Site icon Vistara News

Bigg Boss Kannada 9 | ಟಿವಿ ಸೀಸನ್‌ನಲ್ಲಿ ಪ್ರವೀಣರ ಜತೆ ನವೀನರು; ಶೋಗಿನ್ನು ಒಂಭತ್ತೇ ದಿನ ಬಾಕಿ!

Bigg-Boss-Kannada

ಬೆಂಗಳೂರು: ಬಿಗ್‌ ಬಾಸ್‌ ಒಟಿಟಿ ಕೊನೆಯ ಹಂತದಲ್ಲಿದೆ. ಇನ್ನೇನು ಟಿವಿ ಸೀಸನ್‌ ಶುರುವಾಗಬೇಕಿದೆ. ಕಿರುತೆರೆಯ ಬಿಗ್‌ ಬಾಸ್‌ ಯಾವಾಗ ಪ್ರಾರಂಭವಾಗಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಕಲರ್ಸ್‌ ಕನ್ನಡ ಹೊಸ ಪ್ರೋಮೊವನ್ನು ಬಿಡುಗಡೆ ಮಾಡಿದ್ದು, ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada 9) ಆರಂಭಕ್ಕೆ ಇನ್ನು ಒಂಭತ್ತು ದಿನವಷ್ಟೇ ಬಾಕಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಶೋ ಗ್ರ್ಯಾಂಡ್‌ ಪ್ರೀಮಿಯರ್‌ ಸೆಪ್ಟೆಂಬರ್‌ ೨೪ರ ಸಂಜೆ 6 ಗಂಟೆಗೆ ಶುರುವಾಗಲಿದೆ. ಈ ಶೋ ನಿತ್ಯ 9.30ಕ್ಕೆ ಪ್ರಸಾರವಾಗಲಿದೆ. ಈ ಬಾರಿ ಪ್ರವೀಣರ ಜತೆ ನವೀನರು ಇರಲಿದ್ದಾರೆ ಎಂದು ಪ್ರೋಮೊದಲ್ಲಿ ಹೇಳಲಾಗಿದ್ದು, ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿಗಳ ಜತೆ ಹೊಸಬರೂ ಇರಲಿದ್ದಾರೆ ಎನ್ನಲಾಗುತ್ತಿದೆ.

ಪ್ರೋಮೊದಲ್ಲಿ ಹಿಂದಿನ ಸೀಸನ್‌ ಸ್ಪರ್ಧಿಗಳಾದ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌, ಅನುಪಮಾ ಗೌಡ ಮತ್ತು ವೈಷ್ಣವಿ ಗೌಡ ಕಾಣಿಸಿಕೊಂಡಿದ್ದು, ಸೀಸನ್‌ 9ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೂ ದಿನ ಪ್ರೋಮೊ ಹೋಲಿಕೆ ಮಾಡಿದರೆ ಈ ಬಾರಿ ವಿಭಿನ್ನವಾಗಿದೆ.

ಕೆಲವು ದಿನಗಳ ಹಿಂದಷ್ಟೇ ನಟ ಅನಿರುದ್ಧ ಬಿಗ್‌ ಬಾಸ್‌ ಶೋದಲ್ಲಿ ಇರಲಿದ್ದಾರೆ ಎಂದು ಚರ್ಚೆಗಳು ಹುಟ್ಟಿಕೊಂಡಿತ್ತು. ಆದರೆ, ತಾವು ಇದರಲ್ಲಿ ಭಾಗವಹಿಸುತಿಲ್ಲ ಎಂದು ಅನಿರುದ್ಧ ಸ್ಪಷ್ಟನೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದರು. ಇದೀಗ ಈ ಸೀಸನ್‌ನಲ್ಲಿ ಯಾರು ಎಂಟ್ರಿ ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ. ಬಿಗ್‌ ಬಾಸ್‌ 8ರಲ್ಲಿ ಮಂಜು ಪಾವಗಡ ವಿಜೇತರಾಗಿದ್ದರೆ, ಕೆಪಿ ಅರವಿಂದ್‌ ರನ್ನರ್‌ ಅಪ್‌ ಆಗಿದ್ದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯ ಅವಸ್ಮರಣೀಯ ಘಟನೆಗಳ ಝಲಕ್ ಇಲ್ಲಿವೆ!

Exit mobile version