Site icon Vistara News

Bigg Boss Telugu | ಇಂದಿನಿಂದ ತೆಲುಗು ಬಿಗ್ ಬಾಸ್ ಆಟ ಶುರು!

Bigg Boss Telugu

ಬೆಂಗಳೂರು: ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Telugu) ಈಗಾಗಲೇ ಐದು ಸೀಸನ್‌ಗಳನ್ನು ಮುಗಿಸಿದೆ. ಆರನೇ ಸೀಸನ್‌ನ ಪ್ರೋಮೊ ಕೂಡ ಇತ್ತೀಚೆಗೆ ಬಿಡುಗಡೆಗೊಂಡಿತ್ತು. ತೆಲುಗು ಬಿಗ್‌ ಬಾಸ್‌ ಸೆ.4 ಸಂಜೆ 6 ಗಂಟೆಯಿಂದ ಆರಂಭವಾಗಲಿದೆ. ನಟ ನಾಗಾರ್ಜುನ ಈ ಸೀಸನ್ ಹೋಸ್ಟ್ ಮಾಡಲಿದ್ದು, ಬಿಗ್ ಬಾಸ್ ತಂಡ ಈ ಸೀಸನ್ ನಲ್ಲಿ 17 ಮಂದಿಯನ್ನು ಫೈನಲ್ ಮಾಡಿದೆ. ಅದರ ಭಾಗವಾಗಿ ಒಂದೇ ಬಾರಿಗೆ 15 ಮಂದಿಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗುತ್ತದೆ. ಉಳಿದ ಇಬ್ಬರನ್ನು ವೈಲ್ಡ್ ಕಾರ್ಡ್ ಮೂಲಕ ಕಳುಹಿಸಲಾಗುವುದು ಎಂದು ಹೇಳಲಾಗಿದೆ.

ಬಿಗ್ ಬಾಸ್ ಮೊದಲ ಸೀಸನ್ ಅನ್ನು ಎನ್ ಟಿಆರ್ ಹೋಸ್ಟ್ ಮಾಡಿದರೆ, ಎರಡನೇ ಸೀಸನ್ ಅನ್ನು ನಾನಿ ಹೋಸ್ಟ್ ಮಾಡಿದ್ದಾರೆ. ಮೂರು, ನಾಲ್ಕು ಮತ್ತು ಐದು ಸೀಸನ್‌ಗಳನ್ನು ಅಕ್ಕಿನೇನಿ ನಾಗಾರ್ಜುನ ಹೋಸ್ಟ್ ಮಾಡಿದ್ದಾರೆ. ಇದೀಗ ಆರನೇ ಸೀಸನ್ ಅನ್ನು ಸಹ ನಾಗಾರ್ಜುನ ಹೋಸ್ಟ್ ಮಾಡಲಿದ್ದಾರೆ.

ಇದನ್ನೂ ಓದಿ | Bigg Boss Kannada | ಸೋನು ಗೌಡಗೆ ಕ್ಲಾಸ್‌ ತೆಗೆದುಕೊಂಡ ಕಿಚ್ಚ: ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ!

ಆ್ಯಂಕರ್ ಉದಯಭಾನು, ನಟ ಬಾಲಾದಿತ್ಯ, ನೇಹಾ ಚೌಧರಿ, ಆ್ಯಂಕರ್ ವರ್ಷಿಣಿ, ಗಾಯಕ ರೇವಂತ್, ಕಾಮಿಡಿಯನ್‌ ಚಂಟಿ, ಕ್ಯಾರೆಕ್ಟರ್ ಆರ್ಟಿಸ್ಟ್ ನಂದು, ಶ್ರೀಹಾನ್, ಗಾಯಕ ಮೋಹನ ಭೋಗರಾಜ್, ಪ್ರತ್ಯೂಷಾ, ಕೊರಿಯೋಗ್ರಾಫರ್ ಪಪ್ಪಿ ಮಾಸ್ಟರ್,ಜಬರ್ದಸ್ತ್ ಅಪ್ಪಾರಾವ್, ಗೀತು ರಾಯಲ್, ಮರೀನಾ, ಕೀರ್ತಿ ಭಟ್, ರಾಜ್ ಶೇಖರ್, ಆರೋಹಿ ರಾವ್, ವಸಂತಿ ಕೃಷ್ಣನ್, ಅಭಿನಯಶ್ರೀ, ಶಾನಿ ಸಾಲ್ಮನ್, ಅರ್ಜುನ್ ಕಲ್ಯಾಣ್ ಮತ್ತು ಜಬರ್ದಸ್ತ್ ಫೈಮಾ ಅವರ ಹೆಸರುಗಳೂ ಕೇಳಿಬರುತ್ತಿವೆ. ಇವೆರೆಲ್ಲರೂ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಔಟ್!

Exit mobile version