ಕಿರುತೆರೆ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ (Anchor anushree) ಅವರು ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ತುಳು ಪಾಡ್‌ಕಾಸ್ಟ್‌ನಲ್ಲಿ ಸಂದರ್ಶನ ಕೊಟ್ಟಿದ್ದರು. ತಮ್ಮ ಮದುವೆ ವಿಚಾರ ಸೇರಿದಂತೆ ಹಲವು ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು.
ಇದೀಗ ಅನುಶ್ರೀ ಅವರು ಇನ್ಸ್ಟಾಗ್ರಾಮ್ ಮೂಲಕ ನೇರಪ್ರಸಾರದಲ್ಲಿ ಬಂದು ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಮೇ 13ರಂದು ನೇರ ಪ್ರಸಾರದಲ್ಲಿ ಬಂದಿರುವ ಅನುಶ್ರೀಯವರು, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್ ಪಾತ್ರ ಡಿಫರೆಂಟ್!
ಈ ಸಂದರ್ಭದಲ್ಲಿ ಅವರು ಅನುಶ್ರೀ ಅವರು ತಮ್ಮ ವಿರುದ್ಧ ಕೆಲವರು ಮಾಡುವ ಟೀಕೆಗಳ ಕುರಿತು ನೋವು ತೋಡಿಕೊಂಡಿದ್ದಾರೆ.
ʻʻಖುಷಿಯಾಗಿದ್ದರೆ ಓವರ್ ಆ್ಯಕ್ಟಿಂಗ್ ಅಂತೀರಿ, ಸ್ವಲ್ಪ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದರೆ ಅದಕ್ಕೂ ಓವರ್ ಆ್ಯಕ್ಟಿಂಗ್ ಅಂತೀರಿ, ಏನನ್ನಾದರೂ ನೋಡಿ ಆಶ್ಚರ್ಯ ಪಟ್ಟರೆ ಅದಕ್ಕೂ ಹಾಗೆಯೇ ಹೇಳುತ್ತೀರಿ… ಸಾಧನೆಯನ್ನು ಹೊಗಳಿದರೆ ಬಕೆಟ್ ಅಂತೀರಿ. ಒಂದೊಂದು ಭಾವನೆಗೂ ಒಂದೊಂದು ಹೆಸರು ಕೊಡ್ತೀರಾʼʼ ಎಂದು ನೋವು ತೋಡಿಕೊಂಡರು. ʻʻಹತ್ತು ಜನರು ಹೀಗೆಲ್ಲಾ ಹೇಳಿದ್ರೂ, ಕೋಟ್ಯಂತರ ಮಂದಿ ಹರಸುವವರು ಇದ್ದಾರೆ. ಅವರ ಹೊಟ್ಟೆ ತಣ್ಣಗಾಗಿರಲಿʼʼ ಎಂದಿದ್ದಾರೆ.