‘ಬೆಳ್ಳುಳ್ಳಿ ಕಬಾಬ್’ ಖ್ಯಾತಿಯ ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು `ರಾಹುಲ್ಲಾ.. ರಾಹುಲ್ಲಾ.. ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾ’ ಎಂದು ಹೇಳಿ ಟ್ರೋಲ್‌ಗೆ ಗುರಿಯಾಗಿದ್ದರು. ಇದೀಗ ಚಂದ್ರು (Bombat Bhojana) ಅವರು ಬೊಂಬಾಟ್ ಭೋಜನ ಅಡುಗೆ ಮನೆಯಲ್ಲಿ ಘಮ ಘಮಿಸಿದ ಮೆಂತೆ ಪಲಾವ್ ಮಾಡಿದ್ದಾರೆ.
ಚಂದ್ರು ಅವರು ತಮ್ಮ ಹೋಟೆಲ್‌ನಲ್ಲಿ ಅಡುಗೆ ಮಾಡಿ ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಶೂಟ್ ಮಾಡಿಕೊಡುತ್ತಾರೆ. ಚಂದ್ರು ಅವರು ಮಾತನಾಡುವ ಶೈಲಿ ವಿಶಿಷ್ಟ. ಇದಕ್ಕೆ ಅದೆಷ್ಟೋ ಫ್ಯಾನ್ಸ್ ಚಂದ್ರುಗೆ ಫಿದಾ ಆಗಿದ್ದಾರೆ. ಪ್ರತಿ ವಿಡಿಯೊ ಕೊನೆಯಲ್ಲಿ ಚಂದ್ರು ಅವರು ಹೇಳುವ ʻಬರ್ತಾ ಇರೋದ್, ತಿಂತಾ ಇರೋದೇʼಎನ್ನುವ ಮಾತು ಬಹಳ ಫೆಮಸ್ ಎಂದರೆ ತಪ್ಪಿಲ್ಲ.
ಇದನ್ನೂ ಓದಿ: Bombat Bhojana: ʻಬೊಂಬಾಟ್ ಭೋಜನʼದಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷ ಅತಿಥಿ ಪುಟಾಣಿ ಶಾಲ್ಮಲಿ!
ʻಇದೀಗ ಚಂದ್ರು ಅವರು ʻಬೊಂಬಾಟ್ ಭೋಜನಕ್ಕೆʼ ಬಂದು ಸಿಹಿ ಕಹಿ ಚಂದ್ರು ಜತೆ ಮಾತುಕತೆ ಮಾಡಿ, ಸಖತ್ ಆಗಿರೋ ಮೆಂತೆ ಪಲಾವ್ ಮಾಡಿಕೊಟ್ಟಿದ್ದಾರೆ. ಇನ್ನು ಸಿಹಿ ಕಹಿ ಚಂದ್ರು ಅವರು ಚಪ್ಪರಿಸಿಕೊಂಡು ತಿಂದು ಚಂದ್ರು ಅವರ ಅಡುಗೆಯನ್ನು ಹೊಗಳಿದ್ದಾರೆ. ಇದೀಗ ಈ ಪ್ರೋಮೊಗಳು ವೈರಲ್ ಆಗಿವೆ.
ʻಬೊಂಬಾಟ್ ಭೋಜನʼ ಅಡುಗೆ ಮನೆಯಲ್ಲಿ ಘಮ ಘಮಿಸಿದ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಅವರು ಮಾಡಿದ ಮೆಂತೆ ಪಲಾವ್. ಬೊಂಬಾಟ್ ಭೋಜನ ಸೀಸನ್ 4 , ಇಂದು ಮಧ್ಯಾಹ್ನ 12ಕ್ಕೆʼʼ ಎಂದು ಸ್ಟಾರ್ ಸುವರ್ಣ ಪ್ರೋಮೊ ಶೇರ್ ಮಾಡಿಕೊಂಡಿದೆ.
ಸಿಹಿಕಹಿ ಚಂದ್ರು ನಡೆಸಿಕೊಂಡು ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ವಿಶೇಷತೆ ಅಂದರೆ ಬಯಲೂಟ, ಮನೆಯೂಟ, ಸವಿಯೂಟ, ನಮ್ಮೂರ ಊಟ, ಅತಿಥಿ ದೇವೋಭವ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿಯೂ ಮಾಹಿತಿ ನೀಡಲಾಗುತ್ತದೆ.