Site icon Vistara News

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Comedy Khiladigalu Premier League From 27th April On Zee Kannada

ಬೆಂಗಳೂರು: ʻಜೀ ಕನ್ನಡʼ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಅಂದರೆ ಅದುವೇ ʻಕಾಮಿಡಿ ಕಿಲಾಡಿಗಳುʼ ಶೋ. (Comedy Khiladigalu Premier League) “ಸೈಡ್‌ಗಿಡ್ರಿ ನಿಮ್‌ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು” ಎಂಬ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸುವ ಕೀರ್ತಿ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಇದೀಗ ಸೀಸನ್‌ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಮೂಲಕ ಮನರಂಜಿಸಲು ಸಿದ್ಧವಾಗಿದೆ.

ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್‌ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಕಲಾವಿದರಿಗೆ ಅವರ ಪ್ರದರ್ಶನ ಆಧಾರದ ಮೇಲೆ ಪ್ರತಿ ವಾರ 1 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶ ಇರಲಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಪ್ರಶ್ನೆಗೆ ಉತ್ತರ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ಗೊತ್ತಾಗಲಿದೆ.

ಇದನ್ನೂ ಓದಿ: Comedy khiladi Nayana: ಮುದ್ದು ಕೃಷ್ಣನನ್ನು ಹಿಡಿದು ಫೋಟೊಶೂಟ್‌ ಮಾಡಿಸಿದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಸೀಸನ್ 4 ಈಗಾಗಲೇ ಮುಕ್ತಾಯಗೊಂಡಿದೆ. ಸೀಸನ್‌ 4ರ ವಿಜೇತರಾಗಿ ಹರೀಶ್ ಹಿರಿಯೂರು, ಮೊದಲನೇ ರನ್ನರ್ ಅಪ್ ಆಗಿ ಮಂಡ್ಯದ ಗಿಲ್ಲಿ ನಟ ಮತ್ತು ಎರಡನೇ ರನ್ನರ್ ಅಪ್‌ ಆಗಿ ಶುಭಾ ಸ್ಥಾನ ಪಡೆದಿದ್ದರು. ಒಟ್ಟು 12 ಜನ ಟಾಪ್​ ಫೈನಲಿಸ್ಟ್‌ಗಳ ನಡುವೆ ಈ ಮೂವರು ವಿಶೇಷ ಸ್ಥಾನ ಪಡೆದಿದ್ದರು.

ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌ ಈ ಕಾರ್ಯಕ್ರಮದ (Comedy Khiladigalu) ಎಲ್ಲ ಸೀಸನ್‌ಗಳಲ್ಲಿಯೂ ಅದ್ಭುತವಾಗಿ ನಿರೂಪಣೆ ಮಾಡಿರುವ ಮಾಸ್ಟರ್‌ ಆನಂದ್‌ ಈ ಬಾರಿಗೂ ನಿರೂಪಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎನ್ನಲಾಗಿದೆ.

Exit mobile version