ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಪಲ್ಸ್ ಕಿಚನ್‌ನಲ್ಲಿ (Couple’s Kitchen) ಹಲವಾರು ಸೆಲೆಬ್ರಿಟಿಗಳು ತಮ್ಮ ತಮ್ಮ ಇಷ್ಟದ ಅಡುಗೆಯನ್ನು ಮಾಡಿ ತಮ್ಮ ಪ್ರೀತಿಯ ಹೆಂಡತಿಗೆ ಉಣ ಬಡಿಸಿದ್ದಾರೆ. ಇದರ ಜತೆಗೆ ತಮ್ಮ ಜೀವನದ ಬಗ್ಗೆ ಖುಷಿ ಹಾಗೂ ಸಂಸತಸ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಭೂಮಿಗೆ ಬಂದ ಭಗವಂತ ಧಾರಾವಾಹಿಯ ನಟ ನವೀನ್ ಕೃಷ್ಣ ಅವರು ಮುಕ್ತ ಮನಸ್ಸಿನಿಂದ ಒಂದು ಸೀಕ್ರೆಟ್ ಹಂಚಿಕೊಂಡಿದ್ದಾರೆ.
ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಮತ್ತು ಪತ್ನಿ ಅಶ್ವಿನಿ ಆಗಮಿಸಿದ್ದರು. ನವೀನ್ ಕೃಷ್ಣ ಮತ್ತು ಅಶ್ವಿನಿ ಆಗಮಿಸಿದ ಸ್ಪೆಷಲ್ ಮಶ್ರೂಮ್ ಚಿಲ್ಲಿ ಮಾಡಿದ್ದಾರೆ. ಅಲ್ಲದೆ ಅಶ್ವಿನಿ ನನ್ನ ಹುಡುಗಿ ಎಂದು ನನ್ನ ಮನಸ್ಸಿಗೆ ಅನಿಸಿದ್ದು ಯಾವಾಗ ಎಂದು ರಿವೀಲ್ ಮಾಡಿದ್ದಾರೆ.
ನವೀನ್ ಮಾತನಾಡಿ ʻʻನನಗೆ ನನ್ನ ಹೆಂಡತಿ ನನ್ನವಳು ಎಂದು ಫೀಲ್ ಆಗಿದ್ದು ಕರಗ ಡ್ಯಾನ್ಸ್ ಸಮಯದಲ್ಲಿ. ಇಡೀ ತಂಡದಲ್ಲಿರುವವರಿಗೆ ಮೇಕಪ್ ಮತ್ತು ಹೇರ್ ಸ್ಟೈಲ್ ಮಾಡಿದ್ದು ನಾನೆ. ಕೊನೆಯಲ್ಲಿ ಫಿನಿಶಿಂಗ್ ಎಂದು ಎಲ್ಲರ ಹಣೆಗೆ ಕುಂಕುಮ ಇಡುತ್ತ ಬರುತ್ತಿದ್ದೆ. ಅಲ್ಲಿದ್ದ ಹುಡುಗರಿಗೆ ಮಾತ್ರವಲ್ಲ ಪಕ್ಕದ್ದಲ್ಲಿದ್ದ ಹುಡುಗಿಯರಿಗೂ ಇಡುತ್ತ ಬರುತ್ತಿದ್ದೆ ಸಾಮಾನ್ಯವಾಗಿ ಇಡುವ ರೀತಿ ಎಲ್ಲ ಹುಡುಗಿಯರು ಇಡಿಸಿಕೊಳ್ಳುತ್ತಿದ್ದರು. ಆದರೆ ಅಶ್ವಿನಿ ನನ್ನ ಎದುರು ಬಂದಾಗ ಇಡಲು ಹಿಂಜರಿದೆ. ಕೈ ನಡುಗುತ್ತಿತ್ತು. ಕಣ್ಣಿನಲ್ಲಿ ಏನೋ ಹೇಳುತ್ತಿದ್ದೆʼʼಎಂದರು.
ಇದನ್ನೂ ಓದಿ: Actress Gautami: ಕಮಲ್ ಹಾಸನ್ ಮಾಜಿ ಪ್ರಿಯತಮೆ ನಟಿ ಗೌತಮಿಗೆ 25 ಕೋಟಿ ರೂ. ವಂಚನೆ!
ಬಳಿಕ ಪತ್ನಿ ಅಶ್ವಿನಿ ಮಾತನಾಡಿ ʻʻನವೀನ್ ಅಲ್ಲಿಂದ ಹೊರಟರು ನನ್ನ ಹಣೆಗೆ ಇಡಲಿಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಪ್ರಶ್ನೆ ಯಾಕೆ ಇವಳಿಗೆ ಮಾತ್ರ ಇಟ್ಟಿಲ್ಲ’ ಎಂದು ಅಶ್ವಿನಿ ಹೇಳಿದಕ್ಕೆ ತಕ್ಷಣವೇ ಮಾಸ್ಟರ್ ಆನಂದ್ ಸೆಟ್‌ನಲ್ಲಿದ್ದ ಅರಿಶಿಣ ಕುಂಕುಮ ತರಿಸಿ ಸಿಂಧೂರ ಇಡಿಸುತ್ತಾರೆ. ಕೊನೆಯಲ್ಲಿ ನವೀನ್ ಪತ್ನಿಗೆ ದೃಷ್ಟಿ ತೆಗೆಯುತ್ತಾರೆ.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ನವೀನ್ ಕೃಷ್ಣ ನಟಿಸುತ್ತಿದ್ದಾರೆ.