Site icon Vistara News

Bhagyalakshmi Serial Kannada: ಭಾಗ್ಯಳ ನೋಡಿ 10ನೇ ಕ್ಲಾಸ್​ ಪರೀಕ್ಷೆ ಬರೆದ್ರಂತೆ! ಪ್ರೇರಣೆ ಅಂದ್ರೆ ಹೀಗಿರ್ಬೇಕು!

Bhagyalakshmi Serial Kannada

ಬೆಂಗಳೂರು: ಕಲರ್ಸ್‌ ಕನ್ನಡ ಧಾರಾವಾಹಿಯಲ್ಲಿ (Bhagyalakshmi Serial Kannada) ಭಾಗ್ಯಲಕ್ಷ್ಮಿ ಸೀರಿಯಲ್ ಪ್ರಸಾರ ಕಾಣುತ್ತಿದೆ. ಅತ್ತೆ ಸದಾ ಭಾಗ್ಯ ಪರ ನಿಂತು ಸಾಥ್‌ ಕೊಡುತ್ತಿದ್ದಾರೆ. ಧಾರಾವಾಹಿಯಲ್ಲಿ ಭಾಗ್ಯ ಅತ್ತೆಯ ಸಪೋರ್ಟ್‌ ಮೇರೆಗೆ ಸ್ಕೂಲ್‌ಗೆ ಸೇರಿ ಮಗಳ ಜತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಬರೆಯುತ್ತಾಳೆ. ಇದೀಗ ಈ ಧಾರಾವಾಗಿಪ್ರೇರೇಪಿತರಾಗಿರುವ ಮಹಿಳೆಯೊಬ್ಬರು ಮಗನ ಜತೆಗೆ ಪರೀಕ್ಷೆ ಬರೆದಿದ್ದಾರೆ. ಇದೀಗ ಸಾಧಕಿಯ ಬಗ್ಗೆ ಪ್ರೋಮೊ ಹಂಚಿಕೊಂಡಿದೆ ಕಲರ್ಸ್‌ ವಾಹಿನಿ.

ಯುಗಾದಿ ವಿಶೇಷ ಸಂಚಿಕೆಯಲ್ಲಿ ತಾಯಿ ಮತ್ತು ಮಗನನ್ನು ವೇದಿಕೆ ಮೇಲೆ ಕರೆದು ಅವರ ಅನುಭವವನ್ನು ಹೇಳಸಿದೆ ವಾಹಿನಿ. ʻʻನಾನು ಭಾಗ್ಯಲಕ್ಷ್ಮಿ ಸೀರಿಯಲ್​ ನೋಡಿ ಯಾಕೆ ಪರೀಕ್ಷೆ ಬರೆಯಬಾರದು ಎಂದು ಅನಿಸಿತು. ಮುಂದೆ ಪಾಸ್‌ ಆದರೆ ಏನಾದರೂ ಮಾಡಬಹುದು ಎಂದು ಪರೀಕ್ಷೆ ಕಟ್ಟಿದೆʼʼ ಎಂದರು. ಮಗ ಕೂಡ ʻʻನನ್ನ ಅಮ್ಮ ಇಂದು ಪರೀಕ್ಷೆ ಕಟ್ಟಿದ್ದು ಸಂತೋಷ ಆಯ್ತು. ಇಬ್ಬರೂ ಮನೆಯಲ್ಲಿ ಒಟ್ಟಿಗೆ ಕೂತು ಅಭ್ಯಾಸ ಮಾಡುತ್ತಿದ್ದೇವುʼʼ ಎಂದಿದ್ದಾನೆ. ಪರೀಕ್ಷೆಯಲ್ಲಿ ತೇರ್ಗಡೆಯಾಗುವವರೆಗೂ ಪ್ರಯತ್ನ ಬಿಡುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಇದಕ್ಕೆ ಭಾಗ್ಯ ಅತ್ತೆ ಪಾತ್ರದಾರಿ ಪದ್ಮಜಾ ಅವರು ವೇದಿಕೆಯಲ್ಲಿ ಮಹಿಳೆಗೆ ʻʻಭಾಗ್ಯಳಿಗೆ ನಾನು ಹೇಳಿದ ಹಾಗೇ ನಿಮಗೂ ಅಂತಿದ್ದೀನಿ. ಪಾಸ್‌ ಆದರೆ ಗೆದ್ದ ಹಾಗೆʼʼ ಎಂದರು.

ಇದನ್ನೂ ಓದಿ: Bhagyalakshmi Serial Kannada: ಭಾಗ್ಯಾಳ ಪಾಲಿಗೆ ಈ ಹೊಸ ಅತಿಥಿ ನೆರವಾಗ್ತಾಳಾ? ಯಾರದು ?

ಕಲರ್ಸ್‌ ಕನ್ನಡ ಪ್ರೋಮೊ

ಧಾರಾವಾಹಿಗಳಿಗೆ ಮಹಿಳಾ ವೀಕ್ಷಕರ ಸಂಖ್ಯೆ ಹೆಚ್ಚು. ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ, ಭಾಷೆ ಯಾವುದೇ ಇರಲಿ ಮಹಿಳೆಯರಿಗೇ ಪ್ರಾಧಾನ್ಯತೆ ಹೆಚ್ಚು. ಇಲ್ಲಿಯವರೆಗೆ ಅಳುಮುಂಜಿಯಂತಿದ್ದ ಭಾಗ್ಯಳ ಬಾಯಲ್ಲಿ ಖಡಕ್‌ ಡೈಲಾಗ್​ಗಳನ್ನು ಹೇಳಿಸುತ್ತಿರುವ ನಿರ್ದೇಶಕರಿಗೆ ಭಾಗ್ಯ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಸುಷ್ಮಾ ರಾವ್, ಭೂಮಿಕಾ ರಮೇಶ್, ಶಮಂತ್ರ ಬ್ರೊ ಗೌಡ, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್, ಸುಷ್ಮಾ ನಾಣಯ್ಯ ಮುಂತಾದವರು ನಟಿಸುತ್ತಿದ್ದಾರೆ. ಇನ್ನು ಸುಷ್ಮಾ ರಾವ್ ಅವರು ಆರು ವರ್ಷಗಳ ಬಳಿಕ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

Exit mobile version