Site icon Vistara News

BBK 9 | ಬಿಗ್‌ ಬಾಸ್‌ಗೆ ಎಂಟ್ರಿ ಕೊಡಲಿದ್ದಾರಾ ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ?

BBK 9

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಒಟಿಟಿ ಮುಕ್ತಾಯಗೊಂಡಿದ್ದು ಟಿವಿ ಸೀಸನ್‌ಗೆ ಸಜ್ಜಾಗುತ್ತಿದೆ. ಈಗಾಗಲೇ ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (BBK 9) ಯಾರೆಲ್ಲ ಇರುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಬಿಗ್‌ ಬಾಸ್ ಒಟಿಟಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ನಾಲ್ಕು ಮಂದಿ ಟಿವಿ ಸೀಸನ್‌ಗೆ ಆಯ್ಕೆ ಆಗಿದ್ದಾರೆ. ಇದೀಗ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಓಂಕಾರ ಗೌಡ ಟಿವಿ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್‌ಬಾಸ್‌ ಒಟಿಟಿ ಸೀಸನ್‌ನಲ್ಲಿ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಎಂಟ್ರಿ ಪಡೆದುಕೊಂಡರು. ಕೋಸ್ಟಲ್‌ವುಡ್ ಸ್ಟಾರ್ ರೂಪೇಶ್ ಶೆಟ್ಟಿ ಎರಡನೇ ಸ್ಪರ್ಧಿಯಾಗಿ ಅವಕಾಶ ಪಡೆದಿದ್ದಾರೆ‌. ಹಾಗೇ ಸಾನ್ಯ ಮತ್ತು ರಾಕೇಶ್ ಅಡಿಗ ಕೂಡ ಸೀಸನ್ 9ಕ್ಕೆ ಬಡ್ತಿ ಪಡೆದಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಕನ್ನಡ ಸೀಸನ್‌ 9ಕ್ಕೆ ದಿನಗಣನೆ ಶುರು!

ಇದರ ಜತೆ ಬಿಗ್‌ಬಾಸ್‌ ಸೀಸನ್‌ 9 ಪ್ರೋಮೊದಲ್ಲಿ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌, ಅನುಪಮಾ ಗೌಡ ಮತ್ತು ವೈಷ್ಣವಿ ಗೌಡ ಕಾಣಿಸಿಕೊಂಡಿದ್ದು, ಸೀಸನ್‌ 9ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೆ ಇದೀಗ ಕಮಲ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಬಿಗ್‌ ಬಾಸ್‌ ಟಿವಿ ಸೀಸನ್‌ಗೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ನಟ ಅನಿರುದ್ಧ ಬಿಗ್‌ ಬಾಸ್‌ಗೆ ಬರುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸುಳ್ಳು ಮಾಹಿತಿ ಎಂದು ಅನಿರುದ್ಧ ಸ್ಪಷ್ಟನೆ ನೀಡಿದ್ದರು. ಈಗ ಮುದ್ದು ಮುಖ, ಖಡಕ್‌ ಲುಕ್‌ ಹಾಗೂ ನಟನೆ ಇಂದ ಈಗಾಗಲೇ ಹೆಸರನ್ನು ಪಡೆದಿರುವ ಅಮೂಲ್ಯ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರಾ? ಇಲ್ಲವಾ ಎಂಬುದು ಕಾದು ನೋಡಬೇಕಿದೆ.

ಈಗಾಗಲೇ ಸೀಸನ್ 9ರ ಪ್ರೋಮೊ ಹಂಚಿಕೊಂಡ ಕಲರ್ಸ್ ಕನ್ನಡ ಸೆ.24ರಿಂದ 9ನೇ ಆವೃತ್ತಿಯನ್ನು ಶುರು ಮಾಡುತ್ತಿದೆ. ಪ್ರವೀಣರ ಜತೆ ನವೀನರು ಇರುವುದು ಈ ಬಾರಿ ಬಿಗ್ ಬಾಸ್‌‌ನ ವಿಶೇಷ. ಈ ಹಿಂದಿನ ಆವೃತ್ತಿಗಳಲ್ಲಿ ಕಾಣಿಸಿಕೊಂಡವರು ಮತ್ತು ಒಟಿಟಿ ಬಿಗ್‌ ಬಾಸ್‌ನಿಂದ ಬಂದವರಿಗಷ್ಟೇ ಅವಕಾಶ ಎನ್ನಲಾಗುತ್ತಿದ್ದು, ಹೀಗಾಗಿ ಅಮೂಲ್ಯ ಅವರಿಗೆ ಎಂಟ್ರಿ ಹೇಗೆ ಸಿಗುತ್ತದೆ ಎಂದು ಕಾದು ನೋಡಬೇಕು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯ ಅವಸ್ಮರಣೀಯ ಘಟನೆಗಳ ಝಲಕ್ ಇಲ್ಲಿವೆ!

Exit mobile version