹೊಸ ಲುಕ್‌!

Amruthadhare Serial sara annaiah
ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದರುವ ಸಾರಾ ಅಣ್ಣಯ್ಯ (Sara Annaiah) ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
‘ನಮ್ಮ ಲಚ್ಚಿ’ಯಿಂದ ಹೊರ ಬಂದ ಕೆಲವೇ ದಿನಗಳಲ್ಲೇ ಜೀ ಕನ್ನಡದ ಹೊಸ ಧಾರಾವಾಹಿ ‘ಅಮೃತಧಾರೆ’ಯಲ್ಲಿ (Amruthadhare Serial) ಸಾರಾ ಕಾಣಿಸಿಕೊಂಡಿದ್ದಾರೆ .
ಧಾರಾವಾಹಿಯಲ್ಲಿ ಮಾಡರ್ನ್ ಆಗಿ ಕಂಡ ನಟಿ ಟ್ರೆಡಿಷನ್ ಲುಕ್‌ ಕೊಟ್ಟಿದ್ದಾರೆ. ಕೆಂಪು ಗುಲಾಬಿ ಬಣ್ಣದ ಡ್ರೆಸ್ ತೊಟ್ಟು ಫೋಟೊಶೂಟ್ ಮಾಡಿಸಿದ್ದಾರೆ.
ಕೆಂಪು ಬಣ್ಣದ ಲೆಹಂಗಾ ಹಾಕಿಕೊಂಡು ಫೋಟೊಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೊಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: Amruthadhare Kannada Serial : ʻಅಮೃತಧಾರೆʼಗೂ ಮುಂಚೆ ಅಣ್ಣ-ತಂಗಿಯಾಗಿ ನಟಿಸಿದ್ರಂತೆ ರಾಜೇಶ್‌-ಛಾಯಾ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಮಹಿಮಾ ಪಾತ್ರದಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ. ನಟಿ ಸಾರಾ ಅಣ್ಣಯ್ಯ ಹಠಮಾರಿ ಹೆಣ್ಣು. ಮಹಿಮಾ ‘ಅಮೃತಧಾರೆ’ ಧಾರಾವಾಹಿಯಲ್ಲಿ ನಾಯಕ ಗೌತಮ ದಿವಾನ್ ಅವರ ಮುದ್ದಿನ ತಂಗಿ ಮಹಿಮಾ ಪಾತ್ರದಲ್ಲಿ ಸಾರಾ ನಟಿಸಿದ್ದಾರೆ.
ಮಹಿಮಾ ಮನಸ್ಸಿನಲ್ಲಿ ಈಗಾಗಲೇ ಪ್ರೀತಿಯೊಂದು ಮೂಡಿದ್ದು ಅವಳ ಹಠದಿಂದ ಆ ಪ್ರೀತಿಯನ್ನು ಗೆಲ್ಲುವುದಕ್ಕೆ ಆಗುತ್ತಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
Exit mobile version