ಬೆಂಗಳೂರು: ಕಿರುತೆರೆ ನಟ ರಿತುರಾಜ್ ಸಿಂಗ್ (Rituraj Singh) ಅವರು ಹೃದಯಾಘಾತದಿಂದ (ಫೆ.20) ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಅವರ ಸಹೋದ್ಯೋಗಿ ಮತ್ತು ಸ್ನೇಹಿತ ಅಮಿತ್ ಬೆಹ್ಲ್ ನಿಧನದ ಬಗ್ಗೆ ಮಾಧ್ಯಮಕ್ಕೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಹಲವು ದಿನಗಳಿಂದ ನಟ ಬಳಲುತ್ತಿದ್ದು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿದೆ.
ನಟ ಅಮಿತ್ ಬೆಹ್ಲ್ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿ ʻʻರಿತುರಾಜ್ ಸಿಂಗ್ ಅವರು 12:30ಕ್ಕೆ ನಿಧನರಾದರು. ಹಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಪ್ಯಾಂಕ್ರಿಯಾಟಿಕ್ಸಮಸ್ಯೆಗಳಿಂದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರುʼʼಎಂದು ಹೇಳಿಕೆ ನೀಡಿದ್ದಾರೆ.
ನಟ ಸಂದೀಪ್ ಸಿಕಂದ್ ಕೂಡ ಈ ಬಗ್ಗೆ ಮಾತನಾಡಿ ʻʻಸುದ್ದಿ ಕೇಳಿ ನಾನು ಆಘಾತಕ್ಕೊಳಗಾದೆ. ಯಾರೋ ಒಬ್ಬರು ನನ್ನ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಬೆಳಿಗ್ಗೆಯೇ ಸುದ್ದಿಯನ್ನು ಪೋಸ್ಟ್ ಮಾಡಿದ್ದರು. ನೋಡಿ ಶಾಕ್ ಆದೆ. ನಾನು ʻಕಹಾನಿ ಘರ್ ಘರ್ ಕಿʼಯಲ್ಲಿ ರಿತು ಅವರೊಂದಿಗೆ ನಟಿಸಿದ್ದೆ. ಅದ್ಭುತ ನಟ. ನಟನಿಗಿಂತ ಹೆಚ್ಚಾಗಿ ಅವರು ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿʼʼಎಂದು ಹೇಳಿದರು.
ಇದನ್ನೂ ಓದಿ: Varthur Santhosh: ಹೇಳಿಕೆ ತಿರುಚಿ ತೇಜೋವಧೆ ಎಂದು ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR!
Rest In Peace #RiturajSingh pic.twitter.com/dlxH2xWgI4
— Mr Mask (@MrMask000) February 20, 2024
1993ರಲ್ಲಿ ಜೀ ಟಿವಿಯಲ್ಲಿ ಪ್ರಸಾರವಾದ ʻಬನೇಗಿ ಅಪ್ನಿ ಬಾತ್ʼ, ʻಜ್ಯೋತಿʼ, ʻಹಿಟ್ಲರ್ ದೀದಿʼ, ʻಶಪತ್ʼ, ʻವಾರಿಯರ್ ಹೈʼ, ʻಆಹತ್ʼ, ಮತ್ತು ʻಅದಾಲತ್ʼ, ʻದಿಯಾ ಔರ್ ಬಾತಿ ಹಮ್ʼ ಹೀಗೆ ಮುಂತಾದ ಧಾರಾವಾಹಿಗಳಲ್ಲಿ, ಸಿರೀಸ್‌ಗಳಲ್ಲಿ ರಿತುರಾಜ್ ಸಿಂಗ್ ಕಾಣಿಸಿಕೊಂಡಿದ್ದರು. ತೀರಾ ಇತ್ತೀಚೆಗೆ, ಅವರು ಹಿಟ್ ಶೋ ʻಅನುಪಮಾದʼಲ್ಲಿ ನಟಿಸಿದರು.