Site icon Vistara News

Nitesh Pandey: ಕಿರುತೆರೆ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನ

Anupamaa actor Nitesh Pandey passes away

ಮುಂಬೈ: ‘ಅನುಪಮಾ’ ಧಾರಾವಾಹಿ ಖ್ಯಾತಿಯ ನಿತೇಶ್ ಪಾಂಡೆ (Nitesh Pandey) ಹೃದಯಾಘಾತದಿಂದ ಮೇ 24ರಂದು ನಿಧನರಾಗಿದ್ದಾರೆ. ಹಿಂದಿಯ ಸ್ಟಾರ್ ಪ್ಲಸ್​ನಲ್ಲಿ ‘ಅನುಪಮಾ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಹೆಸರಿನ ಪಾತ್ರವನ್ನು ನಿತೇಶ್ ಪಾಂಡೆ ಮಾಡುತ್ತಿದ್ದರು.

ನಿತೇಶ್ ಪಾಂಡೆ 1990ರಲ್ಲಿ ರಂಗಭೂಮಿಗೆ ಪದಾರ್ಪಣೆ ಮಾಡಿದರು. 1995ರಲ್ಲಿ ʻತೇಜಸ್ʼ ಚಿತ್ರದಲ್ಲಿ ಪತ್ತೇದಾರಿ ಪಾತ್ರವನ್ನು ನಿರ್ವಹಿಸಿದರು. ನಿತೇಶ್ ಪಾಂಡೆ ʻಮಂಜಿಲೀನ್ ಅಪಾನಿ ಅಪಾನಿʼ, ʻಅಸ್ತಿತ್ವ…ಏಕ್ ಪ್ರೇಮ್ ಕಹಾನಿʼ, ʻಸಾಯಾʼ, ʻಜುಸ್ತಜೂʼ ಮತ್ತು ʻದುರ್ಗೇಶ್ ನಂದಿನಿʼಯಂತಹ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ʻಓಂ ಶಾಂತಿ ಓಂʼ ಮತ್ತು ʻಬದಾಯಿ ದೋʼ ಸೇರಿದಂತೆ ಹಲವಿ ಸಿನಿಮಾಗಲಲ್ಲಿ ಅಭಿನಯಿಸಿದ್ದರು. ಡ್ರೀಮ್ ಕ್ಯಾಸಲ್ ಪ್ರೊಡಕ್ಷನ್ಸ್ ಎಂಬ ಹೆಸರಿನ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ‘ಪ್ಯಾರ್​ ಕ ದರ್ದ್​ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಈಗ ನಿತೇಶ್ ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಆಘಾತ ತಂದಿದೆ. ಕಳೆದ 25 ವರ್ಷಗಳಿಂದ ಕಿರುತೆರೆಯಲ್ಲಿ ಪರಿಚಿತರಾಗಿದ್ದರು.

ನಿತೇಶ್ ಅವರ ಭಾವ, ನಿರ್ಮಾಪಕ ಸಿದ್ದಾರ್ಥ್ ನಗರ್ ಈ ಬಗ್ಗೆ ಮಾತನಾಡಿ. ‘ನಿತೇಶ್​ ಅವರು ಮೃತಪಟ್ಟಿದ್ದಾರೆ. ಅವರ ಪತ್ನಿ ಅರ್ಪಿತಾ ಪಾಂಡೆ ಶಾಕ್​ನಲ್ಲಿದ್ದಾರೆ. ಅವರ ತಂದೆ ಮೃತದೇಹ ತರಲು ತೆರಳಿದ್ದಾರೆ. ನನ್ನ ಸಹೋದರಿ ಅರ್ಪಿತಾ ಜತೆ ನನಗೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Ray Stevenson: ಆರ್​ಆರ್​ಆರ್​​ ಚಿತ್ರದಲ್ಲಿ ನಟಿಸಿದ್ದ ರೇ ಸ್ಟೀವನ್​ಸನ್​ ನಿಧನ; ಅರಗಿಸಿಕೊಳ್ಳಲಾಗುತ್ತಿಲ್ಲ ಎಂದ ರಾಜಮೌಳಿ

ಇತ್ತೀಚೆಗೆ ಹಿಂದಿ ಕಿರುತೆರೆಗೆ ಕರಾಳ ದಿನ ಎದುರಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಕಿರುತೆರೆ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಮೃತಪಟ್ಟರು. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಾದ ಬೆನ್ನಲ್ಲೇ ಮೇ 23ರಂದು ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಅವರು ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಕೊನೆಯುಸಿರೆಳೆದರು.

Exit mobile version