Site icon Vistara News

Chota Champion: ಮತ್ತೆ ಬರುತ್ತಿದೆ ಮಕ್ಕಳ ರಿಯಾಲಿಟಿ ಶೋ ‘ಛೋಟಾ ಚಾಂಪಿಯನ್’!

Chota Champion Children's reality show

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ಮಕ್ಕಳ ರಿಯಾಲಿಟಿ ಶೋ ‘ಛೋಟಾ ಚಾಂಪಿಯನ್’ ಮತ್ತೆ ಬರಲು ಸಜ್ಜಾಗಿದೆ. ವಿಶೇಷ ಅಂದರೆ 8 ವರ್ಷಗಳ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈಗಾಗಲೇ ವಾಹಿನಿ ಪ್ರೊಮೊ ರಿಲೀಸ್‌ ಮಾಡಿದೆ. ಛೋಟಾ ಚಾಂಪಿಯನ್ ಸೀಸನ್ 3ರನ್ನು ನಿರೂಪಕಿ ಶ್ವೇತಾ ಚಂಗಪ್ಪ ನಡೆಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಶುರುವಾಗಲಿದೆ. 2 ಕಾರ್ಯಕ್ರಮಕ್ಕೂ ಈಗಾಗಲೇ ಆಡಿಷನ್ ಸಹ ಮುಗಿದಿದೆ.

ಶ್ವೇತಾ ಚಂಗಪ್ಪ ಸೂಪರ್ ಕ್ವೀನ್ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದರು. ಈ ಶೋ ಮುಗಿಯುತ್ತಿದ್ದಂತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಛೋಟಾ ಚಾಂಪಿಯಲ್ ಕಾರ್ಯಕ್ರಮವು ಈ ಬಾರಿ ವಿಭಿನ್ನವಾಗಿ ಮಾಡಲು ಚಿಂತನೆ ನಡೆಸಿದ್ದಾರಂತೆ. 6 ವರ್ಷದೊಳಗಿನ ಪುಟಾಣಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಪ್ರೊಮೊದಲ್ಲಿ ಶ್ವೇತಾ ಚಂಗಪ್ಪ ಸಭಾಧ್ಯಕ್ಷರಾಗಿದ್ದಾರೆ. ನಟಿ ರಚಿತಾ ರಾಮ್ ಮತ್ತು ನಟ ವಿಜಯ್ ರಾಘವೇಂದ್ರ ರಾಜಕಾರಣಿಗಳ ರೀತಿ ಕಾಣಿಸಿಕೊಂಡಿದ್ದಾರೆ.

ಛೋಟಾ ಚಾಂಪಿಯನ್‌ನಲ್ಲಿ ರಚಿತಾ ರಾಮ್ ಮತ್ತು ವಿಜಯ್ ರಾಘವೇಂದ್ರ ಹಾಗೂ ಕುರಿ ಪ್ರತಾಪ್ ಕೂಡ ಇದ್ದಾರೆ. ವಿಜಯ್ ರಾಘವೇಂದ್ರ ಮತ್ತು ರಚಿತಾ ಇಬ್ಬರೂ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕುರಿ ಪ್ರತಾಪ್ ಶ್ವೇತಾ ಚಂಗಪ್ಪ ಜತೆ ನಿರೂಪಣೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Pathaan Movie | ರಿಯಾಲಿಟಿ ಶೋನಲ್ಲಿ ಪ್ರಚಾರ ಬೇಡ ಅಂದ್ರಾ ಶಾರುಖ್‌ ಖಾನ್? ಇದು ʻಪಠಾಣ್‌ʼ ಹೊಸ ತಂತ್ರ!

ರಿಯಾಲಿಟಿ ಶೋನ ಹಿಂದಿನ ಎರಡು ಸೀಸನ್‌ಗಳನ್ನು ಸೃಜನ್ ಲೋಕೇಶ್ ನಡೆಸಿಕೊಟ್ಟಿದ್ದರು. ಪ್ರಸ್ತುತ ‘ನನ್ನಮ್ಮ ಸೂಪರ್‌ಸ್ಟಾರ್’ ರಿಯಾಲಿಟಿ ಶೋ ನಿರ್ಣಯಿಸುತ್ತಿದ್ದಾರೆ. ಛೋಟಾ ಚಾಂಪಿಯನ್, ಡಿಕೆಡಿ ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳು ನೋಡಗರನ್ನು ರಂಜಿಸಲು ಸಿದ್ಧವಾಗಿವೆ.

Exit mobile version