Site icon Vistara News

Chukki Taare Serial: ‘ಕರಿಮಣಿ’ ಜತೆಗೆ ಮತ್ತೊಂದು ಹೊಸ ಕಥೆ ‘ಚುಕ್ಕಿ ತಾರೆ’!

Another new story colors Kannada Chukki Taare serial Promo Out

ಬೆಂಗಳೂರು: ಕಲರ್ಸ್‌ ಕನ್ನಡದಲ್ಲಿ (Chukki Taare Serial) `ಬಿಗ್‌ ಬಾಸ್‌ʼ ಆದ ಬಳಿಕ ಸಾಲು ಸಾಲು ಧಾರಾವಾಹಿಗಳು, ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಇದೀಗ ʻಚುಕ್ಕಿ ತಾರೆʼ ಹೊಸ ಧಾರಾವಾಹಿ ಅನೌನ್ಸ್‌ ಆಗಿದೆ. ಕಲರ್ಸ್‌ ಕನ್ನಡ ಈ ಧಾರಾವಾಹಿಯ ಪ್ರೋಮೊ ಹಂಚಿಕೊಂಡಿದೆ. ಪ್ರೋಮೊದಲ್ಲಿ ನವೀನ್ ಸಜ್ಜು ಕಾರಿನ ಮೇಲೆ ‘ಚುಕ್ಕಿತಾರೆ’ ಎಂಬ ಪದವನ್ನು ಬರೆದು, ನಗುತ್ತಾ ಮುಂದೆ ಸಾಗಿದ್ದಾರೆ. ತಮ್ಮ ಗಾಯನದಿಂದ ಮನೆಮಾತಾಗಿ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿಯಾದ ನವೀನ್ ಸಜ್ಜು ಈ ಧಾರಾವಾಹಿ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಕಲರ್ಸ್‌ ಕನ್ನಡದಲ್ಲಿ ‘ಶ್ರೀಗೌರಿ’ ಧಾರಾವಾಹಿ ಮೂಡಿ‌ಬರುತ್ತಿದೆ. ಅದರ‌ ಜತೆಗೆ ರಿಯಾಲಿಟಿ ಶೋಗಳಾದ ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್-3’, ‘ಗಿಚ್ಚಿಗಿಲಿ ಗಿಲಿ ಸೀಸನ್ -3’ ಕೂಡ ಹೊಸ ಹೊಸ ಸ್ಪರ್ಧಿಗಳೊಂದಿಗೆ ರಂಜಿಸುತ್ತಿವೆ. ಇದೀಗ ಹೊಸ ಧಾರಾವಾಹಿಗಳು ಇದೀಗ ಅನೌನ್ಸ್ ಆಗಿವೆ.. ‘ಕರಿಮಣಿ’ ಧಾರಾವಾಹಿ ಪ್ರೋಮೊದಲ್ಲಿಯೇ ಕುತೂಹಲವನ್ನು ಹುಟ್ಟು ಹಾಕಿತ್ತು. ಈಗ ಮತ್ತೊಂದು ಹೊಸ ಧಾರಾವಾಹಿ ಅನೌನ್ಸ್ ಆಗಿದ್ದು, ‘ಚುಕ್ಕಿ ತಾರೆ’ ಪ್ರೋಮೊ ಬಿಡಲಾಗಿದೆ.

ಇದನ್ನೂ ಓದಿ: Uttara Kannada News: ವಿಶ್ವದರ್ಶನ ಪ್ರಕಾಶನದ ʼನಟ್ಟಿರುಳುʼ ಕವನ ಸಂಕಲನ, ತ್ರಿಪುರಾಂಬಿಕೆ ಧ್ವನಿಸುರುಳಿ ಲೋಕಾರ್ಪಣೆ

ಪ್ರೋಮೊದಲ್ಲಿ ಏನಿದೆ?

ಹಳೆಯ ಕಾರ್‌ ಮುಂದೆ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದಿದ್ದಾರೆ. ಅದೇ ಸಮಯಕ್ಕೆ ನವೀನ್ ಸಜ್ಜು ಕಲರ್ ಫುಲ್ ಬಲೂನ್‌ಗಳನ್ನು ತಂದಿದ್ದಾರೆ. ಮಕ್ಕಳು ಅಲ್ಲಿಂದ ಓಡಿದ್ದಾರೆ, ನವೀನ್ ಸಜ್ಜು ಕಾರಿನ ಮೇಲೆ ‘ಚುಕ್ಕಿತಾರೆ’ ಎಂಬ ಪದವನ್ನು ಬರೆದು, ನಗುತ್ತಾ ಮುಂದೆ ಸಾಗಿದ್ದಾರೆ. ಇದೀಗ ಈ ಧಾರಾವಾಹಿ ‘ಅಕ್ಕ-ತಂಗಿ’ಯರ ಬಾಂಧವ್ಯದ ಕಥೆ ಇರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.

ಇನ್ನು ಕೆಲವರು ʻʻಬೃಂದಾವನʼ ಧಾರಾವಾಹಿಯನ್ನು ಆದಷ್ಟು ಬೇಗ ಮುಗಿಸಿ, ಈ ಧಾರಾವಾಹಿಯನ್ನು ಬೃಂದಾವನ ಪ್ರಸಾರ ಮಾಡುವ ಸಮಯದಲ್ಲಿ ಹಾಕಿ ಎಂದು ಬೇಡಿಕೆ ಇಡುತ್ತಿದ್ದಾರೆ. ನೋಡುಗರ ಅಪೇಕ್ಷೆ ಮೇರೆಗೆ ಕಲರ್ಸ್ ಕನ್ನಡ ಸಮಯ ಬದಲಾವಣೆ ಮಾಡಲಿದೆಯಾ ಎಂದು ಕಾದು ನೋಡಬೇಕು.

Exit mobile version