Site icon Vistara News

Weekend With Ramesh: ಈ ವಾರ ವೀಕೆಂಡ್‌ ವಿತ್‌ ರಮೇಶ್‌ಗೆ ಬರುತ್ತಿದ್ದಾರೆ ಎಲ್ಲರ ಹೃದಯಕ್ಕೆ ಹತ್ತಿರ ಆದ ಸಾಧಕರು!

Coming to Weekend with Ramesh this week, who are close to everyone's hearts!

ಬೆಂಗಳೂರು: ʻವೀಕೆಂಡ್‌ ವಿತ್‌ ರಮೇಶ್‌ʼ (Weekend With Ramesh) ಕಾರ್ಯಕ್ರಮಕ್ಕೆ ಈಗಾಗಲೇ ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಹಾಗೂ ಎರಡನೇ ಅತಿಯಾಗಿ ಪ್ರಭುದೇವ ಬಂದು ಹೋಗಿದ್ದಾರೆ. ಮುಂದಿನ ಅತಿಥಿ ಯಾರು ಬರಲಿದ್ದಾರೆ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ, ಜೀ ವಾಹಿನಿ ಕೂಡ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದು, ಯಾರು ಬರಲಿದ್ದಾರೆ ಎಂದು ಗೆಸ್‌ ಮಾಡಿ ಎಂದು ಬರೆದುಕೊಂಡಿದೆ. ಇದೀಗ ಈ ಬಗ್ಗೆ ಉತ್ತರ ಸಿಕ್ಕಿದ್ದು, ಈ ವಾರ ಹಿರಿಯ ನಟ ದತ್ತಣ್ಣ ಅವರು ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.

ಡಾ. ಸಿಎನ್ ಮಂಜುನಾಥ್ ಯಾರು?

ಡಾ. ಮಂಜುನಾಥ್ ಅವರು ಭಾರತದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗಳನ್ನು ವಿವಾಹವಾಗಿದ್ದಾರೆ ಮತ್ತು ಕುಟುಂಬವು ಬೆಂಗಳೂರಿನಲ್ಲಿ ನೆಲೆಸಿದೆ. ಇವರ ಪೂರ್ಣ ಹೆಸರು ಡಾ. ಚೋಳೇನಹಳ್ಳಿ ನಂಜಪ್ಪ ಮಂಜುನಾಥ್. ಭಾರತೀಯ ಹೃದ್ರೋಗ ತಜ್ಞ ಮತ್ತು ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು. ಬಲೂನ್ ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಯಲ್ಲಿ ಹೊಸ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು 2007ರಲ್ಲಿ ರಲ್ಲಿ ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿತು. 1998ರ ಕರ್ನಾಟಕ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಸದಸ್ಯರಾಗಿದ್ದಾರೆ. ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Weekend with Ramesh

ವೀಕೆಂಡ್‌ ವಿತ್‌ ರಮೇಶ್‌ ಈ ವಾರದ ಅತಿಥಿಗಳು

ಕನ್ನಡ ಚಿತ್ರರಂಗದ ಹಿರಿಯ ನಟ ದತ್ತಣ್ಣ

ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಇವರ ನಿಜವಾದ ಹೆಸರು ಎಚ್. ಜಿ ದತ್ತಾತ್ರೆಯ. ‘ನಾನೇ ಬಿಜ್ಜಳ’ ನಾಟಕದಲ್ಲಿ ಬಿಜ್ಜಳನ ಪಾತ್ರ ದತ್ತಣ್ಣನವರಿಗೆ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. 45 ವರ್ಷ ತುಂಬಿದ ಮೇಲೆ ಸಿನಿರಂಗಕ್ಕೆ ಕಾಲಿಟ್ಟರು. ಏರ್‌ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಟಿ.ಎಸ್‌. ರಂಗ ಅವರು ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್‌’ ಎಂಬ ಸಿನಿಮಾದಲ್ಲಿ ‘ದತ್ತಣ್ಣ’ನವರನ್ನು ಪರಿಚಯಿಸಿದರು. ನಾಗಾಭರಣರ ‘ಆಸ್ಫೋಟ’ ಚಿತ್ರದಲ್ಲಿ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ದತ್ತಣ್ಣನವರು ಅತ್ಯಂತ ವ್ಯಾಪಕವಾಗಿ ಕನ್ನಡಿಗರ ಮನ ಸೆಳೆದದ್ದು ‘ಮಾಯಾ ಮೃಗ’ ಧಾರಾವಾಹಿಯ ಶಾಸ್ತ್ರಿಗಳಾಗಿ.

ಇದನ್ನೂ ಓದಿ: Weekend With Ramesh: ತಂದೆಯ ಸಾಥ್‌, ಮೈಕಲ್‌ ಜಾಕ್ಸನ್‌ ಪ್ರಭಾವ, ಮಗನ ನೆನಪು, ಎಲ್ಲದರ ಕಥೆ ಬಿಚ್ಚಿಟ್ಟ ಪ್ರಭುದೇವ!

ಇದೀಗ ಈ ಇಬ್ಬರೂ ʻವಿಕೇಂಡ್‌ ವಿತ್‌ ರಮೇಶ್‌ʼ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬರುತ್ತಿರುವುದು ಪ್ರೇಕ್ಷಕರಿಗೆ ಸಂತಸ ತಂದಿದೆ. ಕಾಮೆಂಟ್‌ನಲ್ಲಿ ʻʻಡಾ. ಮಂಜುನಾಥ ರವರು ಮತ್ತು ದತ್ತಣ್ಣರವರು, ಅವರವರ ಕ್ಷೇತ್ರದಲ್ಲಿ ನಿಜವಾಗಲೂ ಸಾಧನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಅರ್ಹರುʼʼಎಂದು ಬರೆದರೆ, ಮತ್ತೊಬ್ಬರು ʻʻಎಪಿಸೋಡ್‌ ಮಿಸ್ಸೆ ಮಾಡಲ್ಲʼʼ ಎಂದು ಬರೆದಿದ್ದಾರೆ.ʻವಿಕೇಂಡ್‌ ವಿತ್‌ ರಮೇಶ್‌ʼ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ.

Exit mobile version