ʻನಂದಿನಿ 2ʼ, ʻಸುಂದರಿʼ ಸೀರಿಯಲ್‌ನ ನಿರ್ಮಾಣ ಮಾಡಿರುವ ರಮೇಶ್, ಇದೀಗ ‘ನೀನಾದೆ ನಾʼ (Neenadena Serial) ಎಂಬ ಸೀರಿಯಲ್‌ಗೆ ಕೈ ಜೋಡಿಸಿದ್ದರು. ಕನ್ನಡ ಕಿರುತೆರೆಯಲ್ಲಿ ʻಕಮಲಿʼ, ʻನಾಗಿಣಿ 2ʼ, ʻಮಂಗಳಗೌರಿ ಮದುವೆʼ, ʻಅರಮನೆ ಗಿಳಿʼ, ʻಸುಂದರಿʼ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ, ನಟಿ ಭವ್ಯಶ್ರೀ ಇದೀಗ ʻನೀನಾದೆ ಸೀರಿಯಲ್ʼಗೆ ಗುಡ್‌ಬೈ ಹೇಳಿದ್ದಾರೆ.
ನೀನಾದೆ ನಾ ಸೀರಿಯಲ್‌ನಲ್ಲಿ ಭವ್ಯಶ್ರೀ ಅವರ ಶೈಲೂ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
ಧಾರಾವಾಹಿಯಿಂದ ಹೊರನಡೆದದ್ದು ಯಾಕೆ ಎಂದು ನಟಿ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ʻʻನಮಸ್ಕಾರ. ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿಯಲ್ಲಿ ನನ್ನ ‘ಶೈಲೂ’ ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ… ಇದೀಗ ನನ್ನ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ. ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್ ಅರವಿಂದ್ ಸರ್ ಅವರಿಗೆ, ರವಿ ಜೋಶಿ ಸರ್ ಅವರಿಗೆ ಹಾಗೂ ಸ್ವಾರ್ ಸುವರ್ಣ ವಾಹಿನಿಗೆ ನನ್ನ ಹೃದಯಂತರಾಳದ ಧನ್ಯವಾದಗಳು. ನನ್ನ ಈ ಪಯಣದಲ್ಲಿ ಜತೆಯಾದ ಧಾರಾವಾಹಿಯ ಎಲ್ಲಾ ತಾಂತ್ರೀಕ ಕುಟುಂಬಕ್ಕೆ ಹಾಗೂ ಕಲಾವಿದ ಸ್ನೇಹಿತರಿಗೆ ನನ್ನ ನಮನ. ಇಷ್ಟು ದಿನ ನೀವೆಲ್ಲರೂ ನನ್ನ ‘ಶೈಲೂ’ ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ. ಭೂಮಿ ದುಂಡಗಿದೆ…ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೆನೆ. ಆಗ ಮತ್ತೆ ಭೇಟಿಯಾಗೋಣ..ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ. ಧನ್ಯವಾದಗಳುʼʼಎಂದು ಭವ್ಯಶ್ರೀ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Physical Abuse: ನಡುಬೀದಿಯಲ್ಲಿ ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಬೆದರಿಕೆ
ಕನ್ನಡ ಕಿರುತೆರೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಸ್ಟಾರ್ ಸುವರ್ಣದಲ್ಲಿ ʻನೀನಾದೆ ನಾʼ ಎಂಬ ಸೀರಿಯಲ್ ಆರಂಭವಾಗಿತ್ತು. ಈ ಕತೆಯಲ್ಲಿ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ಸಂಸ್ಕಾರ-ಸಂಸ್ಕೃತಿ ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕತೆಯ ನಾಯಕಿ ‘ವೇದಾ’. ಇನ್ನು ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾಡೋ ಈತನಿಗೆ, ಆಚಾರ-ವಿಚಾರ ಸಂಸ್ಕಾರವಂತೂ ಇಲ್ವೇ ಇಲ್ಲ. ‘ನೀನಾದೆ ನಾ’ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಅಭಿನಯಿಸುತ್ತಿದ್ದಾರೆ.