Site icon Vistara News

SRGMPS20: ‘ಸರಿಗಮಪ ಸೀಸನ್‌ 20’ರ ಫಿನಾಲೆ ಟ್ರೋಫಿ ಗೆದ್ದ ದರ್ಶನ್ ನಾರಾಯಣ್!

Darshan narayan

ಕನ್ನಡ ಕಿರುತೆರೆಯ ಅತ್ಯಂತ (SRGMPS20) ಜನಪ್ರಿಯ ಸಂಗೀತ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಮಾ. 17ರಂದು ನಡೆದಿದೆ. ಈ ಬಾರಿಯ ಫಿನಾಲೆ ಟ್ರೋಫಿಯನ್ನು ದರ್ಶನ್ ನಾರಾಯಣ್ ಮುಡಿಗೇರಿಸಿಕೊಂಡಿದ್ದಾರೆ.

ಮೊದಲ ರನ್ನರ್ ಅಪ್ ಆಗಿ ರಮೇಶ್ ಲಮಾಣಿ ಹೊರಹೊಮ್ಮಿದ್ದಾರೆ. ಹಾಗೂ ಎರಡನೇ ರನ್ನರ್ ಅಪ್ ಆಗಿ ಶ್ರಾವ್ಯ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ವಿಶೇಷ ಅಂದರೆ ಆ ಕಾರ್ಯಕ್ರಮದ ಮೂಲಕ ಮತ್ತೆ ಜೀ ಕುಟುಂಬಕ್ಕೆ ಗಾಯಕ ರಾಜೇಶ್ ಕೃಷ್ಣನ್ ವಾಪಸ್ಸಾಗಿದ್ದಾರೆ. ಫಿನಾಲೆಯಲ್ಲಿ ಅವರು ಭಾಗಿಯಾಗಿದ್ದರು.

ಇದನ್ನೂ ಓದಿ: SRGMPS20: ಸಪ್ತ ಸಾಗರ ದಾಟುತಿದೆ ಸ್ವರ ಸಂಚಾರ; ಈ ಬಾರಿಯ ಸರಿಗಮಪ ವಿಶೇಷತೆ ಏನು?

ಈ ಬಾರಿಯ ಸರಿಗಮಪ ಸೀಸನ್ 20 ವಿದೇಶಗಳಲ್ಲೂ ಆಡಿಶನ್‌ ನಡೆಸಲಾಗಿತ್ತು. ಈ ಬಾರಿ ವರ್ಲ್ಡ್ ವೈಡ್ ಆಡಿಷನ್ ಮಾಡುವ ಮೂಲಕ ಸರಿಗಮಪ ಹೊಸ ಇತಿಹಾಸವನ್ನು ದಾಖಲಿಸಿತ್ತು.

ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಅರ್ಜುನ್ ಜನ್ಯ, ಹಂಸಲೇಖಾ ಹಾಗೂ ವಿಜಯ್ ಪ್ರಕಾಶ್​ ಅವರು ಇದ್ದರು. ಅನುಶ್ರೀ ಅವರು ಈ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನವನ್ನು ನೀಡಲಾಗಿದೆ.

Exit mobile version