Site icon Vistara News

Chandana Ananthakrishna: ‘ಭರ್ಜರಿ ಬ್ಯಾಚುಲರ್ಸ್’ ಶೋಗೆ ನಟಿ ಚಂದನಾ ಗುಡ್‌ ಬೈ ಹೇಳಿದ್ದೇಕೆ?

Chandana Ananthakrishna

ಭರ್ಜರಿ ಬ್ಯಾಚುಲರ್ಸ್ (bharjari bachelors) ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋಗೆ ವ್ಯಾಪಕ ಮೆಚ್ಚುಗೆಗೆಳು ಇವೆ. ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಹತ್ತು ವಾರಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಇದೀಗ ಶೋಗೆ ಗುಡ್ ಬೈ ಹೇಳಿದ್ದಾರೆ. ರುದ್ರ ಮಾಸ್ಟರ್ ಪಾರ್ಟನರ್‌ ಆಗಿ ಶೋನಲ್ಲಿ ಭಾಗವಹಿಸಿದ್ದ ಚಂದನ ಅನಂತಕೃಷ್ಣ ಹೋದ ವಾರದ ಎಪಿಸೋಡ್‌ನಲ್ಲಿ ಈ ಶೋದಿಂದ ಹೊರ ಬಂದಿದ್ದಾರೆ.

ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ ಮಾಸ್ಟರ್ (rudra master), ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಭರ್ಜರಿ ಬ್ಯಾಚುಲರ್ಸ್ ಕಂಟೆಸ್ಟೆಂಟ್‌ಗಳಾಗಿದ್ದಾರೆ. ಇದರಲ್ಲಿ ಕನ್ನಡದ ಖ್ಯಾತ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಕೂಡಾ ಆಗಿ ಭಾಗವಹಿಸಿದ್ದರು.

ಇದನ್ನೂ ಓದಿ: Actor Naga Shourya | ಬೆಂಗಳೂರು ಮೂಲದ ಹುಡುಗಿ ಜತೆ ಸಪ್ತಪದಿ ತುಳಿಯಲಿದ್ದಾರೆ ತೆಲುಗು ನಟ ನಾಗ ಶೌರ್ಯ!

ಶೋಗೆ ಗುಡ್ ಬೈ ಹೇಳಿದ್ಯಾಕೆ?

ಶೋನಲ್ಲಿ ಭಾಗವಹಿಸುತ್ತಿರುವ ಇತರ ಹಲವಾರು ಸ್ಪರ್ಧಿಗಳು ಎಲ್ಲರೂ ಸೇರಿ ತಮ್ಮ ಕೈ ಅಚ್ಚಿರುವ ಒಂದು ದೊಡ್ಡ ಕ್ಯಾನ್ವಾಸ್‌ನಲ್ಲಿ ಚಂದನಾ ಅನಂತಕೃಷ್ಣಗೆ ಶುಭ ಹಾರೈಕೆಗಳನ್ನು ಬರೆದು ಕೊನೆಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ರೀತಿ ಪ್ರೀತಿಯಿಂದ ಸಿಕ್ಕ ಗಿಫ್ಟ್‌ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿ ಶೋವಿನಿಂದ ಹೊರ ನಡೆದಿದ್ದಾರೆ.

ಇದೇ ವಾಹಿನಿಯಲ್ಲಿ ಸದ್ಯದಲ್ಲೇ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಂದರಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಚಂದನಾ ಅನಂತಕೃಷ್ಣ ಆ ಧಾರಾವಾಹಿಯ ತಯಾರಿಗಾಗಿ ಹೊರಬಂದಿದ್ದಾರೆ.

ಬಿಗ್​ಬಾಸ್​ ಸೀಸನ್​ 7ರಿಂದ ಈವರೆಗೂ ಹಲವಾರು ಧಾರಾವಾಹಿಗಳಿಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಚಂದನಾ ಅನಂತಕೃಷ್ಣ. ಕಲರ್ಸ್‌ ಕನ್ನಡದ ಹೂ ಮಳೆ, ರಾಜ ರಾಣಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ನಟಿ ಹೊಸ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಫ್ಯಾನ್ಸ್‌ಗೆ ಖುಷಿ ಆಗಿದೆ.

Exit mobile version