Site icon Vistara News

Chandan & Kavitha | ಸಿಹಿ ಸುದ್ದಿ ನೀಡಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ ಮತ್ತು ಕವಿತಾ

Chandan & Kavitha

ಬೆಂಗಳೂರು : ಕಿರುತೆರೆಯ ಕ್ಯೂಟ್‌ ಕಪಲ್‌ ಎಂದರೆ ಚಂದನ್‌ ಕುಮಾರ್‌ ಮತ್ತು ಕವಿತಾ ಗೌಡ (Chandan & Kavitha). ಇದೀಗ ಇಬ್ಬರೂ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಈ ಜೋಡಿ ಈಗ ಹೊಸ ಮನೆಗೆ ಕಾಲಿಟ್ಟಿದೆ. ಮನೆಯ ಗೃಹ ಪ್ರವೇಶದ ಪೋಟೋಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಕಂಚಿಕೊಂಡಿದ್ದಾರೆ.

ಫೋಟೋವನ್ನು ಹಂಚಿಕೊಂಡಿರುವ ಚಂದನ್, ‘ಹೊಸ ಮನೆಯ ಹೊಸ ಬದುಕಿನ ಹೊಸ್ತಿಲಲ್ಲಿ ..’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಲಕ್ಷೀ ಬಾರಮ್ಮ ಧಾರಾವಾಹಿಯಲ್ಲಿ ಇಬ್ಬರೂ ನಟಿಸಿದ್ದರು. 9 ವರ್ಷಗಳ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದನ್‌ ಮತ್ತು ಕವಿತಾ ಜೋಡಿಯಾಗಿದ್ದರು. ಇದೀಗ ನಿಜಜೀವನದಲ್ಲೂ ಜೋಡಿಯಾಗಿರುವುದು ವಿಶೇಷ. ಕವಿತಾ ಗೌಡ ಕೆಲ ವರ್ಷಗಳ ಕಾಲ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ ಹೊರಬಂದು ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದರೂ ಕೂಡ ಚಂದನ್ ಹಾಗೂ ಕವಿತಾ ಗೌಡ ನಡುವೆ ಇದ್ದ ಸ್ನೇಹ ದೂರ ಆಗದೆ ಅದು ಇನ್ನಷ್ಟು ಹತ್ತಿರ ಆಗಿ ಪ್ರೀತಿಯಾಗಿ ಬೆಳೆಯಿತು. ಕುಟುಂಬದವರನ್ನು ಒಪ್ಪಿಸಿ ಚಂದನ್ ಹಾಗೂ ಕವಿತಾ ಮದುವೆಯಾಗಿದ್ದಾರೆ.

ಚಂದನ್ ಸದ್ಯ ಧಾರಾವಾಹಿಗಳ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಸ್ವಂತವಾಗಿ ಒಂದು ಹೋಟೆಲ್ ಆರಂಭಿಸಿದ್ದಾರೆ. ಪ್ರೋಟೀನ್ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ಪ್ರಸ್ತುತ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ‘ಮರಳಿ ಮನಸಾಗಿದೆ’ ಮತ್ತು ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿಗಳಲ್ಲಿ ಬ್ಯುಸಿ ಇದ್ದಾರೆ.

ಅತ್ತ ನಟಿ ಕವಿತಾ ಗೌಡ ಅವರು ಕೂಡ ತಮಿಳಿನ ‘ಅನ್ಬೇ ಶಿವಂ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಒಂದಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಈಚೆಗೆ ಕವಿತಾ ಗೌಡ ನಟಿಸಿದ್ದ ‘ಹುಟ್ಟುಹಬ್ಬದ ಶುಭಾಶಯಗಳು’, ‘ಗೋವಿಂದ ಗೋವಿಂದ’ ಸಿನಿಮಾಗಳು ತೆರೆಕಂಡಿದ್ದವು.

ಬಿಗ್‌ ಬಾಸ್‌ನಲ್ಲಿಯೂ ಜೋಡಿ ಸ್ಫರ್ಧಿಗಳಾಗಿದ್ದು, ಈ ಹಿಂದೆಯಷ್ಟೇ ಜಾಲಿ ರೈಡ್‌ ಗೆ ಹೋಗಿರುವ ಪೋಸ್ಟ್‌ನ್ನು ಶೇರ್‌ ಮಾಡಿಕೊಂಡಿತ್ತು.

Exit mobile version