ಬೆಂಗಳೂರು : ʻಸಾಥ್ ನಿಭಾನ ಸಾಥಿಯಾʼ ಧಾರಾವಾಹಿ ಖ್ಯಾತಿಯ ನಟಿ ದೇವೊಲೀನಾ ಭಟ್ಟಾಚಾರ್ಜಿ (Devoleena Bhattacharjee) ಡಿಸೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ನಟಿ ಟ್ರೋಲಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ ನಟಿ. ಮುಸ್ಲಿಂ ಧರ್ಮದ ವ್ಯಕ್ತಿಯನ್ನು ನಟಿ ಮದುವೆಯಾಗಿದ್ದಕ್ಕೆ ʻನಿಮ್ಮ ಮಕ್ಕಳು ಯಾವ ಧರ್ಮಕ್ಕೆ ಸೇರುತ್ತಾರೆʼ ಎಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು.
ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದು ʻʻನನ್ನ ಮಕ್ಕಳು ಹಿಂದೂ ಅಥವಾ ಮುಸ್ಲಿಂ ಎಂದು ಕೇಳುವುದಕ್ಕೆ ನೀವು ಯಾರು? ನಿಮಗೆ ನಿಜವಾಗಿಯೂ ಮಕ್ಕಳ ಬಗ್ಗೆ ಕಾಳಜಿ ಇದ್ದರೆ, ಅನೇಕ ಅನಾಥಾಶ್ರಮಗಳಿವೆ. ನೀವು ಅಲ್ಲಿಗೆ ಹೋಗಿ. ಮಗುವನ್ನು ದತ್ತು ಪಡೆಯಿರಿ ಬಳಿಕ ಹೆಸರು ಮತ್ತು ಧರ್ಮವನ್ನು ನಿರ್ಧರಿಸಿ. ನನ್ನ ಪತಿ, ನನ್ನ ಮಕ್ಕಳು, ನನ್ನ ಧರ್ಮ. ಬಗ್ಗೆ ನೀವು ಯಾರು?ʼʼಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ | Hansika Motwani | ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ: ಮದುವೆ ಫೋಟೊಗಳು ಇಲ್ಲಿವೆ!
ಮದುವೆಯ ಪೋಸ್ಟ್ ಅನ್ನು ಶೇರ್ ಮಾಡಿ ”ನಾನು ಚೆನ್ನಾಗಿದ್ದೇನೆ ಅಥವಾ ಇಲ್ಲವೇ ಎಂದು ಕೇಳಲು ಯಾರೂ ತಲೆಕೆಡಿಸಿಕೊಳ್ಳದಿರುವಾಗ ಆಗ ನೀವು ನನ್ನ ಜತೆ ಇದ್ದೀರಿ. ನಾನು ಬಯಸಿದ ರೀತಿಯಲ್ಲಿ ಸಿಕ್ಕಿದ್ದಕ್ಕೆ ಧನ್ಯವಾದಗಳು. ನಿಮ್ಮ ರಕ್ಷಣೆ ಮತ್ತು ಕಾಳಜಿ ಮತ್ತು ಪ್ರೀತಿಗಾಗಿ ಧನ್ಯವಾದಗಳುʼʼಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Sagar Biligowda | ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ʻಸತ್ಯʼ ಧಾರಾವಾಹಿ ಖ್ಯಾತಿಯ ಅಮುಲ್ ಬೇಬಿ ಕಾರ್ತಿಕ್!