Site icon Vistara News

MasterChef India: ಧರ್ಮಕ್ಕಾಗಿ ಒಂದು ಮೊಟ್ಟೆಯಿಂದ ₹25 ಲಕ್ಷ ಕಳೆದುಕೊಂಡ ಅರುಣಾ; ಏನಿದು ಮೊಟ್ಟೆಯ ಕಥೆ?

MasterChef India

ಬೆಂಗಳೂರು: ಸೋನಿ ಟಿವಿಯ ಜನಪ್ರಿಯ ಬಾಣಸಿಗರ ಶೋ ಮಾಸ್ಟರ್ ಶೆಫ್ ಇಂಡಿಯಾದಲ್ಲಿ(MasterChef India) ತಮಿಳು ನಾಡಿನ ಅರುಣಾ ವಿಜಯ್ ಭಾಗಿಯಾಗಿದ್ದರು. ಶೋ ಶುರುವಾಗಿನಿಂದಲೂ ಅಡುಗೆ ಮಾಡುವುದರಲ್ಲಿ ಅರುಣಾ ಅವರು ನಿಸ್ಸೀಮರು. ಆದರೆ ಈಗ ತಾವು ನಂಬಿದ ಧರ್ಮಕ್ಕಾಗಿ ಅವರು ಶೋದಿಂದ ಹೊರ ಬಂದಿದ್ದಾರೆ.

ತೀರ್ಪುಗಾರರು ಏನೇ ಅಡುಗೆಯನ್ನೂ ಕೇಳಿದರೂ ಲೀಲಾಜಾಲವಾಗಿ ಮಾಡುವ ಇವರು, ಶೋದಿಂದ ಆಚೆ ಬಂದಿದ್ದಾರೆ. ಅವರು ಶೋ‌ನ ಬಹುಮಾನದ ಮೊತ್ತ 25 ಲಕ್ಷ ರೂ. ಗೆಲ್ಲುವ ಹಂತಕ್ಕೆ ಬಂದು ತಲುಪಿದ್ದರು. ಆದರೆ ಕೊನೆಯ ಹಂತದಲ್ಲಿ ಅವರಿಗೆ ಮೊಟ್ಟೆ ಬೇಯಿಸಲು ಹೇಳಲಾಗಿತ್ತು. ಜೈನ ಧರ್ಮಕ್ಕೆ ಸೇರಿದ ಅವರು ಇದಕ್ಕೆ ಒಪ್ಪಿಕೊಂಡಿಲ್ಲ. ಅದು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತೀರ್ಪುಗಾರರು ನೀವು ತಿನ್ನುವುದು ಬೇಡ ಬೇಯಿಸಿಕೊಡಿ ಸಾಕು ಎಂದಿದ್ದಾರೆ. ಅರುಣಾ ಅವರು ಟಾಪ್ ಹತ್ತು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಶೋ ಗೆಲ್ಲುವ ಸಾಮರ್ಥ್ಯ ಅವರಿಗಿತ್ತು. ಆದರೆ ಮೊಟ್ಟೆಯ ಕಾರಣಕ್ಕೆ ಶೋದಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮೂಲಕ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Pathaan Movie | ರಿಯಾಲಿಟಿ ಶೋನಲ್ಲಿ ಪ್ರಚಾರ ಬೇಡ ಅಂದ್ರಾ ಶಾರುಖ್‌ ಖಾನ್? ಇದು ʻಪಠಾಣ್‌ʼ ಹೊಸ ತಂತ್ರ!

ʻʻನಾನು ಮೊಟ್ಟೆಗಾಗಿ ಇಮ್ಯುನಿಟಿ ಪಿನ್ ಅನ್ನು ತ್ಯಜಿಸಿದೆ. ನೀವು ಎಂದಿಗೂ ನಿಮ್ಮ ತತ್ವಗಳನ್ನು ಬಿಟ್ಟು ಯಶಸ್ಸಿನ ಹಿಂದೆ ಓಡುವುದು ಸರಿಯಲ್ಲ. ನೀವು ನಿಮ್ಮ ಮೌಲ್ಯಗಳನ್ನು ಗೌರವಿಸಿ. ಆಗ ಯಶಸ್ಸು ನಿಮ್ಮ ಹಿಂದೆ ಬರುತ್ತದೆ. ನಿಮ್ಮ ಮೌಲ್ಯಗಳು ನಿಮ್ಮನ್ನು ವಿಜೇತರನ್ನಾಗಿ ಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಕೆಲವರು ಅರುಣಾ ಅವರಿಗೆ ಬೈದಿದ್ದಾರೆ. ಕೆಲವರು ಅರುಣಾ ಅವರಿಗೆ ಸಾಥ್‌ ಕೂಡ ನೀಡಿದ್ದಾರೆ.

Exit mobile version