ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಪುತ್ರಿಯ ವಿವಾಹ ಸಂಭ್ರಮದಲ್ಲಿದ್ದಾರೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಖತೀಜಾ ರೆಹಮಾನ್ ಅವರು ರಿಯಾಸ್ದೀನ್ ಶೇಕ್ ಮೊಹಮದ್ ಅವರನ್ನು ವಿವಾಹವಾದರು. ಸದಾ ಹಿಜಾಬ್ ಅಥವಾ ಮಾಸ್ಕ್ ಧರಿಸಿಯೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುವ ಖತೀಜಾ, ಮದುವೆಯಲ್ಲೂ ಸಾಂಪ್ರದಾಯಿಕ ಉಡುಪಿನೊಂದಿಗೆ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ.
ರೆಹಮಾನ್ ಅಳಿಯನಾಗಿರುವ ರಿಯಾಸ್ದೀನ್ ಶೇಕ್ ಮೊಹಮ್ಮದ್ ಅವರು ಆಡಿಯೊ ಇಂಜಿನಿಯರ್ ಕೆಲಸ ಮಾಡುತ್ತಾರೆ. ಖತೀಜಾ ಜತೆಗೆ 2021ರ ಡಿಸೆಂಬರ್‌ನಲ್ಲಿ ಎಂಗೇಜ್ ಆಗಿದ್ದ ಶೇಕ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೆನ್ನೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬದೊಂದಿಗಿರುವ ಫೋಟೋವನ್ನು ಖತೀಜಾ ಹಂಚಿಕೊಂಡಿದ್ದಾರೆ. ಅದರಲ್ಲಿ ವಧು ಮತ್ತು ವರನ ಆಸನದ ಬಳಿ, ರೆಹಮಾನ್‌ರ ದಿವಂಗತ ಪತ್ನಿ ಹಾಗೂ ಖತೀಜಾ ಅವರ ತಾಯಿ ಭಾವಚಿತ್ರವನ್ನು ಇಡಲಾಗಿದೆ.
ಆಕೆಯ ತಂದೆಯಂತೆ ಖತೀಜಾ ಕೂಡ ಗಾಯಕಿ-ಸಂಗೀತಗಾರ್ತಿ. ಕೃತಿ ಸನೋನ್ ಅಭಿನಯದ ಮಿಮಿಗಾಗಿ ಅವರು ರಾಕ್ ಎ ಬೈ ಬೇಬಿ ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿದ್ದಾರೆ.
ನಿಶ್ಚಿತಾರ್ಥ ಸಮಾರಂಭದ ಹಲವಾರು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಚಿತ್ರದಲ್ಲಿ ಅವರು ಗುಲಾಬಿ ಮತ್ತು ಬೆಳ್ಳಿಯ ಉಡುಪನ್ನು ಧರಿಸಿದ್ದರು.
ಇದನ್ನೂ ಓದಿ | ʻಆರ್‌ಆರ್‌ಆರ್ʼಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್.. ʻಬಾಹುಬಲಿ-2ʼ ಚಿತ್ರವನ್ನೇ ಮೀರಿಸುತ್ತೆ ಈ ಸಿನಿಮಾ..!