Site icon Vistara News

Gowthami Gowda: ತಾಯಿಯಾದ ʻಭಾಗ್ಯಲಕ್ಷ್ಮೀ’ ಧಾರಾವಾಹಿ ನಟಿ ಗೌತಮಿ, ಮನೆಗೆ ಹೊಸ ಅತಿಥಿ!

Gowthami Gowda Baby goirl

‘ಭಾಗ್ಯಲಕ್ಷ್ಮೀ’ ಧಾರಾವಾಹಿ (Gowthami Gowda) ನಟಿ, ‘ಬಿಗ್ ಬಾಸ್ ಕನ್ನಡ ಸೀಸನ್ 3’ ಶೋ ಸ್ಪರ್ಧಿ ಗೌತಮಿ ಗೌಡ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.

ಈ ಸಿಹಿ ಸುದ್ದಿಯನ್ನು ಸೋಷಿಯಲ್‌ ಮೀಡಿಯಾ ಮೂಲಕ ನಟಿ ಹಂಚಿಕೊಂಡಿದ್ದಾರೆ.ಈ ಹಿಂದೆ ಸೀಮಂತ ಮಾಡಿಕೊಂಡಿದ್ದ ಫೋಟೊಗಳನ್ನು ನಟಿ ಹಂಚಿಕೊಂಡಿದ್ದರು.

ʻʻಹೆಣ್ಣು ಮಗು, ನಮ್ಮ ಕನಸುಗಳು ನನಸಾಗಿವೆ, ನಮ್ಮ ಮುದ್ದು ಮಗುವನ್ನು ನಾವು ಕುಟುಂಬಕ್ಕೆ ಸ್ವಾಗತಿಸುತ್ತೇವೆ.
ನಿಮ್ಮ ಎಲ್ಲಾ ಶುಭಾಶಯಗಳು ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿʼʼಎಂದು ಗೌತಮಿ ಫೋಟೊ ಮೂಲಕ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

ಧಾರಾವಾಹಿ ಜತೆಗೆ ನಟಿ ಸಿನಿಮಾದಲ್ಲಿಯೂ ತೊಡಗಿಸಿಕೊಂಡಿದ್ದರು. ‘ಚಿ ಸೌ ಸಾವಿತ್ರಿ’, ‘ಚೆಲುವಿ’ ಧಾರಾವಾಹಿಯಲ್ಲಿ ನಟಿಸಿದ್ದರು.

ಜಾರ್ಜ್ ಕ್ರಿಸ್ಟಿ ಹಾಗೂ ಗೌತಮಿ ಗೌಡ ಅವರು 3 ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆ ಆಗಿದ್ದರು.

Exit mobile version