Site icon Vistara News

Tanvi Rao: ಕೈಯಲ್ಲಿ ತಂಬೂರಿ ಹಿಡಿದು ಮಿಂಚಿದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ತನ್ವಿ ರಾವ್!

bhagyalakshmi actress tanvi rao new photoshoot
‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮೂಲಕ ವೀಕ್ಷಕರಿಗೆ ಚಿರಪರಿಚಿತರಾಗಿರುವ ತನ್ವಿ ರಾವ್ (Tanvi Rao) ಕೈಯಲ್ಲಿ ತಂಬೂರಿ ಹಿಡಿದು ಕಣ್ಮನ ಸೆಳೆಯುತ್ತಿದ್ದಾರೆ.

ಬಾಲಿವುಡ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟನೆಯ ‘ಗುಲಾಬ್ ಗ್ಯಾಂಗ್’ ಸಿನಿಮಾದಲ್ಲಿಯೂ ನಟಿಸಿದ್ದರು. ದೆಹಲಿ ದೂರದರ್ಶನದ ‘ಧಿನಕ್ ಧಿನ್ ಧಾ’ ಹಾಗೂ ಮುಂಬೈ ದೂರದರ್ಶನದ ‘ಧಮ್ ಧಮಾ ಧಮ್’ ಕಾರ್ಯಕ್ರಮಗಳಲ್ಲಿ ಬಾಲ ಕಲಾವಿದೆಯಾಗಿ ಭಾಗವಹಿಸಿದ್ದರು. 9 ವರ್ಷ ವಯಸ್ಸಿದ್ದಾಗಲೇ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಅಪೂರ್ವ ಬಾಲ ಪ್ರತಿಭೆ ಪ್ರಶಸ್ತಿಯನ್ನು ಪಡೆದಿದ್ದರು.

ಇದನ್ನೂ ಓದಿ: Kaveri Kannada Medium: ದೈವಾರಾಧನೆಗೆ ಅವಹೇಳನ; ಧಾರಾವಾಹಿ ನಿರ್ದೇಶಕ ಪ್ರೀತಮ್ ಶೆಟ್ಟಿ ಹೇಳಿದ್ದೇನು?

ಆಕೃತಿ ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ನಟಿ ತನ್ವಿ ರಾವ್ ‘ರಂಗ್ ಬಿ ರಂಗ್’ ಚಿತ್ರಕ್ಕೆ ಬಣ್ಣ ಹಚ್ಚಿದರು. ‘ರಾಧೆ ಶ್ಯಾಮ’ ಧಾರಾವಾಹಿಯಲ್ಲಿ ನಟಿಸಿ ತಮಿಳಿನ ಜಮೀಲ ಎಂಬ ಸೀರಿಯಲ್‌ನಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Kruttika Ravindra: ʻಭೂಮಿಗೆ ಬಂದ ಭಗವಂತ’ ಧಾರಾವಾಹಿಯ ನಟಿ ಕೃತ್ತಿಕಾ ರವೀಂದ್ರ ಬಗ್ಗೆ ಗೊತ್ತಿರದ ಸಂಗತಿಗಳಿವು!

ಇದೀಗ ಸೀರೆಯನ್ನು ಧರಿಸಿರುವ ತನ್ವಿ ರಾವ್ ಫೋಟೋ ಶೂಟ್ ಮಾಡಿಸಿದ್ದಾರೆ. ತಂಬೂರಿ ಹಿಡಿದು ಕೊಟ್ಟಿರುವ ಪೋಸ್ ನೋಡಿದ ಅಭಿಮಾನಿಗಳು ನಕ್ಷತ್ರದಂತೆ ಹೊಳೆಯುತ್ತಿದ್ದೀರಾ ಎಂದು ಹೊಗಳಿ ಕಮೆಂಟ್ ಮಾಡಿದ್ದಾರೆ.

Exit mobile version