Site icon Vistara News

Bhagya Lakshmi Serial: ʻಭಾಗ್ಯಲಕ್ಷ್ಮೀʼ ಧಾರಾವಾಹಿ ಖ್ಯಾತಿಯ ಆಕಾಶ್ ಚೌಧರಿ ಕಾರು ಅಪಘಾತ

Akash Choudhary

ಬೆಂಗಳೂರು: ಹಿಂದಿ ʻಭಾಗ್ಯಲಕ್ಷ್ಮೀʼ ಧಾರಾವಾಹಿ (Bhagya Lakshmi Serial) ಖ್ಯಾತಿಯ ನಟ ಆಕಾಶ್ ಚೌಧರಿ (Akash Choudhary) ಅಪಘಾತಕ್ಕೆ ಒಳಗಾಗಿರುವದರ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಆಕಾಶ್ ಚೌಧರಿ ತಮ್ಮ ಬೆನ್ಜ್‌ ಕಾರಿನಲ್ಲಿ ಮಹಾರಾಷ್ಟ್ರದ ಲೊನಾವಾಲಾಗೆ ತೆರಳಿದ್ದರು. ಈ ಸಮಯದಲ್ಲಿ ಹಿಂದಿನಿಂದ ಬಂದ ಟ್ರಕ್ ಒಂದು ಆಕಾಶ್ ಚೌಧರಿ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಹಿಂದಿನಿಂದ ಲಾಡಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಚೂರು ಹಾನಿಗೊಳಗಾಗಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ನಟ ʻʻನಾವು ಮುಂಬೈನ ರೆಡ್ ಲೈಟ್‌ನಲ್ಲಿ ಕಾಯುತ್ತಿದ್ದಾಗ ಹಿಂದಿನಿಂದ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ. ನನ್ನ ನಾಯಿ ಹೇಜಲ್ ಸಹ ಇತ್ತು. ನಾನು ಸೀಟ್‌ಬೆಲ್ಟ್ ಧರಿಸಿದ್ದೆ, ಆದ್ದರಿಂದ ನನಗೆ ಏನೂ ಆಗಲಿಲ್ಲ” ಎಂದು ಹೇಳಿದ್ದಾರೆ. ಹೀಗೆ ತಮ್ಮ ಕಾರು ಅಪಘಾತಕ್ಕೀಡಾಗಿದ್ದರ ಬಗ್ಗೆ ಫೋಟೊಗಳನ್ನು ಹಂಚಿಕೊಂಡಿರುವ ಆಕಾಶ್ ಚೌಧರಿ ಟ್ರಕ್ ಚಾಲಕನ ಬೇಜವಾಬ್ದಾರಿತನದಿಂದ ಈ ಅಪಘಾತ ಸಂಭವಿಸಿದೆ ಎಂದು ಬರೆದುಕೊಂಡಿದ್ದಾರೆ ಅಂತಹ ಅಪಘಾತಗಳ ನಂತರ ಹೆಚ್ಚಿನ ಜನರು ಓಡಿಹೋಗುತ್ತಾರೆ, ಆದರೆ ಟ್ರಕ್ ಡ್ರೈವರ್ ಹಾಗೆ ಮಾಡಲಿಲ್ಲ. ಕೆಲವೇ ನಿಮಿಷಗಳಲ್ಲಿ ಪೊಲೀಸರು ಆಗಮಿಸಿ ಟ್ರಕ್ ಚಾಲಕನನ್ನು ಬಂಧಿಸಿದರು. ಆದರೆ ಆಕಾಶ್ ಅವರನ್ನು ಹೋಗಲು ಬಿಡುವಂತೆ ಮನವೊಲಿಸಿದರು ಎಂದು ವರದಿಯಾಗಿದೆ.

ಇದನ್ನೂ ಓದಿ: Praveen Kumar: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು

ಇನ್ನು ಈ ಪೋಸ್ಟ್ ಕಂಡ ಆಕಾಶ್ ಚೌಧರಿ ಅಭಿಮಾನಿಗಳು ಜೋಪಾನವಾಗಿ ಕಾರು ಚಲಾಯಿಸಿ, ಚಿಂತಿಸಬೇಡಿ, ವಿಶ್ರಾಂತಿ ಪಡೆದುಕೊಂಡು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ನೀವು ಪಾರ್ಟಿ, ಪಬ್, ಮದ್ಯ ಸೇವನೆಯನ್ನು ತುಸು ಕಡಿಮೆ ಮಾಡಿ, ಪ್ರತೀ ವೀಕೆಂಡ್ ಪಾರ್ಟಿ ಎಂದು ಸುತ್ತಾಡುತ್ತಿದ್ದರೆ ಈ ರೀತಿ ಅಪಘಾತ ಸಂಭವಿಸುವುದ ಪಕ್ಕ ಎಂದು ಕಮೆಂಟ್‌ ಮಾಡಿದ್ದಾರೆ.

Exit mobile version