ʻʻಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್, ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆʼʼ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೇಶನ್ ಸೃಷ್ಟಿಸಿತ್ತು. ಪುಟ್ಟ ಬಾಲಕಿಯ ಈ ಹಾಡಿಗೆ ಮನಸೋತದವರು ಯಾರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶಾಲ್ಮಲಿಯ ಹಾಡಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಶಾಲ್ಮಲಿಯ (Shalmali) ಈ ಕೃಷ್ಣನ ಹಾಡನ್ನು ರೀಲ್ಸ್ ಪ್ರಿಯರು ಕೂಡ ಟಿಕ್ ಮಾಡಿದ್ದೂ ಉಂಟು. ಇದೀಗ ಈ ಪೋರಿ ʻʻಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷ (Krishna janmashtami 2023) ಅತಿಥಿಯಾಗಿ ಸ್ಟಾರ್ ಸುವರ್ಣದ ʻಬೊಂಬಾಟ್ ಭೋಜನʼಕ್ಕೆ (Bombat Bhojana) ಅತಿಯಾಗಿ ಬಂದಿದ್ದಾಳೆ.
ಶಾಲ್ಮಲಿ ಈ ಹಿಂದೆ ‘ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ’ ಹಾಡಿನ ಮೂಲಕ ವೈರಲ್ ಆಗಿದ್ದ ಪುಟಾಣಿ.ಪಿಯಾನೋವನ್ನು ಶುದ್ಧವಾಗಿ ನುಡಿಸುತ್ತಿರುವ ಶಾಲ್ಮಲಿಯ ವಿಡಿಯೊಗಳು ವೈರಲ್ ಆಗಿದ್ದವು. ಶಾಲ್ಮಲಿಯ ಹಾಡನ್ನು ಪ್ರಧಾನಿ ಮೋದಿ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ‘ಈ ವಿಡಿಯೋ ಪ್ರತಿಯೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಕ್ರಿಯಾಶೀಲತೆ ಈ ಬಾಲಕಿಯಲ್ಲಿದೆ. ಬೆಸ್ಟ್ ವಿಶಸ್ ಟು ಶಾಲ್ಮಲಿʼ ಎಂದು ಬರೆದುಕೊಂಡಿದ್ದರು
‘ಹತ್ತೂರ ಒಡೆಯ ‘, ದಾಸಾಮೃತಸಾರ ಎನ್ನುವ ಹಾಡಿನ ಮೂಲಕ ಮತ್ತು ಪ್ರಖ್ಯಾತ ಗಾಯಕ ಮಹೇಶ್ ಕಾಳೆ ಅವರ ರಿಲ್ಸ್ ಗೆ ರಿಮಿಕ್ಸ್ ಮಾಡುವ ಮೂಲಕ ಶಾಲ್ಮಲಿ ಮೆಚ್ಚುಗೆ ಪಡೆದುಕೊಂಡಿದ್ದಳು. ಇದೀಗ ʻಬೊಂಬಾಟ್ ಭೋಜನʼದಲ್ಲಿ ಶಾಲ್ಮಲಿ ಕಂಡು ಸೋ ಕ್ಯೂಟ್, ಮುದ್ದಾಗಿದ್ದೀಯಾ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯ ಎಂದು ಪುಟಾಣಿಯ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: DK Shivakumar: ʻಬೊಂಬಾಟ್ ಭೋಜನʼದಲ್ಲಿ ಆತ್ಮೀಯ ಸ್ನೇಹಿತ ಸಿಹಿಕಹಿ ಚಂದ್ರು ಅಡುಗೆ ಸವಿದ ಡಿ.ಕೆ ಶಿವಕುಮಾರ್
ಬೆಂಗಳೂರು ಮೂಲದ ಪುಟಾಣಿ ಶಾಲ್ಮಲಿ ಶ್ರೀನಿವಾಸ್‌ಗೆ ಶಂಕರ್ ಮಹದೇವನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ’ ಹಾಡಿನ ಮೂಲಕ ವೈರಲ್ ಆಗಿದ್ದ ಶಾಲ್ಮಲಿಯನ್ನು ಶಂಕರ್ ಮಹದೇವನ್ ಕೂಡ ಹೊಗಳಿದ್ದಾರೆ.
‘ಹುಟ್ಟುತ್ತಲೇ ಟೀಚರ್ ಆಗಿರುವ ಯಾರನ್ನಾದರೂ ನೀವು ನೋಡಬೇಕೆ? ಹಾಗಿದ್ದರೆ, ಆಕೆ ಇವಳೇ ನೋಡಿ..! ಇದನ್ನೇ ನಾನು ಪದೇ ಪದೇ ದೇವರ ಆಶೀರ್ವಾದ ಎನ್ನುವುದ.! ಅಂದ ಹಾಗೆ ಈಕೆ ಯಾರು? ಏನಿಲ್ಲ ನಾನು ಒಮ್ಮೆ ಈಕೆಯನ್ನು ಭೇಟಿಯಾಗಬೇಕು ಹಾಗೂ ಗಟ್ಟಿಯಾಗಿ ಅವಳನ್ನು ಅಪ್ಪಿಕೊಳ್ಳಬೇಕು ಹಾಗೂ ಆಶೀರ್ವಾದ ಮಾಡಬೇಕು ಎಂದು ಬಯಸಿದ್ದೇನೆ. ಎಷ್ಟೊಂದು ಸ್ಪಷ್ಟವಾಗಿ ಮಧುರವಾಗಿ ಸ್ವರಸಂಗತಿಗಳನ್ನು ಆಕೆ ಹೇಳುತ್ತಿದ್ದಾರೆ. ಈ ಮುದ್ದು ನನಗೆ ಬಹಳ ಇಷ್ಟವಾಗಿದ್ದಾಳೆ’ ಎಂದು ಶಂಕರ್ ಮಹದೇವನ್ ಪೋಸ್ಟ್ ಮಾಡಿದ್ದರು.
ಸಿಹಿಕಹಿ ಚಂದ್ರು ನಡೆಸಿಕೊಂಡು ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ಕಾರ್ಯಕ್ರಮದ ವಿಶೇಷತೆ ಅಂದರೆ ಬಯಲೂಟ, ಮನೆಯೂಟ, ಸವಿಯೂಟ, ನಮ್ಮೂರ ಊಟ, ಅತಿಥಿ ದೇವೋಭವ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿಯೂ ಮಾಹಿತಿ ನೀಡಲಾಗುತ್ತದೆ.