Site icon Vistara News

Bigg Boss kannada | ನಾಳೆಯಿಂದ ಶುರುವಾಗ್ತಿದೆ ಬಿಗ್ ಬಾಸ್ ಸೀಸನ್ 9: ಏನೆಲ್ಲ ವಿಶೇಷತೆ ಇದೆ?

Bigg Boss kannada

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss kannada) ಕೌಂಟ್‌ಡೌನ್‌ ಶುರುವಾಗಿದೆ. ಇದರ ಗ್ರ್ಯಾಂಡ್‌ ಪ್ರೀಮಿಯರ್‌ ಸೆಪ್ಟೆಂಬರ್‌ 24ರ ಸಂಜೆ 6 ಗಂಟೆಗೆ ಶುರುವಾಗಲಿದೆ. ಈ ಶೋ ನಿತ್ಯ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಬಾರಿ ಪ್ರವೀಣರ ಜತೆ ನವೀನರು ಇರಲಿದ್ದಾರೆ ಎಂದು ಪ್ರೋಮೊದಲ್ಲಿ ಹೇಳಲಾಗಿದೆ.

ಯಾರೆಲ್ಲ ಸ್ಪರ್ಧಿಗಳು ?
ಒಟ್ಟು 18 ಸ್ಪರ್ಧಿಗಳು ಈ ಬಾರಿ ದೊಡ್ಮನೆಯೊಳಗಡೆ ಎಂಟ್ರಿ ಪಡೆಯಲಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಶೋ ಟಾಪ್ 4 ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಜತೆ ಹೊಸ 9 ಸ್ಪರ್ಧಿಗಳು, ಕಳೆದ ಸೀಸನ್‌ಗಳಿಂದ 5 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ. ಇದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಬಿಗ್ಗೆಸ್ಟ್ ಸೀಸನ್ ಆಗಿರಲಿದೆಯಂತೆ.

ಇದನ್ನೂ ಓದಿ | Bigg Boss Kannada 9 | ಟಿವಿ ಸೀಸನ್‌ನಲ್ಲಿ ಪ್ರವೀಣರ ಜತೆ ನವೀನರು; ಶೋಗಿನ್ನು ಒಂಭತ್ತೇ ದಿನ ಬಾಕಿ!

ಹೊಸ ನಿಯಮ ಸೇಪರ್ಡೆ?
ಬಿಗ್‌ ಬಾಸ್‌ ಮನೆ ಹಲವು ವಿಶೇಷತೆಗಳಿಂದ ಕೂಡಿರುತ್ತವೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಇದೆಯಾ? ಸ್ಮೋಕಿಂಗ್ ರೂಮ್‌ನಲ್ಲಿ ಧೂಮಪಾನ ಮಾಡುವುದು, ಕನ್ನಡದಲ್ಲಿ ಮಾತನಾಡುವುದು, ಮೈಕ್ ಧರಿಸುವುದು ಹೀಗೆ ನಾನಾ ನಿಯಮಗಳಿವೆ. ಈ ಬಾರಿ ಇನ್ನೇನಾದರೂ ಹೊಸ ನಿಯಮ ಸೇರ್ಪಡೆಯಾಗಲಿದೆಯಾ ಎಂದು ಕಾದುನೋಡಬೇಕಿದೆ. ಬಿಗ್‌ ಬಾಸ್‌ 8ರಲ್ಲಿ ಮಂಜು ಪಾವಗಡ ವಿಜೇತರಾಗಿದ್ದರೆ, ಕೆಪಿ ಅರವಿಂದ್‌ ರನ್ನರ್‌ ಅಪ್‌ ಆಗಿದ್ದರು.

ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್‌: ಈ 4 ಸ್ಪರ್ಧಿಗಳು ಸೀಸನ್‌ 9ಕ್ಕೆ ಎಂಟ್ರಿ, ಟಾಪರ್ ಆದ ರೂಪೇಶ್! 

Exit mobile version