Site icon Vistara News

Bhagya Lakshmi Serial : 20 ಕೆಜಿ ತೂಕದ ಲೆಹೆಂಗಾ ತೊಟ್ಟಿದ್ದೇಕೆ ಈ ನಟಿ?

Bhagya Lakshmi Serial

ಮುಂಬೈ: ಧಾರಾವಾಹಿಗಳನ್ನು ನೋಡುವುದೆಂದರೆ ಹೆಣ್ಣು ಮಕ್ಕಳಿಗೆ ಇಷ್ಟದ ಕೆಲಸ. ಅದೇ ಧಾರಾವಾಹಿಯಲ್ಲಿ ನಟಿಸಲೆಂದು ಅನೇಕ ನಟ, ನಟಿಯರು ಸಾಕಷ್ಟು ಕಷ್ಟಪಡುತ್ತಾರೆ ಕೂಡ. ಅದರಲ್ಲಿ ಕೆಲವು ಧಾರಾವಾಹಿಗಳು ಮಾತ್ರ ಹೆಣ್ಣು ಮಕ್ಕಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿ ವರ್ಷಗಳ ಕಾಲ ಪ್ರಸಾರವಾಗುತ್ತವೆ. ಅಂಥದ್ದರಲ್ಲಿ ಒಂದು ಹಿಂದಿಯ ʼಭಾಗ್ಯಲಕ್ಷ್ಮಿʼ ಧಾರಾವಾಹಿ(Bhagya Lakshmi Serial). ಈ ಧಾರಾವಾಹಿಯಲ್ಲಿ ನಾಯಕ ನಟಿಯಾಗಿರುವ ಐಶ್ವರ್ಯ ಖರೆ ಅವರು ಧಾರಾವಾಹಿಯ ತೆರೆ ಹಿಂದಿನ ಕಥೆಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ‘ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ; ವಾಗ್ವಾದದಲ್ಲಿ ಗೆದ್ದಿದ್ದು ಯಾರು?
ಹಿಂದಿಯ ʼಭಾಗ್ಯಲಕ್ಷ್ಮಿ ʼ ಧಾರಾವಾಹಿಯಲ್ಲಿ ಇತ್ತೀಚೆಗೆ ಲಕ್ಷ್ಮಿಗೆ, ಅಂದರೆ ಐಶ್ವರ್ಯ ಖರೆ ಅವರಿಗೆ ಮದುವೆ ಮಾಡಿಸಲಾಗಿದೆ. ಆ ಮದುವೆಗೆಂದು ಪೂರ್ತಿ ಧಾರಾವಾಹಿ ತಂಡ ಸಾಕಷ್ಟು ಶ್ರಮ ಹಾಕಿದೆಯಂತೆ. ಲಕ್ಷ್ಮಿಗೆ ಮದುವೆಯಂದು ಹಾಕಲು ಲೆಹೆಂಗಾ ಹೇಗಿರಬೇಕು ಎನ್ನುವುದರ ಬಗ್ಗೆಯೂ ಭಾರೀ ಚರ್ಚೆ ನಡೆಸಲಾಗಿತ್ತಂತೆ. ನಟಿ ಐಶ್ವರ್ಯ ಅವರು ತಾವು ಇದೇ ರೀತಿಯಲ್ಲಿ ಲೆಹೆಂಗಾ ಹಾಕಬೇಕು ಎಂದು ಒಂದಿಷ್ಟು ಸಲಹೆಯನ್ನು ಧಾರಾವಾಹಿಯ ಕಲಾ ತಂಡಕ್ಕೆ ನೀಡಿದ್ದರಂತೆ. ಅದರಂತೆ ಅವರು ಚಿನ್ನ ಮತ್ತು ಕೆಂಪು ಬಣ್ಣವಿರುವ ಲೆಹೆಂಗಾವನ್ನು ಸಿದ್ಧ ಮಾಡಿಸಿಕೊಂಡು ತಮ್ಮ ಮದುವೆಗೆ ಧರಿಸಿದ್ದರು. ಅಂದ ಹಾಗೆ ಆ ಲೆಹೆಂಗಾದ ತೂಕ ಬರೋಬ್ಬರಿ 20 ಕೆಜಿಯಷ್ಟಿತ್ತಂತೆ!

ಲೆಹೆಂಗಾ ಅಷ್ಟೊಂದು ತೂಕವಿದ್ದರೂ ನಟಿ ಉತ್ಸಾಹದಿಂದ ಅದನ್ನು ಹಾಕಿಕೊಂಡು ನಟನೆ ಮಾಡಿದ್ದಾರೆ. ಲೆಹೆಂಗಾ ಮಾತ್ರವಲ್ಲದೆ ನಟಿ ಅದಕ್ಕೆ ತಕ್ಕಂತಹ ಒಡವೆಗಳನ್ನೂ ಧರಿಸಿದ್ದರು. ಅವರು ಧರಿಸಿದ್ದ ನೆಕ್ಲೇಸ್‌ 5ರಿಂದ 6 ಕೆಜಿಯಷ್ಟು ತೂಕವಿತ್ತಂತೆ. ಈ ಬಗ್ಗೆ ಮಾತನಾಡಿರುವ ನಟಿ, “ವಧುವಿನ ರೀತಿ ರೆಡಿಯಾಗುವುದು ನನಗೆ ಯಾವಾಗಲೂ ಖುಷಿ ತಂದುಕೊಡುತ್ತದೆ. ಅದಕ್ಕಾಗಿಯೇ ಈ ಧಾರಾವಾಹಿಯಲ್ಲಿ ಹಲವಾರು ಮಂದಿ ಕುಳಿತುಕೊಂಡು ನನ್ನ ಲುಕ್‌ ಅನ್ನು ತೀರ್ಮಾನ ಮಾಡಿದೆವು. ಅಷ್ಟೊಂದು ತೂಕದ ಲೆಹೆಂಗಾ ಮತ್ತು ಆಭರಣ ಹಾಕಿಕೊಂಡಿದ್ದೆಯಾದರೂ ನನಗೆ ಅದರ ಬಗ್ಗೆ ಖುಷಿಯಿತ್ತು. ನಾನು ವಧುವಿನಂತೆ ಸಿದ್ಧವಾಗುವುದಕ್ಕೇ ಬರೋಬ್ಬರಿ ಒಂದೂವರೆ ತಾಸು ಸಮಯ ತೆಗೆದುಕೊಂಡಿದ್ದೆ” ಎಂದು ಹೇಳಿದ್ದಾರೆ.

ʼಭಾಗ್ಯಲಕ್ಷ್ಮಿ ʼ ಧಾರಾವಾಹಿ ಈಗಾಗಲೇ ಎರಡು ವರ್ಷಗಳನ್ನು ಸಂಪೂರ್ಣಗೊಳಿಸಿದೆ. ಈ ಬಗ್ಗೆ ಖಾಸಗಿ ವಾಹಿನಿಯೊಂದರ ಜತೆ ಸಂದರ್ಶನದಲ್ಲಿ ಮಾತನಾಡಿದ್ದ ಐಶ್ವರ್ಯ ಖರೆ ಅವರು, “ಈ ದಿನ ನಾನು ಎಷ್ಟು ಖುಷಿಯಾಗಿದ್ದೇನೆ ಮತ್ತು ಧನ್ಯಳಾಗಿದ್ದೇನೆ ಎನ್ನುವುದನ್ನು ಮಾತಿನಲ್ಲಿ ಹೇಳಲಾಗದು. ಲಕ್ಷ್ಮಿಯಾಗಿ ನನ್ನ ಪಯಣ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಈ ಎರಡು ವರ್ಷ ತುಂಬಾ ಪ್ರೀತಿ ಮತ್ತು ಭಾವನಾತ್ಮಕವಾಗಿ ಕಳೆದಿದೆ. ಈ ಧಾರಾವಾಹಿ ನನಗೆ ಸಾಕಷ್ಟು ಪ್ರೀತಿಯನ್ನು ಕೊಟ್ಟಿದೆ. ಇಂತಹ ಅದ್ಭುತ ಸಹ ಕಲಾವಿದರೊಂದಿಗೆ ನಟನೆ ಮಾಡುವುದಕ್ಕೆ ನಾನು ಪುಣ್ಯ ಮಾಡಿದ್ದೆ” ಎಂದು ಹೇಳಿದ್ದರು.

ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ
ರೋಹಿತ್‌ ಸುಚಂರಿ ಮತ್ತು ಐಶ್ವರ್ಯ ಖರೆ ನಟಿಸುತ್ತಿರುವ ʼಭಾಗ್ಯಲಕ್ಷ್ಮಿ ʼ ಧಾರಾವಾಹಿ ಹಿಂದಿಯಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಧಾರಾವಾಹಿಗಳಲ್ಲಿ ಒಂದಾಗಿದೆ. ಐಶ್ವರ್ಯ ಅವರು 2014ರಿಂದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅವರು ಈ ಹಿಂದೆ ನಾಗಿನ್‌ 5 ಸೇರಿದಂತೆ ಹಲವು ಧಾರಾವಹಿಗಳಲ್ಲಿ ನಟಿಸಿದ್ದರು.

Exit mobile version