Site icon Vistara News

Brindavana Serial Kannada: ಅಯ್ಯಯ್ಯೋ ಪುಷ್ಪಾ? ಇದು ನೀನೇನಾ? ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌!

Amulya Bharadwaj

ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬೃಂದಾವನ’ (Brindavana Serial Kannada) ಹೊಸ ಧಾರಾವಾಹಿ ಶುರುವಾಗಿದೆ. ರಾಮ್ ಜೀ ನಿರ್ದೇಶನದ ‘ಬೃಂದಾವನ’ ಧಾರಾವಾಹಿ ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿದೆ. ಅಮೂಲ್ಯಾ ಭಾರದ್ವಾಜ್ (Amulya Bharadwaj) ಈ ಧಾರಾವಾಹಿಯ ನಾಯಕಿ.

ಅಮೂಲ್ಯಾ ಭಾರದ್ವಾಜ್ ಅವರು ಸದ್ಯ ಬೃಂದಾವನ ಸೀರಿಯಲ್‌ನಲ್ಲಿ ಸೀರೆಯುಟ್ಟು ಮುಗ್ಧೆಯಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯಗೆ ಜೋಡಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

ಈಗ ಶೋಲ್ಡರ್ ಲೆಸ್ ಟಾಪ್ ಮತ್ತು ತುಂಡು ಜೀನ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೊಶೂಟ್ ಮಾಡಿಸಿದ್ದಾರೆ. ನಟಿಯ ಅವತಾರ ನೋಡಿ ಇದು ʻಬೃಂದಾವನʼ ಸೀರಿಯಲ್ ನಟಿ ಪುಷ್ಪನೇನಾ ಎಂದು ಫ್ಯಾನ್ಸ್‌ ಪ್ರಶ್ನೆ ಇಟ್ಟಿದ್ದಾರೆ.

ಇದನ್ನೂ ಓದಿ: Brindavana Serial Kannada: ʻಏನಾಗಲಿ ಮುಂದೆ ಸಾಗು ನೀʼಎಂದ ʻಬೃಂದಾವನʼ ಧಾರಾವಾಹಿ ಮಾಜಿ ನಾಯಕ!

2023ರ ‘ದಾಸ ಪುರಂದರ’ ಧಾರಾವಾಹಿಯಲ್ಲಿ ಶ್ರೀನಿವಾಸರ ಹೆಂಡತಿಯಾಗಿ ನಟಿಸಿದ್ದ ಸರಸ್ವತಿ ಪಾತ್ರದವರೇ ಅಮೂಲ್ಯಾ ಭಾರದ್ವಾಜ್. ಇದಕ್ಕೂ ಮುನ್ನ ‘ಶಾಂತಂ ಪಾಪಂ’ ಸಿರೀಸ್ ನಲ್ಲೂ ನಟಿಸಿದ್ದರು.

ʻಪುಷ್ಪʼ ಪಾತ್ರದ ಮೂಲಕ ಖ್ಯಾತಿ ಗಳಿಸಿದ ಅಮೂಲ್ಯಾ ಭಾರದ್ವಾಜ್ ಅವರು ಬ್ಲೂ ಜೀನ್ಸ್ ಶಾರ್ಟ್ಸ್ ಹಾಗೂ ಬ್ಲ್ಯಾಕ್ ಶೋಲ್ಡರ್​ಲೆಸ್ ಟಾಪ್ ಧರಿಸಿಕೊಂಡು ಬೀಷ್‌ ಬಳಿ ಪೋಸ್‌ ಕೊಟ್ಟ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ʻಬೃಂದಾವನʼ ಧಾರಾವಾಹಿಯ ನಟಿ ಪುಷ್ಪ ಖ್ಯಾತಿಯ ಅಮೂಲ್ಯಾ ಭಾರದ್ವಾಜ್ ಅವರು ಸದ್ಯ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿದ್ದಾರೆ.

Exit mobile version