ಬೆಂಗಳೂರು: ಈ ವಾರ `ವೀಕೆಂಡ್ ವಿತ್ ರಮೇಶ್’ (Weekend With Ramesh) ಎಪಿಸೋಡ್‌ಗೆ ಹಿರಿಯ ನಟ ದತ್ತಣ್ಣ ಅವರು ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ‘ಅತಿಥಿಯಾಗಿ ಆಗಮಿಸಿದ್ದಾರೆ. ಈಗಾಗಲೇ ಜೀ ವಾಹಿನಿ ಪ್ರೊಮೊ ಹಂಚಿಕೊಂಡಿದ್ದು, ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೃದಯದ ನೋವು ನಿವಾರಿಸಿ ಮರುಜೀವ ಕೊಟ್ಟ ವೈದ್ಯ ಡಾ. ಸಿಎನ್ ಮಂಜುನಾಥ್ ಅವರ ಬಗ್ಗೆ ಮೆಚ್ಚುಗೆ ಒಂದು ಕಡೆ ಆದರೆ, ದತ್ತಣ್ಣ ಅವರ ಜೀವನದ ಜರ್ನಿ ಕಂಡು ಭಾವುಕರಾಗಿ ಪ್ರೇಕ್ಷಕರು ಕಾಮೆಂಟ್ ಮೂಲಕ ಹೇಳುತ್ತಿದ್ದಾರೆ.
ಅದೆಷ್ಟೂ ಜನರ ಹಾರ್ಟ್ ಸರ್ಜರಿ ಮಾಡಿ ಜೀವದಾನ ಮಾಡಿರುವ ಡಾ. ಸಿಎನ್ ಮಂಜುನಾಥ್ ಅವರ ಕುರಿತು ವೇದಿಕೆಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವೇದಿಕೆಯಲ್ಲಿ ಅವರ ಪೇಷೆಂಟ್ ಒಬ್ಬರು ʻʻಇವರು ಹೃದಯದ ಸೈಟಿಂಸ್ಟ್, ಮಗುವಿಗೆ ಹಾರ್ಟ್‌ನಲ್ಲಿ ಹೋಲ್ ಇದ್ದಾಗ ಉಚಿತ ಚಿಕಿತ್ಸೆ ನೀಡಿ ಜೀವ ಕೊಟ್ಟವರುʼʼಎಂದು ಹೇಳಿದರೆ ಮತ್ತೊಬ್ಬರು ʻಧರ್ಮ ರಕ್ಷಣೆಗೆ ಇರುವುದು ಒಬ್ಬನೇ ಮಂಜುನಾಥ ಅದು ಧರ್ಮಸ್ಥಳದಲ್ಲಿ, ಅಸಹಾಯಕರಿಗೆ ಜಯದೇವದಲ್ಲಿರುವುದು ಒಬ್ಬನೇ ರಕ್ಷಕ ಇವರುʼʼಎಂದು ಹೇಳಿದ್ದಾರೆ. ಈ ಪ್ರೊಮೊ ಕಂಡು ಪ್ರೇಕ್ಷಕರು ʻʻಸಾರ್ಥಕವಾದ ಸಂಚಿಕೆ .ವೈದ್ಯೋ ನಾರಾಯಣ ಹರಿ ಈ ಮಾತಿಗೆ ಇವರೇ ಸರಿಯಾದ ವ್ಯಕ್ತಿʼʼಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ʻನಿಜಕ್ಕೂ ಈ ಕೆಂಪು ಕುರ್ಚಿಗೆ ಈಗ ಜೀವ ಕಳೆ ಬಂತುʼʼಎಂದು ಹೊಗಳಿದ್ದಾರೆ.
ಇದನ್ನೂ ಓದಿ: Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್‌ಗೆ ಬರುತ್ತಿದ್ದಾರೆ ಎಲ್ಲರ ಹೃದಯಕ್ಕೆ ಹತ್ತಿರ ಆದ ಸಾಧಕರು!
ಡಾ. ಸಿಎನ್ ಮಂಜುನಾಥ್ ಪ್ರೊಮೊ
ಹೆತ್ತವರನ್ನು ನೆನೆದು ಭಾವುಕರಾದ ದತ್ತಣ್ಣ
ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್. ಜಿ ದತ್ತಾತ್ರೆಯ ಅವರು ತಮ್ಮ ಏರ್ ಫೋರ್ಸ್ ಜರ್ನಿಯ ಕುರಿತು ಹೇಳಿಕೊಂಡರು. ಹಾಗೇ ಹೆತ್ತವರನ್ನು ನೆನೆದು ಭಾವುಕರಾದರು. ʻʻನನ್ನ ಪೇ ಆಗ 10 ಸಾವಿರ ರೂ. ಇವತ್ತು ನಮ್ಮ ಪೆನ್ಷನ್ ಒಳ್ಳೆಯ ರೀತಿಯಲ್ಲಿ ಇದೆ. ಇದೆನಾದರೂ ಅವತ್ತು ಇದ್ದಿದ್ದರೆ ನನ್ನ ಅಪ್ಪ ಅಮ್ಮನನ್ನು ಇನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಬಹುದಿತ್ತು. ಕಷ್ಟ ಆದರೂ ಪರವಾಗಿಲ್ಲ. ತಂದೆ ತಾಯಿ ಇರುವಾಗ ಚೆನ್ನಾಗಿ ನೋಡಿಕೊಳ್ಳಬೇಕುʼʼಎಂದು ಭಾವುಕರಾದರು.
ಇದೀಗ ಈ ಇಬ್ಬರೂ ʻವಿಕೇಂಡ್ ವಿತ್ ರಮೇಶ್ʼ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬರುತ್ತಿರುವುದು ಪ್ರೇಕ್ಷಕರಿಗೆ ಸಂತಸ ತಂದಿದೆ. ಈ ಕಾರ್ಯಕ್ರಮಕ್ಕೆ ಅರ್ಹರು ಎಂದು ಬರೆದರೆ, ಮತ್ತೊಬ್ಬರು ʻʻಎಪಿಸೋಡ್ ಮಿಸ್ಸೆ ಮಾಡಲ್ಲʼʼ ಎಂದು ಬರೆದಿದ್ದಾರೆ.ʻವಿಕೇಂಡ್ ವಿತ್ ರಮೇಶ್ʼ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ.