Site icon Vistara News

Bharjari Bachelors: `ಭರ್ಜರಿ ಬ್ಯಾಚುಲರ್ಸ್’ ರುದ್ರ ಮಾಸ್ಟರ್‌ಗೆ ಜೋಡಿಯಾಗಿ ಹೊಸ ನಟಿ ಎಂಟ್ರಿ!

Asha Ayyanar

ಬೆಂಗಳೂರು; ಭರ್ಜರಿ ಬ್ಯಾಚುಲರ್ಸ್ (bharjari bachelors) ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋಗೆ ವ್ಯಾಪಕ ಮೆಚ್ಚುಗೆಗೆಳು ಇವೆ. ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಹತ್ತು ವಾರಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಶೋಗೆ ಗುಡ್ ಬೈ ಹೇಳಿರುವುದು ಗೊತ್ತೇ ಇದೆ. ರುದ್ರ ಮಾಸ್ಟರ್ ಪಾರ್ಟನರ್‌ ಆಗಿ ಶೋನಲ್ಲಿ ಭಾಗವಹಿಸಿದ್ದ ಚಂದನ ಅನಂತಕೃಷ್ಣ ಹೋದ ವಾರದ ಎಪಿಸೋಡ್‌ನಲ್ಲಿ ಈ ಶೋದಿಂದ ಹೊರ ಬಂದಿದ್ದಾರೆ. ಚಂದನಾ ಅವರ ಜಾಗಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇತ್ತು. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಾಯಕಿ ಭಾಗ್ಯ ತಂಗಿ ಪೂಜಾ ಆಗಿ ನಟಿಸುತ್ತಿರುವ ಆಶಾ ಅಯ್ಯನರ್ (Asha Ayyanar) ಅವರು ‘ಭರ್ಜರಿ ಬ್ಯಾಚುಲರ್ಸ್’ ತಂಡ ಸೇರಿದ್ದಾರೆ.

ಆಶಾ ಅಯ್ಯನರ್ ಅವರು ರುದ್ರ ಮಾಸ್ಟರ್ ಅವರಿಗೆ ಜೋಡಿಯಾಗಿ ಆಶಾ ಅವರು ಕಾಣಿಸಿಕೊಳ್ಳಲಿದ್ದು ಈಗಾಗಲೇ ವಾಹಿನಿ ಬಿಡುಗಡೆ ಮಾಡಿರುವ ಈ ವಾರದ ಸಂಚಿಕೆಯ ಪ್ರೋಮೊನಲ್ಲಿ ಆಶಾ ಅವರನ್ನು ಕಾಣಬಹುದು.’ ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಪೂಜಾ ಪಾತ್ರದಲ್ಲಿ ಕಾಣಿಸಿಕೊಂಡರುವ ಆಶಾ ಅವರದ್ದು ನೆಗೆಟಿವ್‌ ಪಾತ್ರ. ಧಾರಾವಾಹಿಯಲ್ಲಿ ಲಕ್ಷ್ಮೀಗೆ ಗೋಳು ಕೊಡುವುದೇ ಇಕೆಯ ಕೆಲಸ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಮೂಲಕ ನಟನೆಗೆ ಕಾಲಿಟ್ಟ ಆಶಾ ಅಯ್ಯನರ್ ತದ ನಂತರ ನಟಿಸಿದ್ದು ‘ಮೂರುಗಂಟು’ ಧಾರಾವಾಹಿಯಲ್ಲಿ‌. ‘ಮೂರು ಗಂಟು’ ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದ ಇವರು ಇದೀಗ ‘ಭಾಗ್ಯಲಕ್ಷ್ಮಿ’ಯ ಪೂಜಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಇದನ್ನೂ ಓದಿ: Chandana Ananthakrishna: ‘ಭರ್ಜರಿ ಬ್ಯಾಚುಲರ್ಸ್’ ಶೋಗೆ ನಟಿ ಚಂದನಾ ಗುಡ್‌ ಬೈ ಹೇಳಿದ್ದೇಕೆ?

ಚಂದನಾ ಶೋಗೆ ಗುಡ್ ಬೈ ಹೇಳಿದ್ಯಾಕೆ?

ಶೋನಲ್ಲಿ ಭಾಗವಹಿಸುತ್ತಿರುವ ಇತರ ಹಲವಾರು ಸ್ಪರ್ಧಿಗಳು ಎಲ್ಲರೂ ಸೇರಿ ತಮ್ಮ ಕೈ ಅಚ್ಚಿರುವ ಒಂದು ದೊಡ್ಡ ಕ್ಯಾನ್ವಾಸ್‌ನಲ್ಲಿ ಚಂದನಾ ಅನಂತಕೃಷ್ಣಗೆ ಶುಭ ಹಾರೈಕೆಗಳನ್ನು ಬರೆದು ಕೊನೆಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ರೀತಿ ಪ್ರೀತಿಯಿಂದ ಸಿಕ್ಕ ಗಿಫ್ಟ್‌ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿ ಶೋವಿನಿಂದ ಹೊರ ನಡೆದಿದ್ದಾರೆ.

ಇದೇ ವಾಹಿನಿಯಲ್ಲಿ ಸದ್ಯದಲ್ಲೇ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಂದರಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಚಂದನಾ ಅನಂತಕೃಷ್ಣ ಆ ಧಾರಾವಾಹಿಯ ತಯಾರಿಗಾಗಿ ಹೊರಬಂದಿದ್ದಾರೆ.

ಬಿಗ್​ಬಾಸ್​ ಸೀಸನ್​ 7ರಿಂದ ಈವರೆಗೂ ಹಲವಾರು ಧಾರಾವಾಹಿಗಳಿಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಚಂದನಾ ಅನಂತಕೃಷ್ಣ. ಕಲರ್ಸ್‌ ಕನ್ನಡದ ಹೂ ಮಳೆ, ರಾಜ ರಾಣಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ನಟಿ ಹೊಸ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಫ್ಯಾನ್ಸ್‌ಗೆ ಖುಷಿ ಆಗಿದೆ.

Exit mobile version