Site icon Vistara News

Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!

Comedy Khiladigalu anchor anushree and Jaggesh Remembers Dogs

ಬೆಂಗಳೂರು: ʻಜೀ ಕನ್ನಡʼ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಅಂದರೆ ಅದುವೇ ʻಕಾಮಿಡಿ ಕಿಲಾಡಿಗಳುʼ ಶೋ. ಈಗಾಗಲೇ ಸೀಸನ್‌ 5 (Comedy Khiladigalu) ಪ್ರೇಕ್ಷಕರ ಮುಂದೆ ಬಂದಾಗಿದೆ. ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇದ್ದಾರೆ. ನಿರೂಪಕರಾದ ಅನುಶ್ರೀ (anchor anushree) , ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ವಾರ ತಮ್ಮ ಮುದ್ದಿನ ಶ್ವಾನ ಅರ್ಜುನನ್ನು ನೆನದು ಗುಣಗಾನ ಮಾಡಿದ್ದಾರೆ ಜಗ್ಗಣ್ಣ. ಮಾತ್ರವಲ್ಲ ಅನುಶ್ರೀ ಕೂಡ ತಮ್ಮ ಮುದ್ದಿನ ʻಚಿನ್ನುʼ ಶ್ವಾನವನ್ನು ನೆನೆದು ಭಾವುಕರಾದರು.

ಜೀ ವಾಹಿನಿ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸಿರುವ ಜಗ್ಗೇಶ್‌ ಅವರ ವಿಡಿಯೊವನ್ನು ಹಂಚಿಕೊಂಡಿದೆ . ‘ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ʻಅರ್ಜುನʼ ಎಂಬ ಹೆಸರಿನ ಸಾಕು ನಾಯಿಯ ಜತೆ ಇರುವ ಫೋಟೊವನ್ನು ತೋರಿಸಿದಾಗ, ʻಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೆನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜತೆ ಬದುಕಿದ್ದʼ ಎಂದರು.

ಈ ಅರ್ಜುನನ ಪೋಟ್ರೆ ಮಾಡಿ ನಮ್ಮ ಮನೆಯಲ್ಲಿ ಹಾಕಿಕೊಂಡಿದ್ದೇನೆ. ಯಾವಾಗಲಾದರೂ ಬೇಜಾರು ಆದರೆ ಅವನ್ನನ್ನೇ ನೋಡಿಕೊಂಡು ಕೂತ್ತಿರುತ್ತೇನೆ. ಬಹಳ ಖುಷಿ ಅವನನ್ನೇ ನೋಡಿದರೆ. ಅವನನ್ನು ಮಿಸ್‌ ಮಾಡಿಕೊಂಡ ಮೇಲೆ ಸುಮಾರು ಒಂದು ವರ್ಷ ಅತ್ತಿದ್ದೇನೆ. ಅದು ನನ್ನ ಮುಖ ಹತ್ತಿರ ಬಂದು ನೆಕ್ಕಿ ಪ್ರೀತಿ ವ್ಯಕ್ತಪಡಿಸುತ್ತಿತ್ತು. ಡೈನಿಂಗ್‌ ಟೇಬಲ್‌ನಲ್ಲಿ ಕೂತ್ಕೊಂಡು ಊಟ ಮಾಡುತ್ತಿದ್ದ ಎಂದರು. ಇದಾದ ಬಳಿಕ ಅನುಶ್ರೀ ಅವರ ಮುದ್ದಿನ ಶ್ವಾನ ಚಿನ್ನು ಫೋಟೊ ಬಂತು. ಅನುಶ್ರೀ ಚಿನ್ನು ಫೋಟೊ ನೋಡಿ ಭಾವುಕರಾದರು.

ʻʻಚಿನ್ನು ಈಗ ನಮ್ಮ ಜತೆ ಇಲ್ಲ. ಎರಡು ವರ್ಷದ ಹಿಂದೆ ಅವನನ್ನು ನಾವು ಕಳೆದುಕೊಂಡೆವು. ಇದೇ ಕೈಯಲ್ಲಿ ಕಳೆದುಕೊಂಡೆ. ಅವನು ನನ್ನ ಮಗ. ಮತ್ತೆ ಈಗ ಚಿನ್ನು ಹುಟ್ಟಿ ಬಂದಿದ್ದಾನೆ. ಏನು ಎಕ್ಸ್‌ಪೆಕ್ಟ್‌ ಮಾಡದೇ ಫ್ಯೂರ್ ಲವ್ ಕೊಡೋ ಏಕೈಕ ಅದು ಡಾಗ್ಸ್ಎಂದು ಅನುಶ್ರೀ ಹೇಳುತ್ತಾರೆ. ನಂತರ ಮಾತನಾಡಿದ ಜಗ್ಗೇಶ್, ಯಾಕೆಂದರೆ ಈ ಶ್ವಾನಗಳಲ್ಲಿ ಭಗವಂತ ಒಂದು ಶಕ್ತಿಯನ್ನಿಟ್ಟಿದ್ದಾನೆ ಎಂದರು.

ಇದನ್ನೂ ಓದಿ: IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

ʻʻಏನು ಅದು ಎಂದರೆ ಪ್ರೀತಿ ಅಕ್ಕರೆ ಊಟ ಕೊಟ್ಟರೆ ಈ ಶ್ವಾನಗಳಿಗೆ ನನ್ನವರು ಎನ್ನುವ ಭಾವನೆ ಬಂದು ಬಿಡತ್ತೆ. ಮನುಷ್ಯ ನಾಯಿ. ದೇವರು ಶ್ವಾನವನ್ನು ಯಾಕಿಟ್ಟ ಅಂದ್ರೆ, ಲೋ ನೋಡು ಅದಕ್ಕೆ ನಾಯಿ ಅಂತ ಕರೀತಾರೆ, ಆದರೆ ಮನುಷ್ಯ ನಾಯಿ ಎಂದು ಹೇಳುತ್ತಾರೆ. ಮನುಷ್ಯನಿಗೆ ನಾವು ಊಟ ಹಾಕು, ದುಡ್ಡುಕೊಡು, ಮನೆ ಮಾಡಿಕೊಡು, ಆಸ್ತಿ ಮಾಡಿಕೊಡು ಎಲ್ಲ ಕೊಡು ನಿಂಗೆ ಹಿಂದೆ ಇಂದ ಚುಚ್ಚಿ ಹೋಗುತ್ತಾನೆ. ಆದರೆ ನಾಯಿಗಳು ಮಾತ್ರ ಹೋಗಲ್ಲ, ಅವು ಮನುಷ್ಯ, ಅದು ಪ್ರೀತಿ, ಪ್ರೀತಿಯ ಸಂಕೇತವೇ ನಾಯಿʼʼ ಎಂದರು.

Exit mobile version