ಬೆಂಗಳೂರು: ಮದುವೆಯಾದ ಬಳಿಕ ನಟಿ ಛಾಯಾ ಸಿಂಗ್ (Chaya Singh) ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಕಿರುತೆರೆಯಲ್ಲಿಯೇ ನಟನೆಯನ್ನು ಶುರು ಮಾಡಿದ ಛಾಯಾ ಸಿಂಗ್ ಇದೀಗ ಮತ್ತೆ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೀ ವಾಹಿನಿಯ ಹೊಸ ಧಾರಾವಾಹಿ ʻಅಮೃತಧಾರೆʼ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ನಟಿ ಛಾಯಾ ಸಿಂಗ್ ಮಫ್ತಿ ಸಿನಿಮಾ ಮೂಲಕ ತಮ್ಮ ಫ್ಯಾನ್ಸ್ ಮುಂದೆ ಬಂದಿದ್ದರು.
ಈಗಾಗಲೇ ಜೀ ವಾಹಿನಿ ಮೂರು ಹೊಸ ಧಾರಾವಾಹಿಗಳನ್ನು ಅನೌನ್ಸ್ ಮಾಡಿದೆ. ಈಗಾಗಲೇ ʻಭೂಮಿಗೆ ಬಂದ ಭಗವಂತʼ ಧಾರಾವಾಹಿ ಪ್ರಸಾರ ಪ್ರಾಂಭಿಸಿದೆ. ಇದೀಗ ಅಮೃತಧಾರೆ ಮತ್ತು ಸೀತಾ ರಾಮ ಧಾರಾವಾಹಿಗಳು ಪ್ರಸಾರವಾಗಬೇಕಿದೆ. ಅಮೃತಧಾರೆ ಧಾರಾವಾಹಿ ಪ್ರೊಮೊವನ್ನು ಜೀ ವಾಹಿನಿ ಪ್ರಸಾರ ಮಾಡಿದೆ. ಛಾಯಾ ಸಿಂಗ್ ಜತೆ ನಟ ರಾಜೇಶ್ ಕಾಣಿಸಿಕೊಂಡಿದ್ದಾರೆ. ಪ್ರೊಮೊದಲ್ಲಿ ಇಬ್ಬರ ಕಿತ್ತಾಟದ ದೃಶ್ಯವನ್ನು ಜೀ ವಾಹಿನಿ ಹಂಚಿಕೊಂಡಿದೆ.
ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Vaishnavi Gowda: ಕಾನೂನು ಪದವಿ ಪಡೆದ ಕಿರುತೆರೆ ನಟಿ ವೈಷ್ಣವಿ ಗೌಡ ತಾಯಿ
ಅಮೃತಧಾರೆ ಧಾರಾವಾಹಿಯ ಪ್ರೊಮೊ
ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಹಸೀನಾ’ , ತುಂಟಾಟ’, ಚಿಟ್ಟೆ ಸೇರಿದಂತೆ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ಛಾಯಾ ಸಿಂಗ್ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ಛಾಯಾ ʻಖಾಕಿʼ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.