Site icon Vistara News

Bhavya Gowda: ಡ್ರಿಪ್ಸ್‌ ಹಾಕಿದ್ದರೂ ಶೂಟಿಂಗ್‌ಗೆ ಬರಲೇ ಬೇಕು ಅಂದ್ರು ಎಂದ ʻಗೀತಾ ಧಾರಾವಾಹಿʼ ನಟಿ ಭವ್ಯಾ ಗೌಡ!

Bhavya Gowda shares her experiences during shooting

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಗೀತಾʼ ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ(Bhavya Gowda)ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಶೂಟಿಂಗ್ ಸಮಯದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ʻʻರೀಲ್ಸ್‌ ಮಾಡೋವಷ್ಟು ಸುಲಭವಲ್ಲ ಶೂಟಿಂಗ್. ಯಾವುದೋ ವಿಡಿಯೊಗೆ ಲಿಪ್‌ ಸಿಂಕ್‌ ಮಾಡೋದು ಬೇರೆ. ಆದರೆ ನಟನೆಯಲ್ಲಿ ಭಾವನೆಗಳನ್ನು ತೋರಿಸಬೇಕು. ವಾಯ್ಸ್ ಓವರ್ ಕೊಡಬೇಕು. ಹೀಗೆ ಸಾವಿರ ಜವಾಬ್ದಾರಿಗಳು ನಮ್ಮ ಮೇಲಿರುತ್ತದೆʼʼಎಂದರು ಭವ್ಯಾ.

ಇದನ್ನೂ ಓದಿ: Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

ದುಡಿಮೆ ಹಿಂದಿನ ಕಷ್ಟ ಯಾರಿಗೂ ಗೊತ್ತಿಲ್ಲ. ಒಂದೊಮ್ಮೆ ತುಮಕೂರಿನಲ್ಲಿ ಫುಡ್ ಪಾಯಿಸನ್ ಆಗಿತ್ತು.ಡಾಕ್ಟರ್ ಬಳಿ ಹೋಗಿ ಡ್ರಿಪ್ಸ್ ಹಾಕಿಸಿಕೊಂಡು ಬಂದಿದ್ದೆ.ಡ್ರಿಪ್ಸ್ ಹಾಕಿಸಿಕೊಂಡಿದ್ದೇನೆ ಶೂಟಿಂಗ್ ಕಷ್ಟ ಎಂದರೂ ಅದೆಲ್ಲ ನಮಗೆ ಗೊತ್ತಿಲ್ಲ ಬನ್ನಿ ಎಂದರು. ಆಗ ಹೋಗಲೇ ಬೇಕಾಯಿತು.

ಗೀತಾ ಧಾರಾವಾಹಿ ಆರಂಭದಲ್ಲಿ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿತ್ತು. ಧಾರಾವಾಹಿ ಬಿಡುತ್ತೇನೆ ಎಂದು ಭವ್ಯಾ ಅವರು ನಿರ್ದೇಶಕರ ಬಳಿ ಅದೆಷ್ಟೋ ಬಾರಿ ಹೇಳಿದ್ದೂ ಇದೆ ಅಂತೆ. ಕೊನೆಗೆ ನಿರ್ದೇಶಕರ ಪಾಸಿಟಿವ್‌ ಮಾತುಗಳೇ ನನ್ನನ್ನು ಪ್ರೋತ್ಸಾಹಿಸಿದ್ದು ಎಂದು ನಟಿ ಹೇಳಿಕೊಂಡಿದ್ದಾರೆ.

2020 ಜನವರಿ 6ರಂದು ‘ಗೀತಾ’ ಧಾರಾವಾಹಿ ಪ್ರಸಾರವನ್ನು ಆರಂಭಿಸಿತ್ತು. ಕೆ ಎಸ್ ರಾಮ್‌ಜೀ ಅವರು ಗಗನಾ ಎಂಟರ್‌ಪ್ರೈಸಸ್‌ನಡಿ ಈ ಧಾರಾವಾಹಿಯ ನಿರ್ಮಾಣ ಮಾಡಿದ್ದರು.

Exit mobile version