ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ʻಕಾವೇರಿ ಕನ್ನಡ ಮೀಡಿಯಂʼ ಧಾರಾವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆ ಬಗ್ಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಕರಾವಳಿಯಲ್ಲಿ ದೈವಾರಾಧಕರು ಹಾಗೂ ತುಳುನಾಡ ಮಂದಿ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಧಾರಾವಾಹಿ ನಿರ್ದೇಶಕರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಆರ್ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ದೈವಕೋಲ ಮಾಡಿರುವುದಕ್ಕೆ ತುಳುನಾಡ ದೈವಾರಾಧಕರು ಗರಂ ಆಗಿದ್ದಾರೆ. ಭೂತಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹಾಸ್ಯ ಕಲಾವಿದ, ನಿರೂಪಕ ಪ್ರಶಾಂತ್ ಸಿಕೆ ಎನ್ನುವವರು ಕನ್ನಡ ಧಾರಾವಾಹಿ ಒಂದಕ್ಕೆ ದೈವದ ವೇಷಭೂಷಣ ತೊಟ್ಟು, ದೈವ ಕೋಲದ ಅನುಕರಣೆ ಮಾಡುವ ಮೂಲಕ ನಮ್ಮ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ವಾದ್ಯಕೋಶಗಳ ನುಡಿಸುವವರಿಗೆ ದೈವಸ್ಥಾನದಲ್ಲಿ ಕೋಲ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿರುತ್ತಾರೆ. ಇದೊಂದು ವರ್ಗವನ್ನು ಮೂಲೆ ಗುಂಪಾಗಿಸುವ ಪ್ರಯತ್ನವಾಗಿದೆ. ಜಾತಿನಿಂದನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Kaveri Kannada Medium: `ಸ್ವಾಭಿಮಾನʼ ಸಿನಿಮಾ ಖ್ಯಾತಿಯ ನಟಿ ಮಹಾಲಕ್ಷ್ಮೀ ಕನ್ನಡ ಕಿರುತೆರೆಗೆ ಎಂಟ್ರಿ!
ಸಾಂಪ್ರದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನೆಮಾ, ಧಾರಾವಾಹಿ, ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸರಿಯಲ್ಲ ಎಂದಿದ್ದಾರೆ. ಸಿನೆಮಾ ಧಾರಾವಾಹಿ ಯಾವುದರಲ್ಲೂ ದೈವಾರಾಧನೆಯನ್ನ ಬಳಸಿಕೊಳ್ಳಬಾರದು. ಇದು ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನ ನಡೆಸುತ್ತೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕನ್ನಡ ಬರೀ ಭಾಷೆ ಅಲ್ಲ ಬದುಕು ಎಂದು ನಂಬಿಕೊಂಡ ಊರಿನಲ್ಲಿ ಹುಟ್ಟಿರುವ ಕಾವೇರಿ ಹೆಣ್ಣು ಮಗಳ ಕಥೆಯಿದು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕಾವೇರಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ, ಅದರ ಅಭಿವೃದ್ದಿಗೆ ಹೊರಡುವ ಕಾವೇರಿ ಕಥೆಯಿದು. ಕಾವೇರಿ ಪಾತ್ರದಲ್ಲಿ ಪ್ರಿಯ ಜೆ ಆಚಾರ್ ನಟಿಸಿದ್ದಾರೆ. ನಾಯಕನಾಗಿ ರಕ್ಷಿತ್ ಕಾಣಿಸಿಕೊಂಡಿದ್ದಾರೆ.