ಬೆಂಗಳೂರು: ಸುವರ್ಣ ಸೂಪರ್ ಸ್ಟಾರ್ (suvarna superstar) ಕಾರ್ಯಕ್ರಮವನ್ನು ಶಾಲಿನಿ (Super Star Shalini) ನಡೆಸಿಕೊಡುತ್ತಿದ್ದಾರೆ. ಈ ಶೋ ನೋಡುವ ಬಹುತೇಕ ಮಹಿಳೆಯರಿಗೆ, ಶಾಲಿನಿ ಇವತ್ತು ಯಾವ ರೀತಿಯ ಬ್ಲೌಸ್ ಧರಿಸುತ್ತಾರೆ ಎಂಬುದೇ ಕುತೂಹಲ. ಆ ಕಾರ್ಯಕ್ರಮ ಮಹಿಳೆಯರದ್ದೇ ಆದರೂ ಕೂಡ ಶಾಲಿನಿ ಅವರ ಬ್ಲೌಸ್ (suvarna superstar shalini) ಪ್ರಮುಖ ಹೈಲೈಟ್. ಇದೀಗ ಶಾಲಿನಿ ಅವರು ಸಂದರ್ಶನವೊಂದರಲ್ಲಿ ತಮ್ಮ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. 23 ವರ್ಷಗಳ ಹಿಂದೆ ‘ಪಾಪ ಪಾಂಡು’ (Anchor Shalini) ಧಾರಾವಾಹಿಯ ಪಾತ್ರದಿಂದ ಮೋಡಿ (papa pandu old serial) ಮಾಡಿದ್ದರು. ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ ಅವತ್ತಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು.
ಸತತ 5 ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಹೆಂಡತಿ ಅಂದ್ರೆ ಹೆದರುವ ಪುಕ್ಕಲು ಪಾಂಡು ಹಾಗೂ ಖಡಕ್ ಪತ್ನಿ ಶ್ರೀಮತಿ ನಡುವೆ ದಿನಕ್ಕೊಂದು ಕಥೆ ಹೇಳಿ ಧಾರವಾಹಿ ವೀಕ್ಷಕರನ್ನು ರಂಜಿಸಿತ್ತು. ಬಳಿಕ ಇದೇ ತರಹದ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು ಶಾಲಿನಿ. ಆ ಬಗ್ಗೆ ತಮಗೆ ಇನ್ನು ಬೇಸರವಿದೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.
ಶಾಲಿನಿ ಮಾತನಾಡಿ ʻʻಶಿಖರ ಎನ್ನುವ ಧಾರಾವಾಹಿಯಲ್ಲಿ ನಾನು ಮತ್ತು ಸಿಹಿ ಕಹಿ ಚಂದ್ರು ಅವರು ಅಪ್ಪ ಮಗಳ ರೋಲ್ ಮಾಡುತ್ತಿದ್ದೇವು. ನಾನು ಮತ್ತು ಸಿಹಿ ಕಹಿ ಚಂದ್ರು ಅವರು ತುಂಬ ಪುಸ್ತಕಗಳನ್ನು ಓದುತ್ತಿದ್ದೆವು. ಅದರ ಬಗ್ಗೆ ಮಾತನಾಡುತ್ತಿದ್ದೆವು. ಒಂದು ದಿನ ಕಾಲ್ ಮಾಡಿ, ಒಂದು ಸೀರಿಯಲ್ ಮಾಡುತ್ತ ಇದ್ದೀನಿ. ಬರ್ತೀಯಾ ಎಂದು ಕೇಳಿದರು. ಆಮೇಲೆ ಹೋದೆ. ನಾನು ಹೋದಾಗ ಇದು ಕಾಮಿಡಿ ಸೀರಿಯಲ್ ಅಂದ್ರು. ನನಗೆ ಶಾಕ್ ಆಯಿತು. ಅಲ್ಲಿಯವರೆಗೂ ನಾನು ಗಂಭೀರ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದೆ. ನನಗೆ ಕಾಮಿಡಿ ಬರಲ್ಲ ಎಂದೆ. ನಿನಗೆ ಬರುತ್ತೆ ಮಾಡು ಎಂದರು. ಆಡಿಷನ್ ಬಳಿಕ ನೀನು ಸೆಲೆಕ್ಟ್ ಆಗಿದ್ದೀಯಾ. ನೀನೇ ಲೀಡ್ ರೋಲ್, ಶ್ರೀಮತಿ ಅಂತ ಪಾಂಡು ಹೆಂಡಿತಿ ಪಾತ್ರ ಎಂದುಬಿಟ್ಟರುʼʼಎಂದರು.
ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಔಟ್; ಸೋನು ಗೌಡ ನಾಯಕಿ!
ʻʻಪಾಪ ಪಾಂಡು ದಿನ ಬರುತ್ತೇ ಎಂದರು. ಗಂಡನ ಬಳಿ ಬಂದು ಹೇಳಿದೆ. ಪಾಪ ಪಾಂಡು ಹೆಸರು ಕೇಳಿ ಬೇಡ ಅಂದರು. 25 ದಿನ ಕೆಲಸ ಅಂದೆ. 2000 ಅಲ್ಲಿ ಆಫೀಸ್ ಕೆಲಸಕ್ಕೆ ಹೋಗೊ ತರ ಹೋಗ್ತಿದ್ದೆ. ಒಳ್ಳೆಯ ಸಂಬಳ ಕೂಡ ಇತ್ತು. ಸಿದ್ಲಿಂಗು ಡೈರೆಕ್ಟರ್ ವಿಜಯಪ್ರಸಾದ್ ಆಗ ಧಾರಾವಾಹಿ ನಿರ್ದೇಶಿಸುತ್ತಿದ್ದರು. ದಿನಕ್ಕೆ 1000 ರೂಪಾಯಿಯಿಂದ ಆರಂಭಿಸಿ ಮುಂದೆ ಹೋಗ್ತಾ 1700 ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದೆ. ಬರೋಬ್ಬರಿ 1000ಕ್ಕೂ ಅಧಿಕ ಎಪಿಸೋಡ್‌ಗಳಲ್ಲಿ ಧಾರಾವಾಹಿ ಪ್ರಸಾರವಾಯಿತು.5 ವರ್ಷಗಳ ಕಾಲ ಕಾಮಿಡಿ ಪಾತ್ರದಲ್ಲಿ ನೋಡಿದವರು ಬಳಿಕ ಗಂಭೀರ ಪಾತ್ರದಲ್ಲಿ ನೋಡಲು ಇಷ್ಟಪಡಲಿಲ್ಲ. ಆ ರೀತಿ ಸಂಪೂರ್ಣವಾಗಿ ನನ್ನನ್ನು ಹಾಸ್ಯಪಾತ್ರಕ್ಕೆ ಸೀಮಿತವಾಗಿ ಬಿಟ್ಟೆʼʼಎಂದರು.